ಮಂಗಳವಾರ, ಫೆಬ್ರವರಿ 28, 2012

ಈ ಅನುಗ್ರಹಗಳು ನಿಮಗೆ ಲಭಿಸಿವೆಯೇ ?


ಅಲ್ಲಾಹನು ಮನುಷ್ಯನಿಗೆ ಹಲವಾರು ವಸ್ತುಗಳನ್ನು ಅನುಗ್ರಹವಾಗಿ ನೀಡಿದ್ದಾನೆ. ಅವನು ಮನುಷ್ಯನನ್ನು ಸೃಷ್ಟಿಸಿರುವುದು ಅವನ ಆರಾಧನೆ ಗೋಸ್ಕರವಾಗಿದೆ. ಅಲ್ಲಾಹನನ್ನು ಆರಾಧಿಸಲಿಕ್ಕಾಗಿ ಮನುಷ್ಯರಿಗೆ ಬೇಕಾಗಿರುವ ಸಕಲ ಏಪ್ರಾಟುಗಳನ್ನೂ ಮಾಡಿದ್ದಾನೆ. ಓವ್ರ ಯಜಮಾನನು ತನ್ನದೇ ಆದ ಸಲಕರಣೆಗಳನ್ನು ಕೆಲಸದಾಳುಗಳಿಗೆ ನೀಡಿ ತನ್ನ ಕೆಲಸಗಳನ್ನು ಮಾಡಿಸುತ್ತಾನೆ. ಕೆಲಸ ದಾಳುಗಳು ಆ ಸಲಕರಣೆಗಳಿಂದ ತನ್ನ ಯಜಮಾನನ ಕೆಲಸಗಳನ್ನು ಮಾಡದೆ ಇನ್ಯಾ ರದೋ ಕೆಲಸಗಳನ್ನು ಮಾಡಿದರೆ ಯಜಮಾನನು ಕೋಪಗೊಳ್ಳುತ್ತಾನೆ. ಕೆಲಸದಾಳುಗಳಿಗೆ ಪಶ್ಚಾತ್ತಾಪ ಪಡುವ ಅವಕಾಶವನ್ನೂ ನೀಡದೆ ಅವರನ್ನು ಶಿಕ್ಷಿಸಲು ಮುಂದಾಗುತ್ತಾನೆ. ಅಲ್ಲಾಹನು ಕೂಡಾ ತನ್ನನ್ನು ಆರಾಧಿಸಲಿಕ್ಕಾಗಿ ತನ್ನ ದಾಸರಿಗೆ ಸಕಲ ವ್ಯವಸ್ಥೆಗಳನ್ನು ಮಾಡಿದ್ದಾನೆ. ಆದರೆ ಮನುಷ್ಯನು ಅವುಗಳಿಂದ ಲಾಭ ಪಡೆದು ಆರಾಧನೆಗೆ ಇತರ ರನ್ನೂ ಅಹ್ರನಾಗಿಸುತ್ತಾನೆ. ಅಲ್ಲಾಹನು ನೀಡಿರುವ ಅನುಗ್ರಹಗಳನ್ನು ತಪ್ಪಾದ ಮಾಗ್ರದಲ್ಲಿ ಉಪ ಯೋಗಿಸುತ್ತಾನೆ. ಆದರೂ ಅಲ್ಲಾಹನು ತಕ್ಷಣ ಅವರನ್ನು ಶಿಕ್ಷಿಸದೆ ಪಶ್ಚಾತ್ತಾಪ ಪಟ್ಟುಕೊಳ್ಳಲು ಅವಕಾಶ ನೀಡುತ್ತಾನೆ. ಪಶ್ಚಾತ್ತಾಪ ಪಡದವರನ್ನು ಶಿಕ್ಷಿಸಲು ಒಂದು ಅವಧಿಯನ್ನೂ ನಿಶ್ಚಯಿಸಿರುತ್ತಾನೆ. ಅಲ್ಲಾಹನು ಪವಿತ್ರ ಕುರ್ಆನಿನಲ್ಲಿ ಹೇಳಿದ್ದಾನೆ, “ಅಲ್ಲಾಹನು ಜನರನ್ನು ಅವರ ಅಕ್ರಮಗಳಿಗಾಗಿ ತಕ್ಷಣ ಶಿಕ್ಷಿಸುತ್ತಿದ್ದರೆ ಭೂಮಿಯ ಮೇಲೆ ಒಂದು ಜೀವಿಯನ್ನೂ ಬಿಡುತ್ತಿರಲಿಲ್ಲ. ಆದರೆ ಅವನು ಎಲ್ಲರಿಗೂ ಒಂದು ನಿಶ್ಚಿತ ಸಮಯದ ವರೆಗೆ ಕಾಲಾವಕಾಶ ನೀಡುತ್ತಾನೆ. ಮುಂದೆ ಆ ಸಮಯ ಬಂದು ಬಿಟ್ಟರೆ ಅದರಿಂದ ಒಂದು ಕ್ಷಣವೂ
ಹಿಂದೆ ಮುಂದೆ ಆಗುವುದಿಲ್ಲ.” (ಅನ್ನಹ್್ಲ-61)
ಪ್ರವಾದಿಯವರು(ಸ) ಮನುಷ್ಯರಿಗೆ ಅಲ್ಲಾಹನು ನೀಡಿರುವ ನಾಲ್ಕು ಅನುಗ್ರಹಗಳ ಕುರಿತು ಹೇಳಿದ್ದಾರೆ, “ನಾಲ್ಕು ವಿಷಯಗಳನ್ನು ಹೊಂದಿದವನು ಇಹ-ಪರಗಳಲ್ಲಿ ಉತ್ತಮವಾದುದನ್ನೇ ಗಳಿಸುವನು. ಕೃತಜÕತೆ ತೋರಿಸುವ ಹೃದಯ, ಅಲ್ಲಾಹನನ್ನು ಸ್ಮರಿಸುತ್ತಿರುವ ನಾಲಗೆ, ಪರೀಕ್ಷೆಯ ಸಂದಭ್ರಗಳಲ್ಲಿ ಸಹನೆ ವಹಿಸುವ ಶರೀರ ಮತ್ತು ತನ್ನ ಶರೀರದಲ್ಲೂ ಪತಿಯ ಸಂಪತ್ತಿನಲ್ಲೂ ವಂಚನೆ ಬಯಸದ ಪತ್ನಿ.”
ವೊದಲನೆಯದಾಗಿ ಪ್ರವಾದಿಯವರು(ಸ) ಹೇಳಿರುವುದು ಹೃದಯದ ಕುರಿತಾಗಿದೆ. “ಓವ್ರ ವ್ಯಕ್ತಿಯ ಬೆಳವಣಿಗೆಯಲ್ಲೂ ಸ್ವಭಾವ ಗುಣಗಳಲ್ಲೂ ಹೃದಯದಷ್ಟು ಸ್ವಾದೀನ ಇರುವ ಇನ್ನೊಂದಂಗ ವಿಲ್ಲ. ಸಮಸ್ತ ಶರೀರವನ್ನು ನಿಯಂತ್ರಿಸುವುದು ಹೃದಯವಾಗಿದೆ. ಹೃದಯದ ಆಜಾÕನುಸಾರ ಶರೀರವು ವತ್ರಿಸುತ್ತದೆ. ಶರೀರದ ಅಂಗಾಂಗಗಳಿಗೆ ಆಜೆÕ ಲಭಿಸುವುದು ಹೃದಯದಿಂದಾಗಿದೆ. ಮನುಷ್ಯರ ವತ್ರನೆಗಳು, ಕಮ್ರಗಳು ಹೃದಯದ ತೀಮ್ರಾನಕ್ಕೆ ಹೊಂದಿಕೊಂಡಿರುತ್ತವೆ. ಪ್ರವಾದಿ ಯವರು(ಸ) ಹೇಳಿದರು, “ತಿಳಿಯಿರಿ, ಶರೀರದಲ್ಲಿ ಮಾಂಸದ ಒಂದು ಮುದ್ದೆಯಿದೆ. ಅದು ಉತ್ತಮ ವಾದರೆ ಶರೀರ ಪÇತ್ರಿ ಉತ್ತಮವಾಗುತ್ತದೆ. ಅದು ಕೆಟ್ಟು ಹೋದರೆ ಶರೀರ ಪÇತ್ರಿ ಕೆಟ್ಟು ಹೋಗುತ್ತದೆ. ಅದಾಗಿದೆ ಹೃದಯ.”
ಕೃತಜÕತೆ ಬಯಸುವ ಹೃದಯವು ಮನುಷ್ಯನಿಗೆ ಉತ್ತಮವಾದುದನ್ನು ಗಳಿಸಿಕೊಡುತ್ತದೆ. ಅಲ್ಲಾಹನ ಮಹಿಮೆಯನ್ನು ಅರಿತು ಅವನ ಅನುಗ್ರಹಗಳಿಗೆ ಹೃದಯದಲ್ಲಿ ಕೃತಜÕತಾ ಭಾವ ಮೂಡಿದರೆ ಶರೀರವೂ ಅದನ್ನು ಅನುಸರಿಸುತ್ತದೆ. ಹಾಗೆ ಅವನ ಎಲ್ಲಾ ಕಮ್ರಗಳೂ ಅಲ್ಲಾಹನಿಗೆ ಇಷ್ಟವಾಗಿ ರುವುದೂ, ಸ್ವಗ್ರ ಪ್ರಾಪ್ತಿಗೆ ಅಹ್ರವಾದುದೂ ಆಗುತ್ತದೆ. ಇದರಿಂದಾಗಿ ಈ ಅನುಗ್ರಹಗಳ ಪೈಕಿ ಹೃದಯಕ್ಕೆ ವೊದಲ ಆದ್ಯತೆ ನೀಡಲಾಗಿದೆ.
ಹೃದಯದ ಬಳಿಕದ ಸ್ಥಾನ ನಾಲಗೆಗಾಗಿದೆ. ಓವ್ರನ ವಿಜಯವನ್ನೂ ಪರಾಜಯವನ್ನೂ ನಿಣ್ರಯಿಸುವಲ್ಲಿ ಹೃದಯದಂತೆಯೇ ನಾಲಗೆಗೂ ಪಾಲಿದೆ. ನಾಲಗೆ ಉತ್ತಮವಾಗಿಲ್ಲದಿದ್ದಲ್ಲಿ ಇತರ ಉತ್ತಮ ಗುಣಗಳಿಂದೇನೂ ಪ್ರಯೋಜನವಿಲ್ಲ. ನಾವು ಮಾಡಿರುವ ಉತ್ತಮ ಕಮ್ರಗಳನ್ನು ನಾಲಗೆಯ ಪೆÇೀಲಿತನವು ಅಳಿಸಿ ಹಾಕುತ್ತದೆ. ಪ್ರವಾದಿಯವರು(ಸ) ಹೇಳಿದರು, “ಹೃದಯವು ಸರಿಯಾಗುವ ತನಕ ಯಾವುದೇ ದಾಸನ ವಿಶ್ವಾಸವು ಸರಿಯಾಗಲಿಕ್ಕಿಲ್ಲ. ನಾಲಗೆಯು ಉತ್ತಮ ಗೊಳ್ಳುವ ತನಕ ಹೃದಯವೂ ಉತ್ತಮಗೊಳ್ಳಲಿಕ್ಕಿಲ್ಲ.”
ನಾಲಗೆಯ ಕೆಟ್ಟ ಕೆಲಸಗಳಿಂದಾಗಿ ಹಲವಾರು ಅನಾಹುತಗಳು, ಕೆಟ್ಟ ಕೆಲಸಗಳು ನಡೆಯುತ್ತವೆ. ಅಲಕ್ಷ್ಯ ತೋರಿದರೆ ಕೆಡುಕನ್ನೇ ಉಂಟು ಮಾಡುವ ಈ ಅಂಗಾಂಗವನ್ನು ಒಳಿತಿನ ಹಾದಿಯಲ್ಲಿ ಉಪ ಯೋಗಿಸುವುದು ಇಂದಿನ ಸಮಾಜದಲ್ಲಿ ಕಷ್ಟ ಸಾಧ್ಯವಾದ ಕೆಲಸವಾಗಿದೆ. ಆದ್ದರಿಂದಲೇ ಪ್ರವಾದಿ ವಯ್ರರು(ಸ) ನಾಲಗೆಯ ಬಗ್ಗೆ ಖಾತರಿ ನೀಡಿ ದರೆ ಸ್ವಗ್ರದ ವಾಗ್ದಾನ ನೀಡುತ್ತೇನೆ ಎಂದಿದ್ದರು.
ಮೂರನೆಯದಾಗಿ ಪ್ರಸ್ತಾಪಿಸಲ್ಪಟ್ಟಿರುವ ಅನು ಗ್ರಹ ಪರೀಕ್ಷೆಯ ವೇಳೆಗಳಲ್ಲಿ ಸಹನೆ ವಹಿಸುವ ಶರೀರವಾಗಿದೆ. ಜೀವನವು ಸುಖ-ದುಃಖಗಳ ಸಂಗಮವಾಗಿದೆ. ಜೀವನ ನಡೆಸಲು ತೀಮ್ರಾನಿಸಿ ದವನಿಗೆ ಸುಖ ದುಃಖಗಳನ್ನು ಅನುಭವಿಸಲೇ ಬೇಕು. ಅಲ್ಲಾಹನು ಮನುಷ್ಯರನ್ನು ಪರೀಕ್ಷಿಸುತ್ತಿರು ತ್ತಾನೆ. ಕುರ್ಆನ್ ಹೇಳುತ್ತದೆ “ನಾವು ನಿಮ್ಮನ್ನು ಭಯಾಶಂಕೆ ಹಸಿವು, ಧನಹಾನಿ, ಜೀವಹಾನಿ ಮತ್ತು ಉತ್ಪನ್ನಗಳನ್ನು ನಾಶಕ್ಕೊಳಪಡಿಸಿ ಪರೀಕ್ಷಿ ಸಿಯೇ ತೀರುವೆವು. ಇಂತಹ ಸನ್ನಿವೇಶಗಳಲ್ಲಿ ತಾಳ್ಮೆ ವಹಿಸಿದವರಿಗೆ ಸುವಾತ್ರೆ ನೀಡಿರಿ.” (ಅಲ್ಬಕರ: 155) ಈ ಸಂದಭ್ರ ಗಳಲ್ಲೆಲ್ಲಾ ಸಹನೆ ವಹಿಸಿದರೆ ನಾಳೆ ಪರಲೋಕದಲ್ಲಿ ಸ್ವಗ್ರ ಪ್ರಾಪ್ತಿಗದು ಹೇತುವಾಗಬಹುದು. ಪ್ರವಾದಿಯವರು(ಸ) ಹೇಳಿ ದರು, “ಪರೀಕ್ಷೆಗಳಲ್ಲಿ ತಾಳ್ಮೆ ವಹಿಸುವವನಿಗೆ ಅಲ್ಲಾಹನು ಹೆಚ್ಚು ಹೆಚ್ಚು ಸಹನಾಶೀಲತೆ ನೀಡಿ ಅನುಗ್ರಹಿಸುವನು. ಸಹನೆಯಷ್ಟು ವಿಶಿಷ್ಟವೂ ವಿಶಾಲವೂ ಆದ ಯಾವುದೇ ಅನುಗ್ರಹವನ್ನು ಅಲ್ಲಾಹನು ಯಾರಿಗೂ ನೀಡಿಲ್ಲ.”
ನಾಲ್ಕನೆಯ ಅನುಗ್ರಹ ಸಚ್ಚಾರಿತ್ರ್ಯವಂತೆಯಾದ ಪತ್ನಿಯಾಗಿ ದ್ದಾಳೆ. ಇಂತಹ ಪತ್ನಿಯನ್ನು ಜೀವನ ಸಂಗಾತಿಯಾಗಿ ಪಡೆದ ವನು ಇಹದಲ್ಲೂ ಪರದಲ್ಲೂ ವಿಜಯಿಯಾಗುವನು. ಜೀವನವನ್ನು ಸಂತೋಷದಾಯಕವೂ ಅಥ್ರಪÇಣ್ರವೂ ಆಗಿಸುವಲ್ಲಿ ಪತ್ನಿಗೆ ದೊಡ್ಡ ಪಾತ್ರವಿದೆ. ಜೀವನದಲ್ಲಿ ಸಂತೋಷವನ್ನು ನೀಡದ ದುಃಖವನ್ನೇ ಸನ್ಮಾನಿಸುವ ಸ್ತ್ರೀಯರು ಅಲ್ಲಾಹನ ಶಾಪಕ್ಕೆ ಅಹ್ರರಾಗುವರು. ಪ್ರವಾದಿಯವರು(ಸ) ಮೂರು ವಿಷಯಗಳಲ್ಲಿ ಶಕುನವಿದೆ ಎಂದಿದ್ದಾರೆ. ಅವುಗಳ ಪೈಕಿ ಒಂದು, ಅನುಸರಣೆ ಯಿಲ್ಲದ ಸ್ತ್ರೀಯಾಗಿದ್ದಾಳೆ. ಆದ್ದರಿಂದ ಸ್ತ್ರೀಯರು, ಪ್ರವಾದಿ ವಯ್ರರು(ಸ) ಹೇಳಿರುವಂತೆ ಶಕುನಿಗಳಾಗಬಾರದು.
ಅಲ್ಲಾಹನು ನಮಗೆ ದಯಪಾಲಿಸಿರುವಂತಹ ಎಲ್ಲಾ ಅನುಗ್ರಹಗಳಿಗೆ ಕೃತಜÕತೆ ಅಪ್ರಿಸುತ್ತಾ ಆ ಮೂಲಕ ಶಾಶ್ವತವಾದ ಸ್ವಗ್ರವನ್ನು ಗಳಿಸಲು ನಾವು ಪ್ರಯತ್ನಿಸಬೇಕಾಗಿದೆ. ಸ್ವಗ್ರಕ್ಕಿರುವ ದಾರಿಯನ್ನು ಅಲ್ಲಾಹನು ತೋರಿಸಿಕೊಟ್ಟಿರುವಾಗ ನಾವೇಕೆ ಅಡ್ಡ ದಾರಿ ಹಿಡಿಯುವುದು?

ಸೋಮವಾರ, ಫೆಬ್ರವರಿ 13, 2012

ಈ ಗುಣವು ನಿಮ್ಮಲ್ಲಿದೆಯೇ?


ಲ್ಲಾಹನು ಮನುಷ್ಯರಿಗೆ ಹಲವಾರು ಗುಣಗಳನ್ನೂ ಭಾವನೆಗಳನ್ನೂ ನೀಡಿ ಗೌರವಿಸಿದ್ದಾನೆ. ಪ್ರಾಣಿಗಳಿಗಿಲ್ಲದ ಹಲವಾರು ವಿಶೇಷತೆಗಳು ಮನುಷ್ಯನಿಗೆ ಲಭಿಸಿವೆ. ಆದ್ದರಿಂದಲೇ ಮನುಷ್ಯನು ಉನ್ನತ ಸ್ಥಾನ ಪಡೆದಿದ್ದಾನೆ. ಆ ಗುಣಗಳ ಪೈಕಿ ಮಹತ್ವವೂ ಉನ್ನತವೂ ಆದ ಒಂದು ಗುಣವಾಗಿದೆ ಲಜ್ಜೆ. ಇದು ಮೃಗಗಳಲ್ಲಿ ಗೋಚರವಾಗದ ಒಂದು ಗುಣವಾಗಿದೆ. ಮನುಷ್ಯನಲ್ಲಿ ಲಜ್ಜೆಯು ಇಲ್ಲವಾದಾಗ ಅವನು ಮೃಗಗಳಿಗೆ ಹತ್ತಿರ ವಾಗುತ್ತಾನೆ.
ಲಜ್ಜೆಯು ಮನುಷ್ಯನನ್ನು ಅಶ್ಲೀಲ ಕೃತ್ಯಗಳಿಂದ ತಡೆಯುವ, ಒಳಿತಿನಲ್ಲಿ ದೃಢವಾಗಿ ನಿಲ್ಲಲು ಪ್ರೇರೇಪಿಸುವ ಶ್ರೇಷ್ಠ ಗುಣವಾಗಿದೆ. ಇದು ಇತರ ಜೀವಿಗಳಿಂದ ಮನುಷ್ಯನನ್ನು ಪ್ರತ್ಯೇಕಿಸುತ್ತದೆ. ಲಜ್ಜೆಯು ಮನುಷ್ಯನಿಗೆ ಜನ್ಮಸಿದ್ಧಿಯಾಗಿ ಲಭಿಸುವ ಗುಣವಾಗಿದೆ. ಕೆಡುಕುಗಳನ್ನು ಮಾಡಲಿಕ್ಕಿರುವ ಹಿಂಜರಿಕೆ, ಅಶ್ಲೀಲತೆಯೊಂದಿಗಿನ ಅಸಹ್ಯ ಭಾವನೆ, ಒಳತಿನೊಂದಿಗಿನ ಸಹಕಾರ ವೊದಲಾದ ಅನೇಕ ಸದ್ಗುಣಗಳು ಲಜ್ಜೆಯ ಕೊಡುಗೆಗಳಾಗಿವೆ.
ಲಜ್ಜೆಯು ಒಂದು ಕಾವಲುಗಾರನಂತೆ ವಿಶ್ವಾಸ ವನ್ನೂ, ಚಾರಿತ್ರ್ಯವನ್ನೂ ಕಾವಲು ಕಾಯುತ್ತದೆ. ಅದು ನಷ್ಟವಾಗದಂತೆ ಕಾಪಾಡುತ್ತದೆ. ಲಜ್ಜೆಯಿಲ್ಲದವನಿಗೆ ಸತ್ಯವಿಶ್ವಾಸದಲ್ಲಿ ದೃಢವಾಗಿ ನಿಲ್ಲಲು ಸಾಧ್ಯವಿಲ್ಲ. ಧಾರ್ಮಿಕ ಪ್ರಜ್ಞೆಯು ಅವನಿಂದ ಕಳೆದು ಹೋಗುತ್ತದೆ. ಪ್ರವಾದಿಯವರು(ಸ) ಹೇಳಿದ್ದಾರೆ, “ಲಜ್ಜೆ ಮತ್ತು ಸತ್ಯವಿಶ್ವಾಸವು ಪರಸ್ಪರ ಮಿತ್ರವಾಗಿದೆ. ಅವುಗಳ ಪೈಕಿ ಒಂದು ನಷ್ಟವಾದರೆ ಇನ್ನೊಂದು ನಷ್ಟ ಹೊಂದುತ್ತದೆ.” ಲಜ್ಜೆ ಇಲ್ಲದವ ನಲ್ಲಿ ಈಮಾನ್ ದುಬ್ರಲವಾಗಿರುತ್ತದೆ. ಅವನ ವಿಶ್ವಾಸಕ್ಕೆ ಪರಿಪÇಣ್ರತೆ ಇರುವುದಿಲ್ಲ. ಎಪ್ಪತ್ತು ಚಿಲ್ಲರೆ ಶಾಖೆಗಳಿರುವ ಈಮಾನಿನಲ್ಲಿ ಲಜ್ಜೆಯು ಕೂಡಾ ಒಂದು ಭಾಗವಾಗಿದೆ. ಆ ಒಂದು ಭಾಗವು ನಷ್ಟವಾದರೆ ಈಮಾನ್ ಕೂಡಾ ದುಬ್ರಲವಾಗುತ್ತದೆ. ಈಮಾನ್ ದುಬ್ರಲವಾಗು ವಾಗ ಹಲವಾರು ಪಾಪ ಕೃತ್ಯಗಳ ಕಡೆಗೆ ನಮ್ಮ ಆತ್ಮವು ವಾಲುತ್ತದೆ.
ಲಜ್ಜೆ ರಹಿತ ಸ್ವಭಾವವು ಓವ್ರನ ಧಾಮ್ರಿಕ ಜೀವನವನ್ನು ಹೇಗೆ ನಾಶಪಡಿಸುತ್ತದೆ ಎಂಬುದರ ಕುರಿತು ಇಬ್ನು ಉಮರ್(ರ) ಉದ್ಧರಿಸಿದ ಒಂದು ಪ್ರವಾದಿ ವಚನವು ಸ್ಪಷ್ಟಪಡಿಸುತ್ತದೆ: “ಅಲ್ಲಾಹನು ತನ್ನ ಓವ್ರ ದಾಸನನ್ನು ನಾಶ ಪಡಿಸಲು ಬಯಸಿದರೆ ವೊದಲು ಅವನಿಂದ ಲಜ್ಜೆಯನ್ನು ಹಿಂಪಡೆದುಕೊಳ್ಳುತ್ತಾನೆ. ಲಜ್ಜೆಯು ಓವ್ರನಿಗೆ ನಷ್ಟ ಹೊಂದಿದರೆ ಬಳಿಕ ಅವನು ದ್ವೇಷಿಸುವವನು ಮತ್ತು ದ್ವೇಷಿಸಲ್ಪಡುವವನಾಗಿ ಮಾತ್ರ ಕಾಣಲು ಸಾಧ್ಯ. ಓವ್ರನು ದ್ವೇಷಿಸುವವನೂ ದ್ವೇಷಿಸಲ್ಪಡುವವನೂ ಆಗಿ ಮಾಪ್ರಟ್ಟರೆ ಅವನಿಂದ ಹೊಣೆಗಾರಿಕೆಯ ಪ್ರಜೆÕಯು ಕಳೆದು ಹೋಗುತ್ತದೆ. ಹೊಣೆಗಾರಿಕೆಯ ಪ್ರಜೆÕಯು ನಷ್ಟವಾದರೆ ಅವನು ವಂಚಕನೂ ವಂಚಿಸಲ್ಪಡುವವನೂ ಆಗಿ ಬದಲಾಗುವವನು. ವಂಚಕನೂ ವಂಚಿಸಲ್ಪಡುವವನೂ ಆಗಿ ಮಾರ್ಪಟ್ಟರೆ ಅವನಲ್ಲಿ ಕರುಣೆ ಎಂಬ ಭಾವನೆಯು ಮಾಯವಾಗುತ್ತದೆ. ಕರುಣೆಯು ನಷ್ಟವಾದರೆ ಅವನು ಶಪಿಸಲ್ಪಡುವ ವ್ಯಕ್ತಿಯಾಗಿ ಬದಲಾಗುತ್ತಾನೆ. ಶಪಿಸಲ್ಪಟ್ಟವನಾದರೆ ಇಸ್ಲಾಮಿನ ಪಾಶವು ಅವನಿಂದ ಕಡಿಯಲ್ಪಡುತ್ತದೆ.”
ಲಜ್ಜೆಯು ಮನುಷ್ಯನ ಒಳಿತುಗಳನ್ನು ಕಾಪಾಡುತ್ತದೆ. ಮುತ್ತುಗಳಿಂದ ಹೆಣೆಯಲ್ಪಟ್ಟ ಸರದಂತೆ. ಸರವು ತುಂಡಾದರೆ ಮುತ್ತುಗಳೆಲ್ಲವೂ ಚೆಲ್ಲಾಪಿಲ್ಲಿ ಯಾಗಿ ಬೀಳುತ್ತವೆ. ಅದೇ ರೀತಿ ಲಜ್ಜೆಯು ನಷ್ಟ ವಾದರೆ ಒಳಿತುಗಳೆಲ್ಲವೂ ಕಳೆದು ಹೋಗುತ್ತವೆÉ. ಕೆಡುಕುಗಳನ್ನು ಮಾಡುವಾಗ ಉಂಟಾಗುವ ಮಾನ ಸಿಕ ಹಿಂಜರಿಕೆಯನ್ನು ಅವನು ಕಳೆದುಕೊಳ್ಳುತ್ತಾನೆ. ಪ್ರವಾದಿಯವರು(ಸ) ಹೇಳಿದರು, “ಪೂರ್ವ ಪ್ರವಾದಿಗಳ ಮಾತುಗಳಿಂದ ಜನರಿಗೆ ಲಭಿಸಿದ ಸಂದೇಶವು ಇದಾಗಿದೆ. ನಿಮಗೆ ಲಜ್ಜೆಯಿಲ್ಲದಿದ್ದರೆ ಸ್ವೇಚ್ಛೆಯಂತೆ ವತ್ರಿಸಿರಿ.”
ಲಜ್ಜೆಯ ಕುರಿತು ಪ್ರವಾದಿಯವರು(ಸ) ತಮ್ಮ ಸಂಗಾತಿಗಳಿಗೆ ವಿವಿಧ ಸಂದಭ್ರಗಳಲ್ಲಿ ಉಪದೇಶಿ ಸಿದ್ದಾರೆ. ಸಹಾಬಿಗಳ ಜೀವನವು ಲಜ್ಜಾರಹಿತ ವಾಗಿರಲಿಲ್ಲ. ಲಜ್ಜೆ ಎಂಬ ಗುಣವನ್ನೇ ಅರಿಯದ ಹಲವಾರು ಮಂದಿ ಇಸ್ಲಾಮಿಗೆ ಆಗಮಿಸುವುದ ರೊಂದಿಗೆ ಲಜ್ಜೆಯ ಸಾಕಾರ ಮೂತ್ರಿಗಳಾಗಿ ಬದಲಾದರು. ಪ್ರವಾದಿಯವರು(ಸ) ಹೇಳಿದರು, “ಎಲ್ಲಾ ಧಮ್ರಗಳಿಗೂ ಒಂದು ಸ್ವಭಾವವಿದೆ. ಇಸ್ಲಾಮಿನ ಸ್ವಭಾವವು ಲಜ್ಜೆಯಾಗಿದೆ.”
ಲಜ್ಜೆ ಎಂದರೆ, ಜನರಿಂದ ಬೇರೆಯಾಗಿ ಯಾವುದಾದರೊಂದು ಮೂಲೆಯಲ್ಲಿ ನಾಚಿಕೆಯಿಂದ ತಲೆ ತಗ್ಗಿಸಿ ಕುಳಿತುಕೊಳ್ಳುವುದಲ್ಲ. ಅದು ಜೀವನದ ಎಲ್ಲಾ ರಂಗಗಳನ್ನೂ ಸ್ಪಶ್ರಿಸುವ ವಿಶಾಲವಾದ ಸ್ವಭಾವ ಸಂಸ್ಕರಣೆಯಾಗಿದೆ. ಶರೀರ ವನ್ನೂ ಅದರಲ್ಲಿರುವ ಎಲ್ಲಾ ಅಂಗಗಳನ್ನೂ ಕೆಡುಕುಗಳಿಂದ ರಕ್ಷಿಸಲು ಲಜ್ಜೆಯೆಂಬ ಸ್ವಭಾವಕ್ಕೆ ಸಾಧ್ಯವಿದೆ. ಲಜ್ಜೆ ಇರುವವನ ನಾಲಗೆಯಲ್ಲಿ ಅಶ್ಲೀಲ ಮಾತುಗಳು ಹೊರಡಲಿಕ್ಕಿಲ್ಲ. ಅವನ ಕಣ್ಣುಗಳು ಅಶ್ಲೀಲತೆಗೆ ಸಾಕ್ಷಿಯಾಗಲಿಕ್ಕಿಲ್ಲ. ಅವನ ಉದರವು ಅಕ್ರಮ ಸಂಪಾದನೆಗೆ ಸಂಗ್ರಹಾಲಯ ವಾಗಲಿಕ್ಕಿಲ್ಲ. ಒಟ್ಟಿನಲ್ಲಿ ಅವನ ಇಡೀ ದೇಹವು ನಿಷಿದ್ಧದಿಂದ ಮುಕ್ತವಾಗಿರುತ್ತದೆ.
ಲಜ್ಜೆಯು ನಷ್ಟವಾದಾಗ ಎಲ್ಲಾ ಪಾಪ ಕೃತ್ಯ ಗಳನ್ನು ಮಾಡಲು ಮನುಷ್ಯನು ಮುಂದಾಗುತ್ತಾನೆ. ತಂದೆ ಮಕ್ಕಳೆಂಬ ಸಂಬಂಧವನ್ನು ಮರೆಯುತ್ತಾನೆ. ಪ್ರಾಣಿಗಳಂತೆ ಕಂಡವರ ಮೇಲೆ ಲೈಂಗಿಕ ತೃಷೆಯನ್ನು ತೀರಿಸುತ್ತಾನೆ. ಅವುಗಳಿಗೆ ತಾಯಿ, ಮಗಳು, ತಂದೆ, ಮಗ ಎಂಬ ತಾರತಮ್ಯ ಇರುವುದಿಲ್ಲ. ಅದೇ ರೀತಿ ಇಂದು ಕೂಡಾ ಮನುಷ್ಯರು ವತ್ರಿಸುತ್ತಿದ್ದಾರೆ. ಪ್ರಾಯ ಪÇತ್ರಿ ಯಾದ ಮಗಳನ್ನು ತಂದೆಯ ಬಳಿ ಬಿಟ್ಟು ಹೋಗಲಿಕ್ಕಿರುವ ತಾಯಿಯ ಹಿಂಜರಿಕೆಯು ಲಜ್ಜೆ ನಷ್ಟವಾದ ಸಮಾಜವನ್ನು ಅನಾವರಣ ಗೊಳಿಸುತ್ತದೆ. ಲಜ್ಜೆ ಇಲ್ಲದವರು ಪಾಪಕೃತ್ಯಗಳನ್ನು ಮಾಡುವಾಗ ಅವರಿಗೆ ಸ್ಥಳದ ಪ್ರಜೆÕಯೂ ಇರು ವುದಿಲ್ಲ. ಎಲ್ಲರೂ ನೋಡುತ್ತಾರೆ ಎಂಬ ಸಾಮಾನ್ಯ ಜ್ಞಾನ ಅವರಲ್ಲಿರುವುದಿಲ್ಲ. ಕಾರಣ ಲಜ್ಜೆ ನಷ್ಟವಾದುದರಿಂದ ಅವರ ಕಣ್ಣು ಕುರುಡಾಗಿರುತ್ತದೆ.
ಇಸ್ಲಾಮ್ ಲಜ್ಜೆಗೆ ಹೆಚ್ಚಿನ ಮಹತ್ವ ನೀಡಿರು ವುದು ಇದೇ ಕಾರಣದಿಂದಾಗಿದೆ. ಪ್ರವಾದಿ ಯವರು(ಸ) ಹೇಳಿದರು, “ಲಜ್ಜೆ ಎಂಬ ಗುಣವು ಒಳಿತನ್ನಲ್ಲದೆ ಬೇರೇನನ್ನೂ ತರುವುದಿಲ್ಲ” ಅಲ್ಲಾಹನ ಆಜೆÕಗಳನ್ನು ಮಾನಸಿಕವಾಗಿಯೂ ಶಾರೀರಿಕ ವಾಗಿಯೂ ಒಪ್ಪಿಕೊಳ್ಳಲು ಸಾಧ್ಯವಾಗಬೇಕು. ಅವನ ನಿರ್ದೇಶನಗಳನ್ನು ಮನಸ್ಸು, ಮಾತು, ಕಮ್ರಗಳಿಂದ ಜೀವಂತಗೊಳಿಸಬೇಕು. ಲಜ್ಜೆಯೆಂಬ ಆ ಶ್ರೇಷ್ಠ ಗುಣವನ್ನು ಮೈಗೂಡಿಸಿಕೊಂಡು ವರ್ತಿಸುವಾಗ ನಮ್ಮ ಕಮ್ರಗಳಿಗೆ ಸಾಫಲ್ಯವು ಪ್ರಾಪ್ತಿಯಾಗುತ್ತದೆ.

ಶುಕ್ರವಾರ, ಫೆಬ್ರವರಿ 10, 2012

ಕಅಬಾಲಯದಲ್ಲಿ ವಿಗ್ರಹಗಳಿದ್ದಾಗ ಪ್ರವಾದಿ (ಸ ) ಹೆಣ್ಣು ಶಿಶುವಿನ ಬಗ್ಗೆ ಮಾತಾಡಿದ್ದೇಕೆ?


ಎಲ್ಲಾ ಪ್ರವಾದಿಗಳು ಅಲ್ಲಾಹನ ಪ್ರತಿನಿಧಿಗಳಾಗಿ ಈ ಭೂಮಿಗೆ ಆಗಮಿಸಿದ್ದಾರೆ. ಧಮ್ರ ಪ್ರಚಾರ ಎಂಬ ಮಹೋನ್ನತ ಹೊಣೆ ಗಾರಿಕೆಯು ಅವರ ಮೇಲಿತ್ತು. ಧಮ್ರ ಪ್ರಚಾರಕ್ಕಾಗಿ ಅವರು ಆರಿಸಿದ ಮಾಧ್ಯಮವು ಸಂವಾದಗಳಾಗಿದ್ದವು. ಸಂದಭ್ರಕ್ಕೆ ತಕ್ಕಂತೆ ಅವರ ಸಂವಾದಗಳಲ್ಲಿ ಬದಲಾವಣೆಯಾಗುತ್ತಿ ದ್ದವು. ಆದರೆ ಆ ಸಂವಾದಗಳ ಮೂಲ ವಿಷಯಗಳಲ್ಲಿ ಯಾವುದೇ ಬದಲಾವಣೆಯಾಗುತ್ತಿರಲಿಲ್ಲ.
ಪ್ರವಾದಿಗಳು ಏಕದೇವತ್ವದೆಡೆಗಿನ ಕರೆಯನ್ನು ತಮ್ಮ ಧಮ್ರಪ್ರಚಾರದ ಮೂಲವನ್ನಾಗಿಸಿದರು. ವಿಶಾಲವೂ ಸಮಗ್ರವೂ ಆದ ಒಂದು ಸಿದ್ಧಾಂತದ ಕಡೆಗೆ ಜನರನ್ನು ಆಹ್ವಾನಿಸಿದರು. (21: 25) ಆದ್ದರಿಂದ ಪ್ರವಾದಿಗಳ ಆಗಮನದ ಉದ್ದೇಶವು ಏನಾಗಿತ್ತೆಂದು ಈ ಸೂಕ್ತವು ತಿಳಿಸುತ್ತದೆ.
ಈ ಭೂಮಿಗೆ ಕಳುಹಿಸಲ್ಪಟ್ಟ ಎಲ್ಲಾ ಪ್ರವಾದಿಗಳೂ ಕೇವಲ ಆರಾಧನಾ ವಿಷಯಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರು ಜನಪರ ವಾದ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಿ ದ್ದರು. ಅವರು ಆ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ತೌಹೀದನ್ನು (ಏಕದೇವತ್ವ) ಕಂಡಿದ್ದರು. ಪ್ರವಾದಿಗಳ ಕಾಯ್ರ ರಂಗಗಳು ಕೇವಲ ಮಸೀದಿ ಗಳಿಗೆ ಸೀಮಿತವಾಗಿರದೆ ಜನರ ಸಾಮಾಜಿಕ, ಸಾಂಸ್ಕøತಿಕ, ರಾಜಕೀಯ, ಆಥ್ರಿಕ ರಂಗಗಳನ್ನು ಆವರಿಸಿದ್ದವು. ಜನರ ಜೀವನದ ಯಾವುದಾದರೂ ರಂಗದಲ್ಲಿ ದೇವೇತರ ಶಕ್ತಿಗಳ ಪ್ರಭಾವ ಉಂಟಾದಾಗ ಅದರ ವಿರುದ್ಧ ಧ್ವನಿ ಎತ್ತದ ಯಾವುದೇ ಪ್ರವಾದಿಗಳು ಈ ಜಗತ್ತಿಗೆ ಬರಲಿಲ್ಲ. ಅವರು ಹೆಚ್ಚು ಒತ್ತು ನೀಡಿದ್ದೂ ಈ ರೀತಿಯ ಶಕ್ತಿಗಳ ದಮನಕ್ಕೆ ಆಗಿತ್ತು. ಅದು ಬಹುದೇವ ರಾಧನೆ ಆಗಿರಬಹುದು, ದೇಹೇಚ್ಛೆಯೂ ಅಹಂಕಾರವೂ ಆಗಿರಬಹುದು, ಸಾಮ್ರಾಜ್ಯಶಾಹಿತ್ವವೂ ಪÅರೋಹಿತ ಶಾಹಿಯೂ ಆಗಿರಬಹುದು. ಒಟ್ಟಿನಲ್ಲಿ ದೇವಾರಾಧನೆಯಿಂದ ತಡೆಯುವ ಎಲ್ಲಾ ಸಿದ್ಧಾಂತಗಳೂ ವಿಚಾರಗಳೂ ಪ್ರವಾದಿಗಳ ಹೋರಾಟಗಳಿಗೆ ಗುರಿ ಯಾಗಿದ್ದವು.
ಎಲ್ಲಾ ಕಾಲಗಳಲ್ಲೂ ಒಂದೇ ರೀತಿಯ ಕೆಡುಕುಗಳು ತಾಂಡವ ವಾಡುತ್ತಿರಲಿಲ್ಲ. ಒಂದು ಕಾಲದಲ್ಲಿ ಫಿರ್ಔನನ ಸಾಮ್ರಾಜ್ಯತ್ವವಾದರೆ ಮತ್ತೊಂದು ಕಾಲದಲ್ಲಿ ಆಝರ್ನ ಪÅರೋಹಿತಶಾಹಿಯಾಗಿತ್ತು. ಲೂತ್ ಜನಾಂಗದ ಸಲಿಂಗರತಿಯು ಒಂದು ಕಾಲದಲ್ಲಾದರೆ, ಶುಐಬ್ರ(ಅ) ಜನತೆಯ ಅಳತೆಯಲ್ಲೂ ತೂಕದಲ್ಲೂ ವಂಚಿಸುವ ಸ್ವಭಾವವು ಮಗದೊಂದು ಕಾಲದಲ್ಲಾಗಿತ್ತು. ಈ ಎಲ್ಲಾ ಕೆಡುಕುಗಳ ವಿರುದ್ಧ ಆ ಕಾಲಗಳಲ್ಲಿ ಆಗಮಿಸಿದ ಪ್ರವಾದಿಗಳು ಧ್ವನಿ ಎತ್ತಿದ್ದಾರೆ. ಅವರ ಹೋರಾಟಗಳ ಶೈಲಿಯು ವಿಭಿನ್ನ ವಾಗಿತ್ತು. ಆದರೆ ಅದೆಲ್ಲವೂ ಏಕದೇವ ತ್ವದ ತಳಹದಿಯಲ್ಲಾಗಿತ್ತು.
ಪ್ರವಾದಿ ಇಬ್ರಾಹೀಮ್(ಅ) ಆ ಕಾಲದ ಆಧ್ಯಾತ್ಮಿಕತೆಗೂ ಆಡಳಿತ ವಗ್ರಕ್ಕೂ ನಡುವೆ ಇದ್ದ ಮೈತ್ರಿಯ ವಿರುದ್ಧ ಹೋರಾಡಿದರು. ಬಹು ದೇವಾರಾಧನೆಯನ್ನು ವಿರೋಧಿಸಿ ದಾಗಲೂ ವಿಗ್ರಹಗಳನ್ನು ನಾಶಪಡಿಸಿ ದಾಗಲೂ ನಮ್ರೂದ್ ಕುಪಿತನಾದದ್ದು ಈ ಮೈತ್ರಿಯಿಂದಾಗಿದೆ. ಫಿರ್ಔನ್ನ ಆಡಳಿತಕ್ಕೆ ಕಣ್ಣೋಡಿಸುವುದಾದರೆ ಇದೇ ರೀತಿಯ ಮೈತ್ರಿ ಕಾಣಲು ಸಾಧ್ಯ. ಮೂಸಾರ(ಅ) ವಿರುದ್ಧ ಜನತೆಯನ್ನು ಎತ್ತಿಕಟ್ಟಲು ಫಿರ್ಔನ್ ಮುಂದಾಗಿರುವುದು ಈ ಕಾರಣದಿಂದಾಗಿದೆ. “ಇವನು ನಮ್ಮ ದೇವತೆಯನ್ನು ಹಿಯಾಳಿಸುತ್ತಾನೆ” ಎಂದು ಜನರನ್ನು ಉದ್ರೇಕಿಸಿದನು. ಅಲ್ಲಾಹನು ಹೇಳು ತ್ತಾನೆ. (7:27)
ಜೀವನದ ಭೌತಿಕವಾದ ಸಮಸ್ಯೆ ಗಳನ್ನು ಪರಿಹರಿಸುವುದಕ್ಕಲ್ಲ ಮಹತ್ವ. ಬದಲಾಗಿ ಅವರನ್ನು ನರಕ ಶಿಕ್ಷೆಯಿಂದ ವಿವೋಚನೆಗೊಳಿಸುವುದಕ್ಕೆ ಮಹತ್ವ ನೀಡಬೇಕು. ಅದರ ಬಳಿಕವೇ ಸಾಮಾ ಜಿಕ ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕು ಎಂಬ ವಾದವು ಅಪ್ರಸ್ತುತ ವಾಗಿದೆ. ಹಾಗಿರುತ್ತಿದ್ದರೆ ಫರೋವರ ಆಡಳಿತದ ದೌಜ್ರನ್ಯಗಳಿಂದ ಜನತೆ ಯನ್ನು ರಕ್ಷಿಸಲು ಕರೆಕೊಟ್ಟದ್ದು ಯಾಕೆ? ಒಟ್ಟಿನಲ್ಲಿ ಪ್ರವಾದಿಗಳ ಹೋರಾಟವು ನಾನಾ ವಿಧದ ಶಿಕ್್ರಗಳ ವಿರುದ್ಧವೇ ಆಗಿತ್ತು. ಇಬ್ರಾಹೀಮ್(ಅ) ಆರಾಧನೆ ಯಲ್ಲಿರುವ ಶಿಕ್್ರನ ವಿರುದ್ಧ ಧ್ವನಿ ಎತ್ತಿದರು. ಪ್ರವಾದಿ ಮೂಸಾ(ಅ) ಆಡಳಿತದಲ್ಲಿರುವ ಶಿಕ್್ರನ ವಿರುದ್ಧ ಹೋರಾಡಿದರು. (79: 18) ಮೂಸಾ(ಅ) ಆರಾಧನಾ ಶಿಕ್್ರಗೆ ಪ್ರಥಮ ಸ್ಥಾನ ನೀಡಬೇಡವೇ ಎಂದು ಅಲ್ಲಾಹನನ್ನು ಪ್ರಶ್ನಿಸಿಲ್ಲ. ಕಾರಣ ಅಲ್ಲಿ ಆರಾಧಿಸಲ್ಪಡುವ ಮೂತ್ರಿಗಳಿಗಿಂತ ಅಪಾಯಕಾರಿ, ಆಡಳಿತ ವಗ್ರವಾಗಿತ್ತು ಎಂದು ಮೂಸಾರಿಗೆ(ಅ) ಅಲ್ಲಾಹನು ಮನವರಿಕೆ ಮಾಡಿಸಿದ್ದನು. (43:51)
ಲೂತ್ರ(ಅ) ಸಮುದಾಯವು ಮಾನವೀಯತೆಗೆ ನಿಲುಕದ ಮತ್ತು ಪ್ರಕೃತಿಗೆ ವಿರುದ್ಧವಾದ ಸಲಿಂಗರತಿ ಎಂಬ ಮಹಾ ಪಾಪದಲ್ಲಿ ಮುಳುಗಿತ್ತು. ಅಂದು ಈ ಪಾಪಕೃತ್ಯ ಸಾಮಾನ್ಯ ವಾಗಿತ್ತು. ಆ ಪಾಪ ಕೃತ್ಯವು ತೌಹೀದಿಗೆ ಮಾತ್ರವಲ್ಲ ಮನುಷ್ಯತ್ವಕ್ಕೂ ವಿರುದ್ಧ ವಾಗಿತ್ತು. ಲೂತ್(ಅ) ಸಲಿಂಗರತಿ ಯಲ್ಲಿ ಶಿಕ್್ರ ಮತ್ತು ತೌಹೀದ್ ಇದೆಯೇ ಎಂದು ಅಲ್ಲಾಹನನ್ನು ಪ್ರಶ್ನಿ ಸಿಲ್ಲ. ಕಾರಣ ಶಿಕ್್ರ, ತೌಹೀದ್ ಆರಾ ಧನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಇಂತಹ ಪಾಪ ಕೃತ್ಯಗಳಿಂದ ಮುಕ್ತಿ ಹೊಂದಿದರೆ ಮಾತ್ರ ಅಲ್ಲಾಹನನ್ನು ಆರಾಧಿಸಲು ಸಾಧ್ಯ ಎಂದು ಲೂತ್(ಅ) ತಿಳಿದಿದ್ದರು. ಆದ್ದರಿಂದ ಅವರು ಈ ಮಹಾ ಕೆಡುಕಿನಿಂದ ಜನರನ್ನು ವಿವೋಚನೆಗೊಳಿಸಲು ಮುಂದಾದರು. (7:80 ಮತ್ತು 84)
ಪ್ರವಾದಿ ಹೂದ್(ಅ), ಸ್ವಾಲಿಹ್(ಅ), ಶುಐಬ್(ಅ) ಇವರೆ ಲ್ಲರೂ ಪ್ರಥಮವಾಗಿ ಏಕದೇವತ್ವದೆಡೆಗೆ ಕರೆ ನೀಡಿದ್ದರು. ಅಲ್ಲಾಹನನ್ನು ಭಯ ಪಟ್ಟು ಅವನ ಆಜೆÕಗಳನ್ನೂ ಆದೇಶ ಗಳನ್ನೂ ಪಾಲಿಸಿ, ಜೀವಿಸಲು ಹೇಳಿ ದರು. ಪ್ರಥಮ ಆದ್ಯತೆ ಆರಾಧನೆಯಲ್ಲಿ ರುವ ಶಿಕ್್ರಗೆ ಆಗಿತ್ತು. ಆದರೆ ಅದೇ ಪ್ರವಾದಿಗಳು, ಬಂಡೆಕೊರೆದು ಮನೆ ಗಳನ್ನು ನಿಮ್ರಿಸುವವರ ವಿರುದ್ಧ, ವ್ಯಾಪಾರದಲ್ಲಿ ವಂಚನೆ ಮಾಡುವವರ ವಿರುದ್ಧ ಧ್ವನಿ ಎತ್ತಿದರು. ಇವುಗಳು ಜನರ ಸಾಮಾಜಿಕ ಸಮಸ್ಯೆಗಳಾಗಿದ್ದವು. ಹಾಗಿರುವಾಗ ಯಾಕೆ ಅವರು ಆರಾಧನೆ ಯಲ್ಲಿನ ಶಿರ್ಕ್ ಗೆ ಪ್ರಥಮ ಆದ್ಯತೆ ನೀಡಲಿಲ್ಲ?
ಜೀವನವನ್ನು ಶುದ್ಧೀಕರಿಸುವ ಒಂದು ಉತ್ತಮ ಆದಶ್ರವನ್ನು ತಂದ ಪ್ರವಾದಿ ಮುಹಮ್ಮದ್ರು(ಸ) ಸಮಾ ಜದ ಎಲ್ಲಾ ಕೆಡುಕುಗಳ ವಿರುದ್ಧವೂ ಧ್ವನಿ ಎತ್ತಿದರು. ಜನಸೇವೆಯು ಪ್ರವಾದಿ ಯವರ(ಸ) ಸಂದೇಶ ಪ್ರಚಾರದ ಒಂದು ಭಾಗವಾಗಿತ್ತು. ಜನರ ಸಮಸ್ಯೆ ಗಳನ್ನು ಪರಿಹರಿಸುವುದನ್ನು ಆರಾಧ ನೆಯ ಭಾಗವಾಗಿ ಅವರು ಪರಿಗಣಿಸಿ ದ್ದರು. ಕಅಬಾದಲ್ಲಿ 360 ವಿಗ್ರಹಗಳಿರು ವಾಗ ನಾಡಿನಲ್ಲಿ ನಡೆಯುತ್ತಿರುವ ವ್ಯಾಪಾರ ವಂಚನೆಯ ವಿರುದ್ಧ (83: 1 ಮತ್ತು 3), ಸಮಾಜವು ಶಿಕ್್ರನಿಂದ ಮುಕ್ತವಾಗುವುದಕ್ಕಿಂತ ವೊದಲೇ ಹೂಳಲ್ಪಡುವ ಹೆಣ್ಣು ಮಕ್ಕಳ ಪರವಾಗಿ (81:19) ಧ್ವನಿ ಎತ್ತಿದ್ದು ಈ ಕಾರಣ ದಿಂದಾಗಿತ್ತು.
ಕೇವಲ ಆರಾಧನೆಯಲ್ಲಿ ನಡೆಯುತ್ತಿರುವ ಶಿರ್ಕ್ ಮಾತ್ರ ಮಹಾ ಪಾಪವಾಗಿರುತ್ತಿದ್ದರೆ ಪ್ರವಾದಿಗಳು ಜನರ ಇತರ ಸಮಸ್ಯೆಗಳಿಗೆ ಸ್ಪಂದಿಸುತ್ತಿರಲಿಲ್ಲ. ಜನಸೇವೆಯು ಆರಾಧನೆಯ ಭಾಗ ವಾಗಿದ್ದರಿಂದ ಅವರು ಅದಕ್ಕೆ ಮುಂದಾದರು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ವರಾದರು. ಈ ಎಲ್ಲಾ ಪುರಾವೆಗಳೂ ಇತಿಹಾಸಗಳೂ ನಮ್ಮ ಕಣ್ಣ ಮುಂದಿರು ವಾಗ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಮಸೀದಿಯಲ್ಲೇ ಕಾಲ ಕಳೆಯುವುದರ ಅಥ್ರವಾದರೂ ಏನು?

ಪ್ರತಿಫಲವು ಕೈಗೆಟಕುತ್ತಿದ್ದರೂ ನಾವೇಕೆ ಪ್ರಯತ್ನಿಸುತ್ತಿಲ್ಲ ..


ಇಂದು ಕೌಟುಂಬಿಕ ಸಂಬಂಧವು ಛಿದ್ರಗೊಂಡಿದೆ. ಕುಟುಂಬ ಎಂಬ ಕಲ್ಪನೆಯು ಪತಿ, ಪತ್ನಿ ಮತ್ತು ಮಕ್ಕಳು ಎಂಬ ಮೂರು ವಿಭಾಗ ಗಳಲ್ಲಿ ಸೀಮಿತಗೊಂಡಿದೆ. ಹಿಂದೆಲ್ಲಾ ಹೆಚ್ಚಾಗಿ ಅವಿಭಕ್ತ ಕುಟುಂಬಗಳಿರುತ್ತಿದ್ದವು. ಕುಟುಂಬದ ಎಲ್ಲರೂ ಸೇರಿ ಒಂದೇ ಸೂರಿನಡಿಯಲ್ಲಿ ಸಹಬಾಳ್ವೆ ನಡೆಸುತ್ತಿದ್ದರು. ಸಮಸ್ಯೆಗಳು ತಲೆದೋರಿದಾಗ ಎಲ್ಲರೂ ಒಟ್ಟಾಗಿ ಪರಿಹರಿಸುತ್ತಿದ್ದರು. ಕುಟುಂಬ ದಲ್ಲಿರುವ ಹಿರಿಯರನ್ನು ಕಿರಿಯರು ಗೌರವಿಸುತ್ತಿ ದ್ದರು. ವೃದ್ಧರು ಎಲ್ಲರಿಂದಲೂ ಅನುಕಂಪ, ಪ್ರೀತಿ, ಆರೈಕೆ ಪಡೆಯುತ್ತಿದ್ದರು. ಇಲ್ಲದವರ ಕಷ್ಟ ಗಳಿಗೆ ಇರುವವರು ನೆರವಾಗುತ್ತಿದ್ದರು.
ಆದರೆ ಇಂದು ಆ ಸ್ಥಿತಿಯು ಬದಲಾಗಿದೆ. ಅವಿಭಕ್ತ ಕುಟುಂಬಗಳು ಒಂಟಿ ಕುಟುಂಬಗಳಾಗಿ ಜೀವಿಸಲಾರಂಭಿಸಿವೆ. ‘ನಾನು, ನನ್ನ ಪತ್ನಿ ಮತ್ತು ಮುದ್ದು ಮಕ್ಕಳು’ ಎಂಬ ಸ್ವಾಥ್ರ ಮನೋಭಾವ ಮೂಡತೊಡಗಿದೆ. ತನ್ನ ಹತ್ತಿರದ ಸಂಬಂಧಿಕರು ಗತ್ಯಂತರವಿಲ್ಲದೆ ಸ್ವಾಭಿಮಾನ ತೊರೆದು ಸಹಾಯ ಯಾಚಿಸಿದಾಗ ಸುಳ್ಳು ನೆವನಗಳನ್ನು ಹೇಳಿ ಬರಿಗೈಯಲ್ಲಿ ಕಳುಹಿಸುವ ಎಷ್ಟೋ ಮಂದಿ ನಮ್ಮ ಮಧ್ಯೆ ಇದ್ದಾರೆ. ಸ್ವಂತ ಅಣ್ಣ ಅಥವಾ ತಮ್ಮ ಬಡತನದ ಬೇಗೆಯಲ್ಲಿ ಬೇಯುತ್ತಿರುವಾಗ ಕಂಡೂ ಕಾಣದಂತೆ ಮಹಲುಗಳಲ್ಲಿ ಐಶಾರಾವಿೂ ಜೀವನ ನಡೆಸುವವರಿಗೆ ಇಲ್ಲಿ ಕೊರತೆಯಿಲ್ಲ. ಹಿಂದಿನ ಕಾಲದಲ್ಲಿದ್ದ ಪರಸ್ಪರ ಕೌಟುಂಬಿಕ ಸ್ನೇಹವು ಮಾಯವಾಗಿದೆ. ಇಂದು ಮನುಷ್ಯರು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಕಾರಣ ಕುಟುಂಬ ಸಂಬಂಧಗಳ ಛಿದ್ರತೆಯಾಗಿದೆ ಎಂದು ಕುರ್ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ಅಧ್ಯಯನ ನಡೆಸಿದರೆ ನಮಗೆ ಮನದಟ್ಟಾಗಬಹುದು.
ಅಲ್ಲಾಹನ ಆಜೆÕಗಳನ್ನು ಭೂಮಿಯಲ್ಲಿ ಕಾಯ್ರಗತಗೊಳಿಸಲಿಕ್ಕಾಗಿ ಆಗಮಿಸಿದ ಪ್ರವಾದಿಗಳ ಕಾಯ್ರ ಕ್ಷೇತ್ರದ ಕಡೆಗೆ ಕಣ್ಣೋಡಿಸುವುದಾದರೆ ಅವರು ಕೌಟುಂಬಿಕ ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಗೋಚರವಾಗುತ್ತದೆ. ಕೇವಲ ಕೌಟುಂಬಿಕ ಸಂಬಂಧ ಮಾತ್ರವಲ್ಲ, ವಿಶ್ವಾಸಿಗಳ ಮಧ್ಯೆ ಇರುವ ಸಂಬಂಧವನ್ನು ಕೂಡಾ ಕಡಿಯುವುದು ಇಸ್ಲಾಮಿಗೆ ನಿಲುಕದ ವಿಚಾರವಾಗಿದೆ. ಪ್ರವಾದಿಯವರು(ಸ) ಹೇಳಿದರು, “ಕುಟುಂಬ ಸಂಬಂಧವನ್ನು ಕಡಿಯುವವನು ಸ್ವಗ್ರವನ್ನು ಪ್ರವೇಶಿಸಲಿಕ್ಕಿಲ್ಲ.”
ಇಂದು ಕುಟುಂಬ ಎಂದು ಹೇಳುವಾಗ ಪತಿ, ಪತ್ನಿ ಮತ್ತು ಮಕ್ಕಳು ಎಂಬ ಸೀಮಿತ ವಲಯವು ನಮ್ಮ ಮನಸ್ಸಿಗೂ ಬರುತ್ತದೆ. ಇತರ ಸಂಬಂಧಗಳು ಕುಟುಂಬ ಎಂಬ ವ್ಯವಸ್ಥೆಗೆ ಅನ್ಯವಾಗಿದೆ. ತಾನು ಸಂಪಾದಿಸಿದ ಸಂಪತ್ತನ್ನು ಪತ್ನಿ ಮತ್ತು ಮಕ್ಕಳಿಗಲ್ಲದೆ ಇತರರಿಗೆ ಖಚ್ರು ಮಾಡಲು ಪ್ರತ್ಯಕ್ಷವಾಗಿಯಲ್ಲದಿದ್ದರೂ ಪರೋಕ್ಷವಾಗಿ ನಾವು ಹಿಂದೇಟು ಹಾಕು ತ್ತಿದ್ದೇವೆ. ಕುರ್ಆನ್ ಕುಟುಂಬ ಸಂಬಂಧೀ ವಿಷಯ ಗಳನ್ನು ಪ್ರಸ್ತಾಪಿಸುವಾಗ ಹೆಚ್ಚಿನ ಕಡೆಗಳಲ್ಲಿ ಅವರೊಂದಿಗಿರುವ ಹಕ್ಕುಗಳ ಕುರಿತು ನೆನಪಿಸಿದೆ. ಸೂರಃ ಬನೀ ಇಸ್ರಾಯೀಲ್ನ 26ನೇ ಸೂಕ್ತದಲ್ಲಿ ಅಲ್ಲಾಹನು ಹೇಳುತ್ತಾನೆ, “ಸಂಬಂಧಿಕನಿಗೆ ಅವನ ಹಕ್ಕುಗಳನ್ನು ನೀಡಿರಿ.” ಇಲ್ಲಿ ಸಂಬಂಧಿಕರು ಎಂಬ ವ್ಯಾಪ್ತಿಗೆ ಯಾರೆಲ್ಲಾ ಸೇರುತ್ತಾರೆ?
ಪತಿ, ಪತ್ನಿ ಮತ್ತು ಮಕ್ಕಳು ಈ ವ್ಯಾಪ್ತಿಗೆ ಸೇರು ತ್ತಾರೆ ಎಂಬ ವಿಷಯದಲ್ಲಿ ಯಾವುದೇ ಸಂಶಯವಿಲ್ಲ. ನಾವು ಯಾರೊಂದಿಗೆ ಸಂಬಂಧ ಸ್ಥಾಪಿಸಲು ಬಯಸುತ್ತೇವೆಯೋ ಮತ್ತು ಯಾರೊಂದಿಗೆ ಸಂಬಂಧ ಸ್ಥಾಪಿಸಬೇಕೋ ಅವರು ಸಂಬಂಧಿಕರ ಪಟ್ಟಿಗೆ ಸೇರುತ್ತಾರೆ. ಈ ಸಂಬಂಧಿಕರು ಕಷ್ಟ ಅನುಭವಿಸುವಾಗ ಅವರಿಗೆ ನೆರವಾಗುವುದು ಅವರ ಹಕ್ಕಾಗಿದೆ. ಇವರು ಬಡತನದಲ್ಲಿರುವಾಗ ಇವರಿಗೆ ದಾನ ಮಾಡದೆ ಇತರರಿಗೆ ನೆರವಾಗುವುದನ್ನು ಪ್ರವಾದಿಯವರು(ಸ) ಇಷ್ಟಪಟ್ಟಿರಲಿಲ್ಲ. ಕಾರಣ ಈ ರೀತಿಯ ದಾನವು ಸಂಬಂಧಿಕರ ಮಧ್ಯೆ ಇರುವ ಅಂತರವನ್ನು ಹೆಚ್ಚಿಸಬಹುದು. ಪ್ರವಾದಿಯವರು(ಸ) ಹೇಳಿದರು, “ನನ್ನನ್ನು ಸತ್ಯ ಸಂದೇಶದೊಂದಿಗೆ ಕಳು ಹಿಸಿದವನಾಣೆ! ಸಂಬಂಧಿಕರಿಗೆ ನೆರವಿನ ಅಗತ್ಯತೆ ಇದ್ದರೂ ಇತರರಿಗೆ ದಾನ ಮಾಡುವವನ ದಾನ ವನ್ನು ಅಲ್ಲಾಹನು ಸ್ವೀಕರಿಸನು.”
ಪ್ರವಾದಿಯವರು(ಸ) ಈ ರೀತಿ ಹೇಳಲು ಕಾರಣವೂ ಇದೆ. ಸಂಬಂಧಿಕನಿಗೆ ದಾನ ಮಾಡುವು ದರಿಂದ ಅವನನ್ನು ಯಾರು ಕೂಡಾ ದಾನಿ ಎಂದು ಹೇಳುವುದಿಲ್ಲ. ಅದು ಎಷ್ಟೇ ಜನರ ಮುಂದೆ ದಾನ ಮಾಡಿದರೂ ಸರಿ. ಆ ದಾನವು ಜನರಿಗೆ ತಿಳಿಯುವುದಿಲ್ಲ. ಮಾತ್ರವಲ್ಲ, ಸಂಬಂಧಿಕರ ಸಮಸ್ಯೆಗಳೂ ಪರಿಹಾರವಾಗುತ್ತವೆ. ಅವರ ಅವಶ್ಯ ಕತೆಗಳು ಪÇರೈಸಲ್ಪಡುತ್ತವೆ. ಅಲ್ಲಾಹನ ತೃಪ್ತಿ ಬಯಸಿ ದಾನ ಮಾಡಿದರೆ ಅದಕ್ಕೆ ತಕ್ಕ ಪ್ರತಿ ಫಲವೂ ದೊರೆಯುತ್ತದೆ.
ಆದರೆ ಇಂದು ಕೆಲವರು ಕುಟುಂಬದವರಲ್ಲಿ ದಾರಿದ್ರ್ಯತೆ ಇದ್ದರೂ ತನ್ನ ಸಂಪತ್ತನ್ನು ಅವರಿಗೆ ನೀಡದೆ ನಾಲ್ಕು ಜನರ ಮಧ್ಯೆ ವಿತರಿಸುತ್ತಾರೆ. ಇದು ಅಲ್ಲಾಹನ ತೃಪ್ತಿಯನ್ನು ಬಯಸಿಯಲ್ಲ. ಬದಲಾಗಿ ಜನರು ತನ್ನನ್ನು ಮಹಾದಾನಿ ಎಂದು ಕರೆಯುವ ಸಲುವಾಗಿ ಮಾಡುವ ದಾನವಾಗಿದೆ. ತನ್ನ ಸತ್ಕಮ್ರಗಳನ್ನು ಅಲ್ಲಾಹನಿಗಾಗಿ ನಿವ್ರಹಿಸುವ ಸಂಕಲ್ಪ ಇದ್ದರೂ ಜನರು ಕೂಡಾ ಕಾಣಬೇಕು
ಎಂಬ ಇಚ್ಚೆ ಮನದಲ್ಲಿ ಮೂಡಿದರೆ ಆ ಸತ್ಕಮ್ರ ಗಳಿಂದ ಅವನಿಗೆ ಯಾವುದೇ ಪ್ರಯೋಜನವಿಲ್ಲ. ಶಿಕ್್ರ ಎಂಬ ಮಹಾ ಪಾಪವು ಅಕ್ಷಮ್ಯವಾಗಿದೆ ಯಷ್ಟೇ. ತೋರಿಕೆಗಾಗಿ ಮಾಡುವ ಸತ್ಕಮ್ರಗಳು ಸಣ್ಣ ಶಿಕ್್ರ ಆಗಿವೆ. ಆದ್ದರಿಂದಲೇ ಪ್ರವಾದಿ ಯವರು(ಸ) ಆಣೆ ಹಾಕುತ್ತಾ ಸಂಬಂಧಿಕರಿಗೆ ವೊದಲ ಆಧ್ಯತೆ ನೀಡಬೇಕೆಂದು ಹೇಳಿರುವುದು.
ಇಂದು ಶ್ರೀಮಂತರು ತಮ್ಮ ಕುಟುಂಬದಲ್ಲಿರುವ ದರಿದ್ರರಿಗೆ ಸರಿಯಾದ ರೀತಿಯಲ್ಲಿ ದಾನ ಮಾಡುತ್ತಿದ್ದರೆ ಬಡತನದ ಸಮಸ್ಯೆಯನ್ನು ಬಹುಪಾಲು ನೀಗಿಸಬಹುದಾಗಿತ್ತು. ಕುಟುಂಬ ಎಂಬ ವಿಶಾಲವಾದ ಮಾನವ ಸರಪಳಿ ಯಲ್ಲಿ ಒಂದಿಬ್ಬರಾದರೂ ಶ್ರೀಮಂತರು ಇರುತ್ತಾರಷ್ಟೇ. ಅವರು ತಮ್ಮ ಸಂಪತ್ತನ್ನು ಕುಟುಂಬದೊಳಗೆ ದಾನ ಮಾಡಿದರೆ ಆ ಕುಟುಂಬದ ಬಡತ ನವು ನೀಗಲಾರದೇ? ಇಂತಹ ಅದೆಷ್ಟೋ ಕುಟುಂಬಗಳು ಇಂದಿಲ್ಲವೇ? ಇಂದಿನ ಬಡತನಕ್ಕೆ ಕೌಟುಂಬಿಕ ಛಿದ್ರತೆಯೂ ಒಂದು ಕಾರಣವಾಗಿದೆ.
ಸಂಪತ್ತಿರುವವನು, ತನ್ನ ಸಂಪತ್ತಿನ ಒಡೆಯ ‘ತಾನು’ ಎಂದು ಭಾವಿಸಿದ್ದಾನೆ. ಆದರೆ ಸಂಪತ್ತಿನ ನಿಜವಾದ ಒಡೆಯನು ಸೃಷ್ಟಿಕತ್ರನಾಗಿದ್ದಾನೆ. ಅವನು ಕೆಲವರಿಗೆ ಅದನ್ನು ಪರೀಕ್ಷೆ ಎಂಬ ನೆಲೆಯಲ್ಲಿ ನೀಡಿದ್ದಾನೆ. ಆ ಸಂಪತ್ತನ್ನು ನೀಡುವುದರೊಂದಿಗೆ ಅದರ ಹಕ್ಕುದಾರರನ್ನೂ ಸೃಷ್ಟಿಸಿದ್ದಾನೆ. ಆದ್ದರಿಂದ ಸಂಪತ್ತಿರುವವನು ತನ್ನ ಸಂಪತ್ತನ್ನು ಅದರ ಹಕ್ಕುದಾರರಿಗೆ ನೀಡಿ ಅಲ್ಲಾಹನ ಪರೀಕ್ಷೆಯಲ್ಲಿ ಉತ್ತೀಣ್ರರಾಗಬೇಕಾಗಿದೆ.
ಅಬ್ದುಲ್ಲಾ ಬಿನ್ ಮಸ್ಊದ್ರ(ರ) ಪತಿ ಝೈನಬುಸ್ಸಕೀಫ(ರ) ಪ್ರವಾದಿ ಯವರ(ಸ) ಸಹಾಬಿ ವನಿತೆಯರಲ್ಲಿ ಓವ್ರರಾಗಿದ್ದರು. ಅವರು ಆಥ್ರಿಕವಾಗಿ ಸಬಲರಾಗಿದ್ದರು. ಒಮ್ಮೆ ಅವರು ಪ್ರವಾದಿಯವರ(ಸ) ಪ್ರವಚನವನ್ನು ಆಲಿಸುತ್ತಿದ್ದ ವೇಳೆ ಪ್ರವಾದಿಯವರು(ಸ) ಹೇಳಿದರು, “ಸಹೋದರಿಯರೇ, ನೀವು ನಿಮ್ಮ ಆಭರಣವನ್ನು ನೀಡಿಯಾದರೂ ದಾನ ಧಮ್ರ ನಿವ್ರಹಿಸಬೇಕು.” ಹಾಗೆ ಅವರು ದಾನ ಮಾಡಲು ನಿಧ್ರರಿಸಿದರು. ದಾನ ಧಮ್ರಕ್ಕೆ ಹೆಚ್ಚು ಅಹ್ರರಾದವರಿಗೆ ಅದನ್ನು ನೀಡಬೇಕಷ್ಟೇ. ಹಾಗೆ ಅವರು ಆಲೋಚಿಸುವಾಗ ಅದಕ್ಕೆ ಅತೀ ಹೆಚ್ಚು ಅಹ್ರರು ಅವರ ಪತಿ ಎಂದು ಅವರಿಗೆ ಮನವರಿಕೆಯಾಯಿತು. ಅವರು ಈ ವಿಷಯವನ್ನು ತನ್ನ ಪತಿಗೆ ತಿಳಿಸಿ, “ಪತಿಗೆ ದಾನ ಮಾಡಬಹುದೇ ಎಂದು ನೀವು ಪ್ರವಾದಿಯವರೊಂದಿಗೆ(ಸ) ವಿಚಾರಿಸಿರಿ” ಎಂದು ಹೇಳಿದರು. ಆದರೆ ಅವರ ಪತಿ ಹೋಗಲು ಹಿಂದೇಟು ಹಾಕಿದ್ದರಿಂದ ಝೈನಬ್ರು(ರ) ಖುದ್ದು ಹೋಗಿ ಪ್ರವಾದಿಯವರೊಂದಿಗೆ(ಸ) ವಿಚಾರಿಸಿದರು. ಆಗ ಪ್ರವಾದಿಯವರು(ಸ) ಹೇಳಿದರು, “ಆ ದಾನಕ್ಕೆ ಎರಡು ಪ್ರತಿಫಲವಿದೆ. ಒಂದು ದಾನ ಮಾಡಿದ ಪ್ರತಿಫಲ ಇನ್ನೊಂದು ಕುಟುಂಬ ಸಂಬಂಧವನ್ನು ದೃಢಪಡಿಸಿದ ಪ್ರತಿಫಲ.” ಆದ್ದರಿಂದ ಸಂಬಂಧಿಕರಿಗೆ ದಾನ ಮಾಡಿದರೆ ಇತರರಿಗೆ ದಾನ ಮಾಡಿದ್ದಕ್ಕಿಂತ ಇಮ್ಮಡಿ ಪ್ರತಿಫಲವಿದೆ. ಈ ರೀತಿಯ ದಾನದಿಂದ ಕೌಟುಂಬಿಕ ಸಂಬಂಧವೂ ಸುದೃಢವಾಗುತ್ತದೆ. ಪ್ರತಿಫಲಗಳಿಸಲಿಕ್ಕಾಗಿ ಅಲ್ಲಾಹನು ನಮ್ಮ ಕುಟುಂಬದಲ್ಲೇ ಬಡವರನ್ನು ಸೃಷ್ಟಿಸಿದ್ದಾನೆ. ನಾವು ಅವರಿಗೆ ದಾನ ಮಾಡಿ ಇಮ್ಮಡಿ ಪ್ರತಿಫಲ ಗಳಿಸುವುದರ ಬದಲಾಗಿ ಜನರ ಮಧ್ಯೆ ತೋರಿಕೆಗಾಗಿ ದಾನ ಮಾಡಿ ಶಿಕ್್ರ ಎಂಬ ಮಹಾ ಪಾಪವನ್ನು ವಹಿಸಿಕೊಳ್ಳುವುದೇತಕ್ಕೆ? ಪ್ರತಿಫಲವು ಕೈಗೆಟಕು ವಂತಿದ್ದರೂ ನಾವೇಕೆ ಅದನ್ನು ಗಳಿಸುವ ಸಲುವಾಗಿ ಪ್ರಯತ್ನ ನಡೆಸುತ್ತಿಲ್ಲ? ಇದು ಪ್ರತಿಯೊಬ್ಬರೂ ಆತ್ಮಾವಲೋಕನ ನಡೆಸಬೇಕಾದ ವಿಷಯವಾಗಿz

ನಿಮ್ಮ ಕರ್ಮಗಳು ಸ್ವೀಕೃತವಾಗಬೇಕೇ? ಹಾಗಾದರೆ...


ಸತ್ಯವಿಶ್ವಾಸಿಗಳು ಸತ್ಕಮ್ರಗಳನ್ನೆಸಗುವುದು ಮತ್ತು ದುಷ್ಕಮ್ರಗಳನ್ನು ವಜ್ರಿಸುವುದು ಅಲ್ಲಾಹನ ಸಂಪ್ರೀತಿಗೋಸ್ಕರವಾಗಿದೆ. ಅವರು ಮಾಡುವ ಕಮ್ರ ಗಳು ಅಲ್ಲಾಹನು ಸ್ವೀಕರಿಸಬೇಕು ಎಂಬ ಅದಮ್ಯ ಬಯಕೆ ಅವರಲ್ಲಿರುತ್ತದೆ. ಆದರೆ ಕೇವಲ ಕೆಲವು ಸತ್ಕಮ್ರಗಳನ್ನು ನಿವ್ರಹಿಸಿದ ಮಾತ್ರಕ್ಕೆ ಅವನನ್ನು ಅಲ್ಲಾಹನು ಸ್ವೀಕರಿಸುತ್ತಾನೆ ಎಂಬ ಭಾವನೆಯು ಹಗಲುಗನಸು ಮಾತ್ರವಾಗಿದೆ. ಸತ್ಕಮ್ರಗಳು ಅಲ್ಲಾಹನ ಬಳಿ ಸ್ವೀಕೃತಗೊಳ್ಳಬೇಕಾ ದರೆ ವಿಶ್ವಾಸಿಗಳ ಜೀವನವು ಪÇತ್ರಿಯಾಗಿ ಅಲ್ಲಾಹನಿಗೆ ಸಮಪ್ರಿತ ವಾಗಿರಬೇಕು. ಸಾಮಾಜಿಕ, ರಾಜಕೀಯ, ಆಥ್ರಿಕ ರಂಗಗಳಲ್ಲಿ ಜೀವನವು ಹೊಲಸಾಗಿದ್ದು ಧಾಮ್ರಿಕ ರಂಗದಲ್ಲಿ ಮಾತ್ರ ಸುಸ್ಥಿತಿಯಲ್ಲಿದ್ದರೆ ಅವನ ಕಮ್ರ ಗಳಿಂದ ಯಾವುದೇ ಪ್ರಯೋಜನವಿಲ್ಲ.
ಮುಖ್ಯವಾಗಿ ಜನರೊಂದಿಗಿನ ಸಂಬಂಧವು ಸರಿ ಯಾಗಿರಬೇಕು. ಇತರರ ಸಂಪತ್ತನ್ನು ಅನ್ಯಾಯವಾಗಿ ಕಬಳಿಸುತ್ತಾ, ಇತರರಿಗೆ ದ್ರೋಹವೆಸಗಿ ಅವರ ಶಾಪಕ್ಕೆ ಗುರಿಯಾಗುತ್ತಾ ಬದುಕುವುದಾದರೆ ಅವನ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನವು ಶೂನ್ಯವಾಗುತ್ತದೆ. ಜನರೊಂದಿಗೆ ಕರುಣೆ ತೋರಬೇಕಾದುದು ಪ್ರತಿ ಯೋವ್ರ ವಿಶ್ವಾಸಿಯ ಕತ್ರವ್ಯವಾಗಿದೆ. ಪ್ರವಾದಿ ಯವರು(ಸ) ಹೇಳಿದರು, “ಯಾರು ಜನರೊಂದಿಗೆ ಕರುಣೆ ತೋರುವುದಿಲ್ಲವೋ ಅವನೊಂದಿಗೆ ಅಲ್ಲಾಹನೂ ಕರುಣೆ ತೋರುವುದಿಲ್ಲ.”
ಜನರು ನಮ್ಮನ್ನು ಇಷ್ಟಪಡಬೇಕಾದರೆ ನಮ್ಮ ವ್ಯಕ್ತಿತ್ವವು ಉತ್ತಮವಾಗಿರಬೇಕು. ನಾವು ಇತರ ರೊಂದಿಗೆ ಹೇಗೆ ಸಂಬಂಧವನ್ನು ಬಲಪಡಿಸಬೇಕು ಎಂಬುದರ ಬಗ್ಗೆ ಇಂದು ಹಲವಾರು ವ್ಯಕ್ತಿತ್ವ ವಿಕಸನ ಪÅಸ್ತಕಗಳು ಲಭ್ಯ. ಇತರರ ಹೃದಯದಲ್ಲಿ ಹೇಗೆ ಸ್ಥಾನಗಳಿಸಬಹುದು ಎಂಬ ಬಗ್ಗೆ ಕುರ್ಆನ್ ಮತ್ತು ಹದೀಸ್ಗಳ ಆಧಾರದಲ್ಲಿ ಕೆಲವು ಮಾಗ್ರೋಪಾಯಗಳು ಇಲ್ಲಿವೆ.
1. ಮುಗುಳ್ನಗಬೇಕು: ಮುಗುಳ್ನಗು ಎಂಬುದು ಅಪರಿಚಿತತೆಯಿಂದ ಪರಿಚಿತತೆಯೆಡೆಗೆ ತಲುಪಿಸು ತ್ತದೆ. ಮುಗುಳ್ನಗುವಿಗೆ ಜನರನ್ನು ಆಕಷ್ರಿಸುವ ಶಕ್ತಿ ಇದೆ. ಅದು ಇತರರೊಂದಿಗೆ ಮಾತಿಗಾರಂಭಿ ಸುವುದಕ್ಕಿರುವ ಮುನ್ನುಡಿಯೂ ಆಗಿದೆ. ಇಸ್ಲಾಮಿನ ದೃಷ್ಟಿಯಲ್ಲಿ ಮುಗುಳ್ನಗೆಯು ಪÅಣ್ಯ ಕಮ್ರವಾಗಿದೆ. ಪ್ರವಾದಿಯವರು(ಸ) ಹೇಳಿದರು, “ಮುಗುಳ್ನಗೆಯು ಒಂದು ದಾನವಾಗಿದೆ.” ಆದ್ದರಿಂದ ಜನರನ್ನು ಕಾಣುವಾಗ ಮುಖ ಸಿಂಡರಿಸದೆ ಮುಗುಳ್ನಗಬೇಕು.
2. ಸಲಾಮ್ ಹೇಳಬೇಕು: ಪ್ರಸನ್ನ ವದನ ದೊಂದಿಗೆ ಸಲಾಮ್ ಹೇಳಿ ಕೈಕುಲುಕುತ್ತಾ ಇತರ ರೊಂದಿಗೆ ಮಾತಿಗಾರಂಭಿಸಬೇಕು. ಆಗ ಯಾವುದೇ ಕಠಿಣ ಹೃದಯಿಯೂ ನಮಗೆ ಸ್ಪಂದಿಸುತ್ತಾನೆ. ಸಲಾಮ್ ಒಂದು ಪ್ರಾಥ್ರನೆ ಆಗಿದೆ. ಪರಿಚಯ ವಿಲ್ಲದ ವ್ಯಕ್ತಿಯೊಂದಿಗೆ ‘ನಿನ್ನ ಮೇಲೆ ಶಾಂತಿ ಇರಲಿ’ (ಅಸ್ಸಲಾಮು ಅಲೈಕುಮ್) ಎಂದು ಹೇಳುವಾಗ ನಾವು ಅವನೊಂದಿಗೆ ತೋರುವ ಕಾಳಜಿಗೆ ಅವನು ಮನ ಸೋಲುತ್ತಾನೆ. ಸಲಾಮನ್ನು ವ್ಯಾಪಿಸಲು ಪ್ರವಾದಿಯವರು(ಸ) ಹೇಳಿದ್ದಾರೆ.
3. ಮೌನಿ ಅಥವಾ ಮಿತಭಾಷಿಯಾಗಬೇಕು: ಅಗತ್ಯವಿದ್ದಷ್ಟು ಮಾತ್ರ ಮಾತನಾಡಬೇಕು. ಅನಗತ್ಯವಾಗಿ ಮಾತನಾಡಿದರೆ ನಮ್ಮ ಮತ್ತು ಜನರ ಮಧ್ಯೆ ಉತ್ತಮ ಸಂಬಂಧವೇಪ್ರಡುವುದರ ಬದಲಾಗಿ ಶಿಥಿಲಗೊಳ್ಳುವ ಸಂಭವವಿದೆ. ಮಾತ ನಾಡುವಾಗ ಯೋಚಿಸಿ ಮಾತನಾಡಬೇಕು. ಒಂದು ಅನಗತ್ಯ ಮಾತು ನಾಲಗೆಯಿಂದ ಹೊರಬಿದ್ದ ಬಳಿಕ ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಅಲೀ(ರ) ಹೇಳಿದರು, “ತಿಳಿಗೇಡಿಯ ಹೃದಯವು ಅವನ ನಾಲಗೆಯ ಹಿಂದಿರುತ್ತದೆ. ಬುದ್ಧಿವಂತನ ನಾಲಗೆಯು ಅವನ ಹೃದಯದ ಹಿಂದಿರುತ್ತದೆ.” ಅಥ್ರಾತ್ ತಿಳಿಗೇಡಿಯು ಮಾತನಾಡಿದ ಬಳಿಕ ಚಿಂತಿಸುತ್ತಾನೆ. ಬುದ್ಧಿವಂತನು ಚಿಂತಿಸಿದ ಬಳಿಕ ಮಾತನಾಡುತ್ತಾನೆ. ಆದ್ದರಿಂದ ಮಾತನಾಡುವಾಗ ಮಿತವಾಗಿ, ಉತ್ತಮವಾದ ಮಾತುಗಳನ್ನಾಡಬೇಕು. ಪ್ರವಾದಿಯವರು(ಸ) ಹೇಳಿದರು, “ಯಾರು ಅಲ್ಲಾಹನಲ್ಲೂ ಅಂತ್ಯದಿನದಲ್ಲೂ ವಿಶ್ವಾಸವಿರಿಸು ತ್ತಾನೋ ಅವನು ಉತ್ತಮ ಮಾತುಗಳನ್ನಾಡಲಿ. ಇಲ್ಲದಿದ್ದರೆ ಮೌನ ವಹಿಸಲಿ.”
4. ಆಲಿಸುವವರಾಗಬೇಕು: ಯಾರಾದರೂ ಮಾತನಾಡುತ್ತಿರುವಾಗ ಅದರ ಮಧ್ಯೆ ಪ್ರವೇಶಿಸಿ ಮಾತನಾಡಬಾರದು. ಹಾಗೆ ಮಾತನಾಡುವುದು ಪ್ರವಾದಿ ಚಯ್ರೆಗೆ ವಿರುದ್ಧವಾಗಿದೆ. ಪ್ರವಾದಿ ಯವರು(ಸ) ಯಾರಾದರೂ ಮಾತನಾಡಿ ಮುಗಿಯುವುದಕ್ಕಿಂತ ಮುಂಚೆ ಮಧ್ಯೆ ಪ್ರವೇಶಿಸಿ ಮಾತನಾಡುತ್ತಿರಲಿಲ್ಲ. ನಾವು ಇತರರ ಮಾತನ್ನು ಆಲಿಸುವವರಾಗಬೇಕು. ಮನಸ್ಸಿನಲ್ಲಿ ಹಲವಾರು ದುಗುಡಗಳನ್ನು ತುಂಬಿಕೊಂಡು ಓಡಾಡುವವರಿರು ತ್ತಾರೆ. ಅವರು ತಮ್ಮ ಮನೋವೇದನೆಯನ್ನು ಹೇಳಿ ಮನಸ್ಸನ್ನು ಹಗುರಗೊಳಿಸಲು ಪರದಾಡುತ್ತಿರು ತ್ತಾರೆ. ಇಂತಹ ಸಂದಭ್ರಗಳಲ್ಲಿ ಅವರ ಮಾತು ಗಳನ್ನು ಆಲಿಸಿ ಸಾಧ್ಯವಾದರೆ ಅದಕ್ಕೆ ಪರಿಹಾರ ವನ್ನು ಸೂಚಿಸಬೇಕು. ಆಗ ಅವರ ಮನಸ್ಸು ನಿರಾಳವಾಗುತ್ತದೆ. ಮಾತ್ರವಲ್ಲ, ನಮ್ಮ ಮತ್ತು ಅವರ ಮಧ್ಯೆ ಸಂಬಂಧವು ದೃಢವಾಗುತ್ತದೆ.
5. ಪಾರಿತೋಷಕಗಳನ್ನು ನೀಡುತ್ತಿರಬೇಕು: ವಿಶೇಷ ಸಂದಭ್ರಗಳಲ್ಲಿ ಇತರರಿಗೆ ಪಾರಿತೋಷಕ ಗಳನ್ನು ನೀಡಬೇಕು. ಇದು ಪ್ರವಾದಿ ಚಯ್ರೆಯ ಭಾಗವಾಗಿದೆ. ಹೀಗೆ ಸನ್ಮಾನಗಳನ್ನು ನೀಡುವಾಗ ಅವರಲ್ಲಿ ನಮ್ಮ ಬಗ್ಗೆ ಕಾಳಜಿ ಮೂಡುತ್ತದೆ. ಇದು ಸಂಬಂಧ ಸ್ಥಾಪನೆಗೆ ನಾಂದಿಯಾಗುತ್ತದೆ. ಇದು ಹಲವು ವೇಳೆ ನಮ್ಮ ಅನುಭವಕ್ಕೆ ಬಂದ ವಿಚಾರವಾಗಿದೆ.
6. ಯಾರಾದರೂ ಏನಾದರೂ ವಸ್ತುಗಳನ್ನು ನೀಡಿದರೆ ತಿರಸ್ಕರಿಸದೆ ಸ್ವೀಕರಿಸಬೇಕು: ನಾವು ಇತರ ರಿಗೆ ಪಾರಿತೋಷಕಗಳನ್ನು ನೀಡುವಂತೆ ನಮಗೂ ಯಾರಾದರೂ ನೀಡಬಹುದು. ಆಗ ನಾವು ಅದನ್ನು ತಿರಸ್ಕರಿಸದೆ ಸ್ವೀಕರಿಸಬೇಕು. ಹಾಗೆ ತಿರಸ್ಕರಿಸಿದರೆ ಅವರಿಗೆ ಮುಜುಗರವೂ ಬೇಸರವೂ ಉಂಟಾಗ ಬಹುದು. ಅದು ನಮ್ಮ ಮಧ್ಯೆ ಇರುವ ಸಂಬಂಧದ ಮೇಲೂ ಪರಿಣಾಮ ಬೀರಬಹುದು. ಒಮ್ಮೆ ಪ್ರವಾದಿ ಯವರು(ಸ) ಉಮರ್ರಿಗೆ(ರ) ಯಾವುದೋ ಒಂದು ವಸ್ತುವನ್ನು ನೀಡಿದರು. ಆಗ ಉಮರ್ರು(ರ) ತಿರಸ್ಕರಿಸುತ್ತ ಹೇಳಿದರು, “ಇದಕ್ಕೆ ನನಗಿಂತ ಅಹ್ರರು ಬೇರೆಯವರಿದ್ದಾರೆ” ಆಗ ಪ್ರವಾದಿಯವರು(ಸ) ಹೇಳಿದರು, “ನೀವು ಬಯಸದೆ ಅನಿರೀಕ್ಷಿತವಾಗಿ ಯಾರಾದರೂ ಒಂದು ವಸ್ತುವನ್ನು ನೀಡಿದರೆ ಅದನ್ನು ಸ್ವೀಕರಿಸಬೇಕು. ಆದರೆ ಅದರ ಹಿಂದೆ ಬೀಳಬಾರದು.”
7. ಇತರರ ಅವಶ್ಯಕತೆಗಳನ್ನು ಪೂರೈಸಿ ಕೊಡ ಬೇಕು: ಯಾರಾದರೂ ತನ್ನ ಅಗತ್ಯತೆಯನ್ನು ಪÇರೈಸಿಕೊಳ್ಳಲು ನಮ್ಮಲ್ಲಿ ಕೋರಿದಾಗ ಸಾಧ್ಯ ವಾದರೆ ನಾವು ಅದನ್ನು ಪÇರೈಸಿ ಕೊಡಬೇಕು. ಇನ್ನು ಸಾಧ್ಯವಾಗದಿದ್ದರೆ ನಮ್ಮ ಅಸಹಾಯಕತೆ ಯನ್ನು ಅವರಿಗೆ ಮನಗಾಣಿಸಬೇಕು. ಯಾವುದೇ ಪ್ರತಿಕ್ರಿಯೆ ನೀಡದೆ ಅವರನ್ನು ಬರಿಗೈಯಲ್ಲಿ ಕಳಿಸಿದಾಗ ಅವರಿಗೆ ನಮ್ಮ ಮೇಲೆ ದ್ವೇಷ ಉಂಟಾಗಬಹುದು.ಇದರಿಂದಾಗಿ ನಮ್ಮ ಮಧ್ಯೆ ಇದ್ದ ಸಂಬಂಧವು ಮುರಿದು ಹೋಗುವ ಸಾಧ್ಯತೆಯೂ ಇದೆ. ಇತರರಿಗೆ ನೆರವಾಗುವವನನ್ನು ಅಲ್ಲಾಹನು ಇಷ್ಟಪಡುತ್ತಾನೆ. ಪ್ರವಾದಿ ಯವರು(ಸ) ಹೇಳಿದ್ದಾರೆ, “ಅಲ್ಲಾಹನಿಗೆ ಅತ್ಯಂತ ಪ್ರಿಯವಾದ ವ್ಯಕ್ತಿ ಜನರಿಗೆ ಅತೀ ಹೆಚ್ಚು ಉಪಕಾರ ಮಾಡುವವನಾಗಿದ್ದಾನೆ.”
8. ಕ್ಷಮೆಯನ್ನೂ ಸಹನೆಯನ್ನೂ ಮೈಗೂಡಿಸಿಕೊಳ್ಳಬೇಕು: ಕ್ಷಮೆ ಮತ್ತು ಸಹನೆಯು ಓವ್ರ ವಿಶ್ವಾಸಿಯ ಅತಿ ದೊಡ್ಡ ಅಸ್ತ್ರವಾಗಿದೆ. ಇವುಗಳು ಎಂಥ ಕಠಿಣ ಹೃದಯಿಯನ್ನೂ ಶರಣಾಗಿಸುತ್ತದೆ. ಅತ್ಯಂತ ಶಕ್ತಿಶಾಲಿ ವ್ಯಕ್ತಿಯು ಮಲ್ಲಯುದ್ಧದಲ್ಲಿ ಜಯಿಸುವವನಲ್ಲ. ಬದಲಾಗಿ ಪ್ರತಿಕಾರ ತೀರಿಸುವ ಶಕ್ತಿ ಇದ್ದೂ ಕ್ಷಮಿಸುವವನಾಗಿದ್ದಾನೆ ನಿಜವಾದ ಮಲ್ಲ. ಯಾರಾದರೂ ನಮ್ಮನ್ನು ಜನರ ಮುಂದೆ ತಾನು ದೊಡ್ಡ ಶಕ್ತಿವಂತ ಎಂದು ಬಿಂಬಿಸಲು ಅಶ್ಲೀಲವಾಗಿ ಬಯ್ಯುವಾಗ ನಾವು ಅವನಿಗೆ ಪ್ರತ್ಯುತ್ತರ ನೀಡದೆ ಸಹನೆ ವಹಿಸಿ ಅವನ ಕಡೆಗೆ ಒಂದು ಮುಗುಳ್ನಗೆ ಬೀರಿದರೆ ಅವನು ಖಂಡಿತ ವಾಗಿಯೂ ಮುಜುಗರಕ್ಕೊಳಾಗುತ್ತಾನೆ. ಅವನು ಹಾಗೆ ಬೈಯುವಾಗ ಅಲ್ಲಿ ಅವಮಾನಕ್ಕೀಡಾಗುವುದು ನಾವಲ್ಲ. ಬದಲಾಗಿ ಅವನೇ ಆಗಿದ್ದಾನೆ. ಅಲ್ಲಾಹನು ಹೇಳುತ್ತಾನೆ, “ಒಳಿತು ಮತ್ತು ಕೆಡುಕು ಸರಿಸಮಾನವಲ್ಲ. ನೀವು ಕೆಡುಕನು ಅತ್ಯುತ್ತಮ ಒಳಿತಿನ ಮೂಲಕ ದೂರೀಕರಿಸಿರಿ. ನಿವ್ಮೊಂದಿಗೆ ಹಗೆತನ ಕಟ್ಟಿಕೊಂಡವನು ನಿಮ್ಮ ಆಪ್ತಮಿತ್ರನಾಗಿ ಬಿಡುವುದನ್ನು ನೀವು ಕಾಣುವಿರಿ.” (ಹಾಮಿಮ್ ಅಸ್ಸಜ್ದ: 34)
9. ಒಳಿತನ್ನು ಬಯಸಬೇಕು: ನವ್ಮೊಂದಿಗೆ ಬೆರೆಯುತ್ತಿರುವ ಜನರಿಗೆ ಒಳಿತು ಸಿಗಬೇಕು ಎಂಬ ಮನಸ್ಸು ನಮ್ಮದಾಗ ಬೇಕು. ಅವನಲ್ಲಿ ಏನಾದರೂ ಅಭಿವೃದ್ಧಿ ಉಂಟಾದರೆ ಅದಕ್ಕೆ ಅಸೂಯೆ ಪಡಬಾರದು. ಬದಲಾಗಿ ಅವನ ಸಂತೋಷದಲ್ಲಿ ಪಾಲ್ಗೊಳ್ಳಬೇಕು. ಮನಸ್ಸಿನೊಳಗೆ ಇತರರ ಬಗ್ಗೆ ಅಸೂಯೆ ತುಂಬಿಕೊಂಡಿದ್ದರೂ ಹೊರಗಡೆ ಕೃತಕ ನಗೆ ಬೀರುವವರಿದ್ದಾರೆ. ಇದು ಸಲ್ಲದು. ಪ್ರವಾದಿಯವರು(ಸ) ಹೇಳಿದ್ದಾರೆ, “ನೀವು ಅಸೂಯೆಯ ಬಗ್ಗೆ ಎಚ್ಚರ ವಹಿಸಿರಿ. ಬೆಂಕಿಯು ಕಟ್ಟಿಗೆಯನ್ನು ತಿನ್ನುವಂತೆ ಅಸೂಯೆಯು ಸತ್ಕಮ್ರಗಳನ್ನು ತಿನ್ನುತ್ತದೆ.”
10. ಕ್ಷಮೆ ಕೇಳುತ್ತಿರಬೇಕು: ನಮ್ಮಲ್ಲಿ ತಪ್ಪು ಸಂಭವಿಸು ವುದು ಸಹಜವಾಗಿದೆ. ಮನುಷ್ಯನಾದ ಮೇಲೆ ತಪ್ಪು ಸಂಭವಿಸಲೇಬೇಕು. ಕೆಲವು ತಪ್ಪುಗಳು ವೈಯಕ್ತಿಕವಾದರೆ ಇನ್ನು ಕೆಲವು ತಪ್ಪು ಗಳು ಇತರರಿಗೆ ದೋಷ ಉಂಟು ಮಾಡುವಂಥವುಗಳಾಗಿವೆ. ಇತರರಿಗೆ ನಮ್ಮಿಂದ ಯಾವುದೇ ತಪ್ಪು ಸಂಭವಿಸಿದರೆ ಅವರೊಂದಿಗೆ ಕ್ಷಮೆ ಕೇಳಬೇಕು. ಅದು ಎಷ್ಟು ಸಣ್ಣದಾದರೂ ಸರಿ. ಪ್ರವಾದಿಯವರು(ಸ) ಹೇಳಿದರು, “ಆದಮರ ಎಲ್ಲಾ ಸಂತತಿಗಳು ತಪ್ಪೆಸಗುವವರಾಗಿ ದ್ದಾರೆ. ಅವರಲ್ಲಿ ಅತ್ಯುತ್ತಮನು ಪಶ್ಚಾತ್ತಾಪ ಪಡುವವನಗಿ ದ್ದಾನೆ.” ನಾವು ಕ್ಷಮೆ ಕೇಳುವಾಗ ಅವರಿಗೆ ನಮ್ಮ ಮೇಲೆ ಗೌರವ ಮೂಡುತ್ತದೆ. ಇದರಿಂದಾಗಿ ನಮ್ಮ ಮತ್ತು ಅವರ ಮಧ್ಯೆ ಬಾಂಧವ್ಯ ಉಂಟಾಗುತ್ತದೆ.
11. ವಸ್ತ್ರಧಾರಣೆ ಸರಳ ಮತ್ತು ಶುದ್ಧವಾಗಿರಬೇಕು: ಓವ್ರನ ವಸ್ತ್ರಧಾರಣೆಯು ಜನರು ಅವನನ್ನು ನೋಡುವ ದೃಷ್ಟಿಕೋನದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಸರಳವೂ ಶುಭ್ರವೂ ಆದ ವಸ್ತ್ರ ಧರಿಸಿದ ಓವ್ರ ವ್ಯಕ್ತಿ ಏನಾದರೂ ಹೇಳುತ್ತಾನೆಂದಾದರೆ ಅದನ್ನು ಆಲಿಸಲು ಜನರಿರುತ್ತಾರೆ. ಅವನ ಮಾತಿಗೆ ಮನ್ನಣೆ ಲಭಿಸುತ್ತದೆ. ಜನರು ಅಂಥವರೊಂದಿಗೆ ಸಹವಾಸ ಬೆಳೆಸಲು ಬಯಸುತ್ತಾರೆ. ಶುದ್ಧಿ ಮತ್ತು ಸರಳತೆಗೆ ಇಸ್ಲಾಮ್ ಮಹತ್ವ ನಿಡಿದೆ. ಶುದ್ಧಿಯು ವಿಶ್ವಾಸದ ಅಧ್ರಾಂಶವಾಗಿದೆ.
ಈ ಗುಣಗಳನ್ನೆಲ್ಲಾ ಮೈಗೂಡಿಸಿಕೊಂಡಿರುವವನು ಖಂಡಿತವಾಗಿಯೂ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರನಾಗುತ್ತಾನೆ. ಜನರ ವಧ್ಯೆ ಅಂತಹ ವ್ಯಕ್ತಿಗಳ ಪದವಿಯು ಉನ್ನತಿಗೇರಿರು ತ್ತದೆ. ಆದ್ದರಿಂದ ನಾವು ಈ ಗುಣಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ಮೈಗೂಡಿಸಿಕೊಳ್ಳಬೇಕು.

ಗುರುವಾರ, ಫೆಬ್ರವರಿ 09, 2012

ಅವರು ಕೇಳುತ್ತಿರುವುದು ದುಡ್ಡಲ್ಲ..... ಆದರೂ


ಕುಟುಂಬ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳು ಸಂಭವಿಸುತ್ತಿರುವ ಈ ಕಾಲದಲ್ಲಿ ಅತೀ ಹೆಚ್ಚು ಸಂಕಷ್ಟಗಳನ್ನು ಅನುಭವಿಸುತ್ತಿರು ವವರು ವೃದ್ಧರಾಗಿದ್ದಾರೆ. ವೃದ್ದಾಪ್ಯ ಎಂಬುದು ಸ್ವಾಭಾವಿಕವಾದರೂ ಇಂದು ಹಲವರಿಗೆ ದೊಡ್ಡ ತಲೆಬೇನೆಯಾಗಿ ಪರಿಗಣಿಸಿದೆ. ಯೌವನದ ದಿನಗಳು ಕಳೆದ ಬಳಿಕ ಬರುವ ಈ ಶಾರೀರಿಕ ದೌಬ್ರಲ್ಯ ಹಾಗೂ ಪರಾಶ್ರಯಕ್ಕೆ ಹಲವರು ಎದೆಗುಂದುತ್ತಿದ್ದಾರೆ. ಹಳೆಯ ಶಕ್ತಿ ಸಾಮಾಥ್ಯ್ರವು ನಷ್ಟ ಹೊಂದಿ ಪ್ರಾಥಮಿಕ ಅವಶ್ಯಕತೆಗಳ ಪೂರೈಕೆಗಾಗಿ ಇತರರನ್ನು ಆಶ್ರಯಿಸುವ ಪರಿಸ್ಥಿತಿ ನಿಮ್ರಾಣವಾಗುತ್ತದೆ. ದೃಷ್ಟಿದೋಶ, ಶ್ರವಣದೋಶ ದೊಂದಿಗೆ ವೃದ್ಧಾಪ್ಯ ಸಹಜವಾದ ಹಲವಾರು ರೋಗಗಳು ಬರುವಾಗ ದೈನಂದಿನ ಜೀವನವು ಕಷ್ಟಕರವಾಗುತ್ತದೆ. ಇಂತಹ ಪರಿಸ್ಥಿತಿ ನಿಮ್ರಾಣ ವಾದಾಗ ಆ ಹಿರಿಯರು ಯಾರದಾದರೂ ಆಶ್ರಯವನ್ನು ಬಯಸುತ್ತಾರೆ. ಯಾರದಾದರೂ ಸಾಂತ್ವನಗಳಿಗೆ ಅವರು ಕಿವಿ ನಿಮಿರಿಸಿರುತ್ತಾರೆ. ಯಾರೊಂದಿಗಾದರೂ ಮಾತನಾಡಬೇಕೆಂದು ಹಂಬಲಿಸುತ್ತಿರುತ್ತಾರೆ. ಆದರೆ ನಮ್ಮ ಈ ಹೊಸ ತಲೆಮಾರಿನ ಮಂದಿಗೆ ತಮ್ಮ ನಿಬಿಢತೆಯಿಂದಾಗಿ ಆ ಹಿರಿಯರ ಕಡೆಗೆ ಗಮನ ಹರಿಸಲು ಸಾಧ್ಯ ವಾಗುತ್ತಿಲ್ಲ. ಇನ್ನು ನಿಬಿಢತೆಯಿಲ್ಲದಿದ್ದರೂ ಅವರ ಕಡೆಗೆ ಗಮನ ಹರಿಸುತ್ತಿಲ್ಲ. ಶಾರೀರಿಕ ದೌಬ್ರಲ್ಯದ ಜೊತೆಗೆ, ನಾವು ಅವರನ್ನು ನಿಲ್ರಕ್ಷಿಸುತ್ತೇವೆ ಎಂಬ ಚಿಂತೆಯು ಕಾಡತೊಡಗಿದಾಗ ಅವರು ಮಾನಸಿಕವಾಗಿ ಆಯಾಸ ಪಡುತ್ತಾರೆ. ಕುಟುಂಬ ದಲ್ಲಿರುವ ವೃದ್ಧರಿಗೆ ಆಹಾರ, ವಸ್ತ್ರಗಳನ್ನು ನೀಡಿ ದರೆ ತಮ್ಮ ಬಾಧ್ಯತೆ ಮುಗಿಯಿತು ಎಂದು ಭಾವಿಸುವ ಹಲವರಿದ್ದಾರೆ. ಆದರೆ ಇದಕ್ಕಿಂತ ಮಿಗಿಲಾಗಿ ಪ್ರೀತಿ, ಕಾಳಜಿ, ವಾತ್ಸಲ್ಯ ಮುಖ್ಯವಾಗಿದೆ.
ಇಂದು ಹೆಚ್ಚುತ್ತಿರುವ ವೃದ್ಧಾಶ್ರಮಗಳು ವೃದ್ಧ ಜನರೊಂದಿಗಿನ ನಿಲ್ರಕ್ಷ್ಯಕ್ಕೆ ಪುರಾವೆಗಳಾಗಿವೆ. ಕೆಲವಾರು ವಷ್ರಗಳ ಹಿಂದೆ ವೃದ್ಧಾಶ್ರಮಗಳ ಕುರಿತು ಕೇಳಲು ಮತ್ತು ಓದಲು ಸಾಧ್ಯವಾಗಿತ್ತು. ಆದರೆ ಇಂದು ಅವುಗಳು ವ್ಯಾಪಕವಾಗಿ ನಮ್ಮ ಕಣ್ಮುಂದೆಯೇ ಇವೆ. ಮಕ್ಕಳೊಂದಿಗೆ ಕಾಲ ಕಳೆಯ ಬೇಕಾಗಿದ್ದ ವೃದ್ಧರು ಇಂದು ಇಂತಹ ವೃದ್ಧಾಶ್ರಮಗಳಲ್ಲಿ ತಮ್ಮ ಜೀವನದ ಸಂಜೆಯನ್ನು ಕಳೆಯುತ್ತಿದ್ದಾರೆ. ಅವರು ಈ ಶಿಕ್ಷೆ ಅನುಭವಿಸಲು ಕಾರಣ ತಮ್ಮ ಮಕ್ಕಳನ್ನು ಹೊತ್ತು ಹೆತ್ತು ಸಾಕಿ ಸಲಹಿ ದೊಡ್ಡವರನ್ನಾಗಿಸಿದುದಾಗಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ವಿದ್ಯಾವಂತರನ್ನಾಗಿಸಿ ದಾಗ ಆ ಮಕ್ಕಳಿಗೆ ವೃದ್ಧ ತಂದೆ-ತಾಯಿಗಳು ಬೇಡದ ವಸ್ತುವಾಗುತ್ತಾರೆ. ವೃದ್ಧ ತಂದೆ-ತಾಯಿಗಳು ಆ ಮಕ್ಕಳಿಗೆ ಇತರರ ಮುಂದೆ ತಮ್ಮ ಪ್ರತಿಷ್ಠೆಗೆ ಕುಂದು ತರುವ ವಸ್ತುಗಳಾಗಿ ಮಾಪ್ರಡುತ್ತಾರೆ. ಮಕ್ಕಳು ಚಿಕ್ಕವರಿರುವಾಗ ತಂದೆ-ತಾಯಿಗಳು ತಮ್ಮ ಜೀವನವನ್ನೇ ಅವರಿಗೆ ಮುಡಿಪಾಗಿಟ್ಟಿರುತ್ತಾರೆ. ಅವರನ್ನು ಬೆಳೆಸಲು ಏನೆಲ್ಲಾ ಸಂಕಷ್ಟ ಅನುಭವಿಸುತ್ತಾರೆ. ಮಕ್ಕಳು ಸಂತೋಷ ಗೊಂಡಾಗ ತಾವೂ ಸಂತೋಷ ಪಡುತ್ತಾರೆ. ಮಕ್ಕಳ ದುಃಖದಲ್ಲಿ ಅವರೂ ಪಾಲ್ಗೊಳ್ಳುತ್ತಾರೆ. ಹೀಗೆ ಮಕ್ಕಳಿಗೆ ಯಾವ ಕುಂದು ಕೊರತೆಯಾಗ ದಂತೆ ಅವರನ್ನು ಬೆಳೆಸುತ್ತಾರೆ. ಕೊನೆಗೆ ಮಕ್ಕಳಿಗೆ ಕೈಕಾಲು ಗಟ್ಟಿಯಾದಾಗ, ಅವರಿಗೆ ಉದ್ಯೋಗ ದೊರೆತಾಗ “ಅಟ್ಟಕ್ಕೆ ಹತ್ತಿದ ಮೇಲೆ ಏಣಿಯನ್ನು ತುಳಿದಂತೆ” ಹೆತ್ತವರು ಭಾರವಾಗುತ್ತಾರೆ. ತಂದೆ-ತಾಯಿಗಳು ತೋರಿಸಿದ ಪ್ರೀತಿಗೆ ಕೊನೆಗೆ ಅವರು ಕಟ್ಟುವ ಬೆಲೆಯು ವೃದ್ಧಾಶ್ರಮವಾಗಿದೆ.
ಕುಟುಂಬದ ಅಸ್ತಿತ್ವವು ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರಗಳ ಮೇಲೆ ಅವಲಂಬಿತವಾಗಿದೆ. ಮನುಷ್ಯನಿಗೆ ಇತರ ಪ್ರಾಣಿಗಳಂತೆ ಜೀವಿಸಲು ಸಾಧ್ಯವಿಲ್ಲ. ಇತರ ಪ್ರಾಣಿಗಳು ತಮ್ಮ ತಾಯಿಯ ಆಶ್ರಯವನ್ನು ಕೆಲವಾರು ತಿಂಗಳುಗಳ ಮಟ್ಟಿಗೆ ಪಡೆದಿರುತ್ತವೆ. ಬಳಿಕ ಅವು ಸ್ವತಂತ್ರವಾಗಿ ಜೀವಿಸ ತೊಡಗುತ್ತವೆ. ಆಗ ಅವುಗಳು ತಾಯಿ ಯನ್ನು ಮರೆಯುತ್ತವೆ. ಆದರೆ ಮನುಷ್ಯನು ಹಾಗಲ್ಲ. ಅವನು ಏನಿಲ್ಲದಿದ್ದರೂ ಹತ್ತೋ ಹದಿನೈದೋ ವಷ್ರ ಹೆತ್ತವರನ್ನು ಆಶ್ರಯಿಸುತ್ತಾನೆ. ಅವನು ಸ್ವತಂತ್ರವಾದಾಗ, ತನ್ನ ಕಾಲ ಮೇಲೆ ನಿಲ್ಲಲು ಸಾಧ್ಯವಾಗುವಾಗ ಅವನು ಆ ವರೆಗೆ ಹೆತ್ತವರಿಂದ ಪಡೆದ ಪ್ರೀತಿ, ಕಾಳಜಿಗೆ ಪ್ರತ್ಯುಪಕಾರ, ಕೃತಜ್ಞತೆ ಸಲ್ಲಿಸಬೇಕು. ಅದು ಬಿಟ್ಟು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಕೃತಘ್ನತೆಯ ಪರಮಾ ವಧಿಯಲ್ಲವೇ?
ವೃದ್ಧಾಪ್ಯ ಎಂಬುದು ಎರಡನೇ ಶೈಶವಾ ವಸ್ಥೆಯಾಗಿದೆ. ಆಗ ಹಳೆಯ ಸ್ವಭಾವಗಳೂ ವತ್ರನೆಗಳೂ ಬದಲಾಗಬಹುದು. ಅದು ಅವರ ವಯಸ್ಸಿನ ಸಹಜ ಸ್ವಭಾವ ಎಂದು ತಿಳಿದು ಅವರನ್ನು ಉಪಚರಿಸಬೇಕು. ಚಿಕ್ಕ ಮಕ್ಕಳ ವತ್ರನೆಯು ನಮಗೆ ಆನಂದವನ್ನು ನೀಡುತ್ತದೆ. ಅವರ ವತ್ರನೆಯನ್ನೂ ಅದೇ ರೀತಿಯಾಗಿ ಭಾವಿಸಬೇಕು. ತನ್ನ ಬಾಲ್ಯಾವಸ್ಥೆಯಲ್ಲಿ ತನ್ನನ್ನು ಅವರು ಪ್ರೀತಿಯಿಂದ ಹೇಗೆ ಆರೈಕೆ ಮಾಡಿದ್ದಾರೋ ಅದೇ ರೀತಿ ಅವರನ್ನೂ ಆರೈಕೆ ಮಾಡಬೇಕು. ಹೆತ್ತವರೊಂದಿಗೆ ‘ಛೇ’ ಎಂದು ಕೂಡಾ ಹೇಳಬಾರ ದೆಂದು ಅಲ್ಲಾಹನು ಆಜ್ಞಾಪಿಸಿರುವಾಗ ಅವ ರೊಂದಿಗೆ ನಮ್ಮ ವತ್ರನೆ ಹೇಗಿದೆ ಎಂದು ನಾವು ಸ್ವತಃ ಆತ್ಮಾವಲೋಕನ ನಡೆಸಬೇಕಾಗಿದೆ.
ಅಲ್ಲಾಹನೊಂದಿಗಿನ ಬಾಧ್ಯತೆಯ ಬಳಿಕದ ಬಾಧ್ಯತೆಯಾಗಿ ಕುರ್ಆನ್ ಪ್ರಸ್ತಾಪಿಸುವುದು ಹೆತ್ತವ ರೊಂದಿಗಿನ ಬಾಧ್ಯತೆಯ ಕುರಿತಾಗಿದೆ. ಅಲ್ಲಾಹನು ಹೇಳುತ್ತಾನೆ. “ನಿಮ್ಮ ಪ್ರಭು (ಹೀಗೆ) ವಿಧಿಸಿ ಬಿಟ್ಟಿದ್ದಾನೆ. ನೀವು ಕೇವಲ ಅವನೊಬ್ಬನ ಹೊರತು ಇನ್ನಾರ ದಾಸ್ಯ-ಆರಾಧನೆಯನ್ನೂ ಮಾಡಬಾರದು. ಮಾತಾಪಿತರೊಡನೆ ಸೌಜನ್ಯದಿಂದ ವತ್ರಿಸಿರಿ. ಅವರ ಪೈಕಿ ಒಬ್ಬರು ಅಥವಾ ಅವರಿ ಬ್ಬರೂ ವೃದ್ಧರಾಗಿ ನಿಮ್ಮ ಬಳಿಯಲ್ಲಿದ್ದರೆ ಅವರ ಬಗ್ಗೆ ಚಕಾರವೆತ್ತಬೇಡಿರಿ ಮತ್ತು ಅವರನ್ನು
ಜರೆಯ ಬೇಡಿರಿ. ಅವರೊಂದಿಗೆ ವಿನಯ ಪೂರ್ವಕವಾಗಿ ಮಾತನಾಡಿರಿ. ನಯವಿನಯ ಮತ್ತು ಕರುಣೆ ಯೊಂದಿಗೆ ಅವರ ಮುಂದೆ ಬಾಗಿಕೊಂಡಿರಿ. “ಓ ನನ್ನ ಪ್ರಭೂ! ಇವರು ಚಿಕ್ಕಂದಿನಲ್ಲಿ ದಯಾ ವಾತ್ಸಲ್ಯಗಳಿಂದ ನನ್ನನ್ನು ಸಾಕಿದಂತೆಯೇ ನೀನು ಅವರ ಮೇಲೆ ಕೃಪೆ ತೋರು” ಎಂದು ಪ್ರಾಥ್ರಿಸಿರಿ.” (ಬನೀ ಇಸ್ರಾಈಲ್: 23-24)
ವೃದ್ಧಾಪ್ಯದಲ್ಲಿ ಹೆತ್ತವರ ಅವಶ್ಯಕತೆಗಳ ಅರಿತು ಅವುಗಳನ್ನು ಪೂರೈಸಲು ಮಕ್ಕಳಿಗೆ ಸಾಧ್ಯವಾಗಬೇಕು. ಕುಟುಂಬದ ಸಮಸ್ತ ಸಂಗತಿ ಗಳನ್ನು ನಿಯಂತ್ರಿಸುತ್ತಿದ್ದ ತಂದೆಯು ವೃದ್ಧರಾಗಿ ಮನೆಯೊಳಗೆ ಸೇರಿಕೊಂಡಾಗ ತನ್ನ ವೈಯಕ್ತಿಕ ಅವಶ್ಯಕತೆಗಳನ್ನು ಪೂರೈಸಲು ಕೂಡಾ ಕೈಯಲ್ಲಿ ಹಣವಿಲ್ಲದ ಸ್ಥಿತಿ ಉಂಟಾಗಬಾರದು. ಯಾವುದೇ ತೀಮ್ರಾನ ಕೈಕೊಳ್ಳುವಾಗ ಹೆತ್ತವರಲ್ಲಿ ಕೇಳಿ ತೀಮ್ರಾನಿಸಬೇಕು. ಕಾರಣ ಅವರು ಹೆಚ್ಚು ಅನುಭವಸ್ಥರಾಗಿರುತ್ತಾರೆ. ಅಲೀ(ರ) ಹೇಳಿದರು. “ವೃದ್ಧರ ಅಭಿಪ್ರಾಯವು ಒಂದು ಮಗು ಕಣ್ಣಾರೆ ಕಂಡು ಹೇಳುವ ವಿಷಯಕ್ಕಿಂತ ಉತ್ತಮ ವಾಗಿರುತ್ತದೆ.”
ಗಂಡು ಮಕ್ಕಳು ವಿವಾಹವಾದರೆ ಅವರು ತವ್ಮೊಂದಿಗೆ ತೋರುವ ಪ್ರೀತಿಯು ಕಡಿಮೆಯಾಗಬಹುದೆಂದು ಹೆದರಿ ಮದುವೆ ಮಾಡಿಸಲು ಹಿಂದೇಟು ಹಾಕುವವರಿದ್ದಾರೆ. ಇದು ಕುಟುಂಬ ದಲ್ಲಿ ಸಮಸ್ಯೆಯನ್ನು ಸೃಷ್ಟಿಸಬಹುದು. ಹೆತ್ತವರ ಮನಸ್ಸಿಗೆ ನೋವುಂಟು ಮಾಡದೆಯೂ ಸಂಗಾತಿಯ ಹಕ್ಕುಗಳನ್ನು ಉಲ್ಲಂಘಿಸದೆಯೂ ಪರಿಸ್ಥಿತಿಯನ್ನು ನಿಭಾಯಿಸುವುದು ಗಂಡಾದವನ ಸಾಮಥ್ಯ್ರಕ್ಕೆ ಸೇರಿದ್ದಾಗಿದೆ. ಇದು ಅತ್ಯಂತ ಕಷ್ಟಕರವೂ ಹೌದು. ಹೆತ್ತವರ ತೃಪ್ತಿಯು ಅಲ್ಲಾಹನ ತೃಪ್ತಿ ಮತ್ತು ಅವರ ಕೋಪವು ಅಲ್ಲಾಹನ ಕೋಪವೆಂದೂ ತಿಳಿದುಕೊಳ್ಳಬೇಕು. ಅವರ ಸೇವೆಯು ಸ್ವರ್ಗಕ್ಕಿರುವ ಹಾದಿಯಾಗಿದೆ. ವೃದ್ಧರಾದ ಹೆತ್ತವರಿದ್ದೂ ಅವರ ಸೇವೆ ಮಾಡಿ ಸ್ವಗ್ರ ಗಳಿಸಲು ಸಾಧ್ಯವಾಗದಿದ್ದವನು ಪರಾಜಿತನೆಂದು ಪ್ರವಾದಿಯವರು(ಸ) ಹೇಳಿದ್ದಾರೆ.
ಹೆತ್ತವರಲ್ಲದ ವೃದ್ಧರು ಮನೆಯಲ್ಲೋ ಇತರ ಕಡೆಗಳಲ್ಲೋ ಇರಬಹುದು. ಅವರನ್ನು ಅತ್ಯಂತ ನಾಜೂಕಾಗಿ ಆರೈಕೆ ಮಾಡಬೇಕು. ಕುಟುಂಬ ಸಂಬಂಧಿ ಎಂಬ ನೆಲೆಗಿಂತ ಹೊರತಾಗಿ ವಯಸ್ಸಾದವರು ಎಂಬ ಪ್ರತ್ಯೇಕ ಪರಿಗಣನೆಯನ್ನು ಅವರಿಗೆ ನೀಡಬೇಕು. ಕಿರಿಯವರೊಂದಿಗೆ ಕರುಣೆ ತೋರುವುದು ಮತ್ತು ಹಿರಿಯವರನ್ನು ಗೌರವಿಸು ವುದು ಇಸ್ಲಾಮ್ ಕಲಿಸಿರುವ ವಿಚಾರವಲ್ಲವೇ?

ಹೃದಯಕ್ಕೆ ತುಕ್ಕು ಹಿಡಿಯದಿರಲಿ



ವ್ರ ಮನುಷ್ಯನ ಶರೀರದಲ್ಲಿ ಹೃದಯಕ್ಕೆ ಮಹತ್ವದ ಸ್ಥಾನವಿದೆ. ಶಾರೀರಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಅದು ಉನ್ನತ ಸ್ಥಾನವನ್ನು ಪಡೆದಿದೆ. ಮನುಷ್ಯನ ಶರೀರದ ಬಹು ಮುಖ್ಯ ಘಟಕವಾದ ರಕ್ತವನ್ನು ಸಮಸ್ತ ಶರೀರಕ್ಕೆ ತಲುಪಿಸುವ ಕೆಲಸವನ್ನು ಹೃದಯವು ನಿವ್ರಹಿಸುತ್ತದೆ. ಆ ರಂಗದಲ್ಲಿ ಅದು ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿವ್ರಹಿಸುತ್ತದೆ. ಇದು ಶಾರೀರಿಕ ಕೆಲಸವಾದರೆ, ಇನ್ನು ಆಧ್ಯಾತ್ಮಿಕ ರಂಗದಲ್ಲಿ ಹಲವಾರು ವಿಚಾರ ದಲ್ಲಿ ಹೃದಯವು ತನ್ನ ಕೆಲಸದಲ್ಲಿ ವಿಫಲವಾಗಿದೆ. ಹೃದಯದ ಶಾರೀರಿಕ ಕೆಲಸವನ್ನು ನಿಯಂತ್ರಿಸುವ ಶಕ್ತಿಯನ್ನು ಅಲ್ಲಾಹನು ಮನುಷ್ಯನಿಗೆ ನೀಡಿಲ್ಲ. ಆದರೆ ಆಧ್ಯಾತ್ಮಿಕ ರಂಗದಲ್ಲಿ ಆ ಶಕ್ತಿ ಯನ್ನು ನೀಡಿದ್ದಾನೆ.
ಅಲ್ಲಾಹನು ಹೇಳುತ್ತಾನೆ, “ನಾವು ಅವನಿಗೆ ಮಾಗ್ರದಶ್ರನ ಮಾಡಿದೆವು. ಅವನು ಕೃತಜÕತೆ ಸಲ್ಲಿಸುವವನಾಗಲಿ ಅಥವಾ ಕೃತಘ್ನನಾಗಲಿ” (ಅದ್ದಹ್್ರ: 3) ಮತ್ತು “ಅವನಿಗೆ ಎರಡು ಸುಸ್ಪಷ್ಟ ದಾರಿಗಳನ್ನು ತೋರಿಸಿ ಕೊಡಲಿಲ್ಲವೇ?” (ಅಲ್ ಬಲದ್: 10) ಈ ಎರಡು ಮಾಗ್ರಗಳಲ್ಲಿ ಯಾವುದನ್ನು ಬೇಕಾದರೂ ಹೃದಯವು ಸ್ವೀಕರಿಸುವಂತೆ ಮಾಡಲು ಮನುಷ್ಯನಿಗೆ ಸಾಧ್ಯವಿದೆ. ಆ ಸಾಮಥ್ಯ್ರ ವನ್ನು ಅಲ್ಲಾಹನು ನೀಡಿದ್ದಾನೆ. ಮನುಷ್ಯನ ಸೋಲು-ಗೆಲುವು ಈ ಎರಡು ಮಾಗ್ರಗಳ ಆಯ್ಕೆಗನುಗುಣವಾಗಿರುತ್ತದೆ.
ಹೃದಯವು ಒಳಿತು-ಕೆಡುಕುಗಳ ಉಗಮಸ್ಥಾನವಾಗಿದೆ. ಒಳಿತುಗಳು ಹುಟ್ಟುವುದು ಇಲ್ಲಿಂದಲೇ. ಕೆಡುಕುಗಳು ಜನ್ಮ ಪಡೆದು ತನ್ನ ಪ್ರತಾಪವನ್ನು ತೋರಿಸುವುದು ಕೂಡಾ ಹೃದಯ ದಿಂದಲೇ. ಹೃದಯದಲ್ಲಿ ಕೆಡುಕು-ಒಳಿತುಗಳ ನಡುವೆ ನಡೆಯುವ ಪೈಪೆÇೀಟಿಯಲ್ಲಿ ಮನುಷ್ಯನು ಯಾವುದಕ್ಕೆ ಬೆಂಬಲ ನೀಡುತ್ತಾನೋ ಅದಕ್ಕೆ ಹೊಂದಿಕೊಂಡಿರುತ್ತದೆ ಅವನ ಜೀವನ. ಒಳಿತುಗಳ ಕಡೆಗೆ ಬೆಂಬಲ ನೀಡುವುದು ಕಷ್ಟ ಸಾಧ್ಯವಾದ ಕೆಲಸವಾಗಿದೆ. ಕಾರಣ ಮನುಷ್ಯನ ಆತ್ಮವು ಕೆಡುಕುಗಳ ಕಡೆಗೆ ವಾಲಿಕೊಂಡಿರುತ್ತದೆ. ಮಾತ್ರವಲ್ಲ, ಕೆಡುಕುಗಳನ್ನು ಮಾಡಲು ಶೈತಾನನೂ ಪ್ರೇರೇಪಿಸುತ್ತಿ ರುತ್ತಾನೆ. ಆದರೆ ಒಳಿತುಗಳು ಹಾಗಲ್ಲ. ಒಳಿತುಗಳಿಗೆ ಬೆಂಬಲ ನೀಡಬೇಕಾದರೆ ಮನುಷ್ಯನು ಸ್ವತಃ ಪ್ರಯತ್ನಿಸಬೇಕು. ಕೆಡುಕುಗಳ ಕಡೆಗೆ ವಾಲಿರುವ ಆತ್ಮವನ್ನು ಮತ್ತು ಅದರೆಡೆಗೆ ಪ್ರೇರಣೆ ನೀಡುವ ಪಿಶಾಚಿಯನ್ನು ಮೆಟ್ಟಿ ನಿಂತು ಒಳಿತಿನ ಕಡೆಗೆ ಬೆಂಬಲ ನೀಡುವವನು ಖಂಡಿತವಾಗಿಯೂ ಇಹ-ಪರ ವಿಜಯ ಗಳಿಸುತ್ತಾನೆ.
ಹೃದಯವು ಉತ್ತಮಗೊಳ್ಳುವಾಗ ಮನುಷ್ಯನು ಸಜ್ಜನನಾಗುತ್ತಾನೆ. ಅವನ ಸಾಮಾಜಿಕ, ಆಥ್ರಿಕ, ರಾಜಕೀಯ, ಕೌಟುಂಬಿಕ ವೊದಲಾದ ರಂಗಗಳೆಲ್ಲವೂ ಒಳಿತಿನಿಂದ ಕೂಡಿರುವುದಾಗುತ್ತದೆ. ಅವನು ಅಲ್ಲಾಹನಿಗೂ, ಜನರಿಗೂ, ಎಲ್ಲರಿಗೂ ಅಚ್ಚುಮೆಚ್ಚಿನ ವ್ಯಕ್ತಿಯಾಗುತ್ತಾನೆ. ಸಮಾಜದ ಸುಧಾರಣೆಯಲ್ಲಿ ಅಂತಹ ಹೃದಯವು ದೊಡ್ಡ ಪಾತ್ರವಹಿಸುತ್ತದೆ.
ಎಲ್ಲಾ ಮನುಷ್ಯರೂ ತಪ್ಪೆಸಗುತ್ತಾರೆ. ಅದು ಅವರ ಪ್ರಕೃತಿ ಯಾಗಿದೆ. ಅಲ್ಲಾಹನ ಸೃಷ್ಟಿಗಳಲ್ಲಿ ಮಲಕ್ಗಳಿಗೆ ಮಾತ್ರ ತಪ್ಪೆಸ ಗುವ ಸಾಮಥ್ಯ್ರವನ್ನು ನೀಡಲಾಗಿಲ್ಲ. ಅವರು ಅಲ್ಲಾಹನ ಆಜೆÕಗಳಿಗೆ ಪÇರಕವಾಗಿ ವತ್ರಿಸಲು ಮಾತ್ರ ಸಾಧ್ಯ. ಆದರೆ ಮನುಷ್ಯನಿಗೆ ಅಲ್ಲಾಹನ ಆಜೆÕಗಳನ್ನು ಅನುಸರಿಸುವ ಮತ್ತು ಧಿಕ್ಕರಿಸುವ ಎರಡೂ ಸಾಮಥ್ಯ್ರಗಳನ್ನು ಅವನು ನೀಡಿದ್ದಾನೆ. “ಆದಮರ(ಅ) ಎಲ್ಲಾ ಸಂತತಿಗಳೂ ತಪ್ಪೆಸಗುತ್ತಾರೆ. ತಪ್ಪೆಸಗು ವವರಲ್ಲಿ ಅತ್ಯುತ್ತಮರು ಪಶ್ಚಾತ್ತಾಪ ಪಡುವವರಾಗಿದ್ದಾರೆ” ಎಂದು ಪ್ರವಾದಿಯವರು(ಸ) ತಿಳಿಸಿದ್ದಾರೆ. ಓವ್ರನು ಒಂದು ತಪ್ಪೆಸಗಿದಾಗ ಅವನ ಹೃದಯದಲ್ಲಿ ಒಂದು ಕಪÅ್ಪ ಚುಕ್ಕೆ ಬೀಳುತ್ತದೆ. ಅವನು ಆ ತಪ್ಪಿನ ಕುರಿತು ಪಶ್ಚಾತ್ತಾಪ ಪಟ್ಟು ಪಾಪ ವಿವೋಚನೆಗಾಗಿ ಪ್ರಾಥ್ರಿಸಿದಾಗ ಅವನ ಹೃದಯವು ಶುಭ್ರವಾಗುತ್ತದೆ. ಆದರೆ ಪಾಪಕೃತ್ಯಗಳನ್ನು ನಿರಂತರವಾಗಿ ಮಾಡುವಾಗ ಹೃದಯದಲ್ಲಿ ಬೀಳುವ ಕಪÅ್ಪ ಚುಕ್ಕೆಗಳು ಹೆಚ್ಚಾಗ ತೊಡಗುತ್ತವೆ. ಅಂತಹವರು ಪಶ್ಚಾತ್ತಾಪ ಪಡದೆ ಮುಂದುವರಿದರೆ ಪಾಪಗಳಿಂದಾಗಿ ಹೃದಯವು ಕಪ್ಪಾಗಿ ಹೋಗುತ್ತದೆ.
ಪ್ರವಾದಿಯವರು(ಸ) ನಾಲ್ಕು ವಿಧದ ಹೃದಯಗಳ ಕುರಿತು ಹೇಳಿದ್ದಾರೆ. 1. ದೀಪದಂತೆ ಪ್ರಕಾಶ ಹರಡುವ ನಿಷ್ಕಳಂಕ ಹೃದಯ 2. ಹೊದಿಕೆಯಿಂದ ಮುಚ್ಚಲ್ಪಟ್ಟ ಹೃದಯ 3. ತಲೆ ಕೆಳಗಾಗಿರುವ ಹೃದಯ 4. ಭಾರ ಕಡಿಮೆ ಇರುವ ಹೃದಯ.
ಒಂದನೇ ವಿಧದ ಹೃದಯವು ಸತ್ಯವಿಶ್ವಾಸಿಗಳದ್ದಾಗಿದೆ. ಅಂತಹ ಹೃದಯವು ನಿಷ್ಕಳಂಕವೂ ಪ್ರಾಮಾಣಿಕವೂ ಕೆಡುಕುಗಳಿಂದ ಮುಕ್ತವೂ ಆಗಿರುತ್ತದೆ. ಅಲ್ಲಾಹನಲ್ಲಿ ವಿಶ್ವಾಸವಿರಿಸಿ, ಪ್ರವಾದಿ(ಸ) ತೋರಿಸಿದ ಹಾದಿಯಲ್ಲಿ ಸಂಚರಿಸಿ ಜೀವನವನ್ನು ಸಂಸ್ಕರಿಸಿದ ಸತ್ಯವಿಶ್ವಾಸಿಗಳಿಗೆ ಮಾತ್ರ ಇಂತಹ ಹೃದಯಗಳಿರಲು ಸಾಧ್ಯ. ಇಂತಹ ಹೃದಯಗಳು ಸ್ವತಃ ಸದ್ಗುಣ ಸಂಪನ್ನವಾಗಿರುತ್ತದೆ ಮತ್ತು ಅಂಧಕಾರದಲ್ಲಿ ಬೆಳಗುವ ದೀಪದಂತೆ ಸುತ್ತ-ಮುತ್ತಲು ತನ್ನ ಪ್ರಕಾಶವನ್ನು ಹರಡಿರುತ್ತದೆ. ಇಂತಹ ಹೃದಯ ಇರುವವ ರೊಂದಿಗೆ ಬೆರೆಯುವವರಿಗೆ ಸತ್ಯದ ಹಾದಿಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ. ಈ ಹೃದಯವು ಸ್ವತಃ ಸನ್ಮಾಗ್ರದಲ್ಲಿರುವುದಲ್ಲದೆ ಇತರರನ್ನೂ ಸನ್ಮಾಗ್ರದಲ್ಲಿ ಮುನ್ನಡೆಸುತ್ತದೆ. ಅಬ್ದುಲ್ಲಾ ಬಿನ್ ಅಮ್್ರ(ರ) ವರದಿ ಮಾಡಿದ್ದಾರೆ: “ಒಮ್ಮೆ ಓವ್ರರು ಪ್ರವಾದಿಯವ ರೊಂದಿಗೆ(ಸ) ಕೇಳಿದರು, ಪ್ರವಾದಿವಯ್ರರೇ(ಸ) ಜನರಲ್ಲಿ ಶ್ರೇಷ್ಠ ವ್ಯಕ್ತಿ ಯಾರು?” ಪ್ರವಾದಿಯವರು(ಸ) ಹೇಳಿದರು, “ಶುದ್ಧ ಹೃದಯ ಮತ್ತು ಸತ್ಯಸಂಧ ನಾಲಗೆ ಇರುವವನು.” ಆಗ ಅನುಯಾಯಿಗಳು ಕೇಳಿದರು, “ಸತ್ಯಸಂಧತೆಯ ನಾಲಗೆ ಏನೆಂದು ನಮಗೆ ತಿಳಿದಿದೆ, ಆದರೆ ಶುದ್ಧ ಹೃದಯ ಎಂದರೇನು?” ಪ್ರವಾದಿ(ಸ) ಹೇಳಿದರು, “ದೇವಭಯವೂ ಭಕ್ತಿಯೂ ಇರುವ ಮತ್ತು ಮಾಲಿನ್ಯಗಳಿಂದ ಮುಕ್ತವಾದ ಹೃದಯ.”
ಎರಡನೇ ವಿಧದ ಹೊದಿಕೆಯಿಂದ ಮುಚ್ಚಲ್ಪಟ್ಟ ಹೃದಯವು ಸತ್ಯ ನಿಷೇಧಿಗಳದ್ದಾಗಿದೆ. ವಿಶ್ವಾಸಿಗಳ ಹೃದಯವು ಪ್ರಕಾಶದಿಂದ ಪ್ರಜ್ವಲಿಸುವುದಾದರೆ ಸತ್ಯ ನಿಷೇಧಿಗಳ ಹೃದಯವು ಅಂಧಕಾರದಿಂದ ಕೂಡಿರುತ್ತದೆ. ಅಲ್ಲಾಹನು ಹೇಳುತ್ತಾನೆ, “ಅಂಧಕಾರದ ಮೇಲೆ ಅಂಧಕಾರ ಕವಿದಿದೆ. ಮನುಷ್ಯನು ತನ್ನ ಕೈಯನ್ನು ಹೊರ ಚಾಚಿದರೆ ಅದೂ ಅವನಿಗೆ ಕಾಣದು. ಸನ್ಮಾಗ್ರದ ಕಡೆಗೆ ಅದು ಒಮ್ಮೆಯೂ ದೃಷ್ಟಿ ಹರಿಸಲಿಕ್ಕಿಲ್ಲ.” (ಅನ್ನೂರ್: 40
ಅಲ್ಲಾಹನು ಹೇಳುತ್ತಾನೆ, “ಸತ್ಯ ನಿಶೇಧಿಗಳಿಗೆ ನೀವು ಎಚ್ಚರಿಕೆ ಕೊಟ್ಟರೂ ಕೊಡದಿದ್ದರೂ ಸರಿಯೇ. ಅವರಂತು ವಿಶ್ವಾಸವಿಡುವವ ರಲ್ಲ. ಅಲ್ಲಾಹನು ಅವರ ಹೃದಯಗಳ ಹಾಗೂ ಕಿವಿಗಳ ಮೇಲೆ ಮುದ್ರೆಯೊತ್ತಿರುತ್ತಾನೆ. ಅವರ ದೃಷ್ಟಿಗಳ ಮೇಲೆ ಪರದೆ ಬಿದ್ದಿದೆ.
ಅವರಿಗೆ ಘೋರ ಶಿಕ್ಷೆ ಕಾದಿದೆ. (ಅಲ್ಬಕರ: 6-7)
ಮೂರನೇ ವಿಧದ ತಲೆಕೆಳಗಿರುವ ಹೃದಯವು ಕಪಟ ವಿಶ್ವಾಸಿಗಳದ್ದಾಗಿದೆ. ಅವರು ಸಂದಭ್ರಕ್ಕೆ ತಕ್ಕಂತೆ ಸತ್ಯವಿಶ್ವಾಸಿಗಳೂ ಸತ್ಯ ನಿಷೇಧಿಗಳೂ ಆಗುತ್ತಾರೆ. ಅವರ ಹೃದಯವು ಕಾಪಟ್ಯದಿಂದ ತುಂಬಿರುತ್ತದೆ. ಗೋಸುಂಬೆಯಂತೆ ಬಣ್ಣ ಬದಲಿಸುವುದು ಅವರ ಧಮ್ರವಾಗಿದೆ. ಸಂದಭ್ರಕ್ಕೆ ತಕ್ಕಂತೆ ವತ್ರಿಸಿ ಲಾಭಗಳಿಸುವುದು ಅವರ ಜಾಯಮಾನವಾಗಿದೆ. ಲಾಭವಿರುವ ಸಂದಭ್ರದಲ್ಲಿ ‘ಹರಿತವಾದ ನಾಲಗೆ’ಯೊಂದಿಗೆ ನಿಮ್ಮನ್ನು ಸ್ವಾಗತಿಸಲು ಬರುತ್ತಾರೆ ಎಂದು ಕುರ್ಆನ್ ಹೇಳುತ್ತದೆ. (ಅಹ್ಝಾಬ್: 19). ಆದಶ್ರದ ದಿವಾಳಿತನ ಮತ್ತು ಸ್ವಂತ ಧೋರಣೆ ತಾಳಲು ಸಾಧ್ಯವಿಲ್ಲದಿರುವು ದರಿಂದ ಅವರ ಹೃದಯವನ್ನು ‘ತಲೆ ಕೆಳಗಾಗಿರುವ ಹೃದಯ’ ಎಂದು ಪ್ರವಾದಿಯವರು(ಸ) ಬಣ್ಣಿಸಿದ್ದಾರೆ. ನಾಳೆ ಪರಲೋಕದಲ್ಲಿ ಕಪಟ ವಿಶ್ವಾಸಿಗಳು ನರಕದ ಅತ್ಯಂತ ತಳಭಾಗದಲ್ಲಾಗಿರುವರು.
ನಾಲ್ಕನೇ ವಿಧದ ಭಾರ ಕಡಿಮೆ ಇರುವ ಹೃದಯವು, ವಿಶ್ವಾಸ ಮತ್ತು ಕಾಪಟ್ಯ ಮಿಶ್ರಿತ ಹೃದಯವಾಗಿದೆ. ಪ್ರವಾದಿ ಯವರು(ಸ) ಇಂತಹ ಹೃದಯ ಹೊಂದಿದವರ ವಿಶ್ವಾಸವನ್ನು ಶುದ್ಧ ನೀರು ಲಭಿಸುವ ಸಸ್ಯಕ್ಕೂ ಕಾಪಟ್ಯವನ್ನು ಕೆಟ್ಟ ರಕ್ತ ಮತ್ತು ಕೀವಿಗೂ ಹೋಲಿಸಿದ್ದಾರೆ. ನೀರು ಲಭಿಸುವ ಸಸ್ಯ ಮತ್ತು ನೀರು ಲಭಿಸದ ಸಸ್ಯವು ರೂಪದಲ್ಲೂ ಬೆಳವಣಿಗೆಯಲ್ಲೂ ಸಮಾನ ವಾಗಿರುವುದಿಲ್ಲ. ನೀರಿನಿಂದ ಬೆಳೆದ ಸಸ್ಯವು ಹಚ್ಚ ಹಸುರಿನಿಂದ ಸುಂದರವಾಗಿ ಕಂಗೊಳಿಸುತ್ತಿರುತ್ತದೆ. ನೀರು ಲಭಿಸದ ಸಸ್ಯವು ಬಾಡಿಹೋಗಿರುತ್ತದೆ. ಸತ್ಯವಿಶ್ವಾಸವು ಕೂಡಾ ಇದೇ ರೀತಿಯಾಗಿದೆ. ಅದು ಹೃದಯಕ್ಕೆ ಹರಿಯುವ ಶುದ್ಧ ನೀರಾಗಿದೆ. ಅದನ್ನು ಹೀರುವ ಹೃದಯವು ಉತ್ತಮವಾಗುತ್ತದೆ ಮತ್ತು ಶಕ್ತಿಯನ್ನು ಗಳಿಸುತ್ತದೆ. ಆದರೆ ಕಾಪಟ್ಯವು ಹಾಗಲ್ಲ. ಅದು ಕೀವು ಮತ್ತು ಕೆಟ್ಟ ರಕ್ತದಂತೆ. ಅದು ಹೃದಯಕ್ಕೆ ಪ್ರವೇಶಿಸಿದರೆ ಹೃದಯವನ್ನು ರೋಗಗ್ರಸ್ಥಗೊಳಿಸುತ್ತದೆ. ಅದನ್ನು ಹಾಗೆಯೇ ಬಿಟ್ಟರೆ ಹೃದಯವನ್ನು ಪÇತ್ರಿಯಾಗಿ ಆವರಿಸಿ ಅದರ ಕೆಲಸವನ್ನೇ ಸ್ತಬ್ಧಗೊಳಿಸುವ ಸಂಭವವಿದೆ. ಆದ್ದರಿಂದ ಕಾಪಟ್ಯದ ಬಗ್ಗೆ ಎಚ್ಚರವಿರಬೇಕು. ಅದು ಹೃದಯಕ್ಕೆ ಪ್ರವೇಶಿಸದಂತೆ ಜಾಗ್ರತೆ ವಹಿಸಬೇಕು.
ಒಟ್ಟಿನಲ್ಲಿ ಹೃದಯವು ಮನುಷ್ಯನನ್ನು ಮುನ್ನಡೆಸುತ್ತದೆ. ಅವನ ಎಲ್ಲಾ ಕಮ್ರಗಳಿಗೂ ಮುನ್ನುಡಿ ಬರೆಯುತ್ತದೆ. ಪ್ರವಾದಿ ಯವರು(ಸ) ಹೇಳಿದರು, “ಮನುಷ್ಯನ ಹೃದಯವು ಒಂದು ರಾಜನಂತೆ. ಅದಕ್ಕೆ ಕೆಲವು ಸೇನೆಗಳಿವೆ. ರಾಜನು ಉತ್ತಮವಾದರೆ ಸೇನೆಯೂ ಉತ್ತಮಗೊಳ್ಳುತ್ತದೆ. ರಾಜನು ಕೆಟ್ಟರೆ ಸೇನೆಯೂ ಕೆಟ್ಟು ಹೋಗುತ್ತದೆ. ಕಿವಿಗಳು ಲಾಳಿಕೆಯಾಗಿದೆ, ಕಣ್ಣುಗಳು ಶತ್ರು ವನ್ನು ನಿರೀಕ್ಷಿಸುವ ಕಾವಲು ಪಡೆಯಾಗಿದೆ. ನಾಲಗೆಯು ವಿಷಯಗಳನ್ನು ವ್ಯಕ್ತಪಡಿಸುವ ಅನುವಾದಕವಾಗಿದೆ. ಕೈಗಳು ರೆಕ್ಕೆಗಳಾಗಿವೆ. ಕಾಲುಗಳು ಅಂಚೆಯಾಗಿವೆ.”
ಆದ್ದರಿಂದ ಅಲ್ಲಾಹನಲ್ಲೂ ಪರಲೋಕದಲ್ಲೂ ವಿಶ್ವಾಸವಿರಿಸಿರುವ ನಾವು ಯಾವ ಹಾದಿಯನ್ನು ಆರಿಸಬೇಕು ಎಂಬುದರ ಕುರಿತು ಆಲೋಚಿಸಬೇಕಾಗಿದೆ. ಸ್ವಗ್ರವನ್ನು ಬಯಸುವವರಾದ ನಾವು ಆ ಹಾದಿಯಲ್ಲಿ ಮುನ್ನಡೆದರೆ ಮಾತ್ರ ಅಲ್ಲಿಗೆ ತಲುಪಬಹುದು. ಕಾಸರದ ಬೀಜ ಬಿತ್ತಿ ಮಾವುವನ್ನು ಬಯಸಿದರೆ ಏನೂ ಪ್ರಯೋಜವಿಲ್ಲ. ನರಕದ ಹಾದಿಯಲ್ಲಿ ಸಂಚರಿಸಿ ಸ್ವಗ್ರಕ್ಕೆ ತಲುಪಬೇಕೆಂದು ಬಯಸು ವುದು ನಿರಥ್ರಕವಾಗಿದೆ. ಆದ್ದರಿಂದ ಇಹಲೋಕಕ್ಕೂ ಪರಲೋಕಕ್ಕೂ ಪ್ರಯೋಜನ ನೀಡುವ ಹಾದಿಯನ್ನು ನಾವು ಸ್ವೀಕರಿಸಬೇಕು. ಈ ದಾರಿ ಸ್ವೀಕರಿಸುವಲ್ಲಿ ಹೃದಯವು ಬಹು ಮುಖ್ಯ ಪಾತ್ರವಹಿಸುತ್ತದೆ. ಹೃದಯದ ನಿಯಂತ್ರಣವು ನಮ್ಮ ಕೈಯಲ್ಲೇ ಇದೆ.