ಸೋಮವಾರ, ಫೆಬ್ರವರಿ 13, 2012

ಈ ಗುಣವು ನಿಮ್ಮಲ್ಲಿದೆಯೇ?


ಲ್ಲಾಹನು ಮನುಷ್ಯರಿಗೆ ಹಲವಾರು ಗುಣಗಳನ್ನೂ ಭಾವನೆಗಳನ್ನೂ ನೀಡಿ ಗೌರವಿಸಿದ್ದಾನೆ. ಪ್ರಾಣಿಗಳಿಗಿಲ್ಲದ ಹಲವಾರು ವಿಶೇಷತೆಗಳು ಮನುಷ್ಯನಿಗೆ ಲಭಿಸಿವೆ. ಆದ್ದರಿಂದಲೇ ಮನುಷ್ಯನು ಉನ್ನತ ಸ್ಥಾನ ಪಡೆದಿದ್ದಾನೆ. ಆ ಗುಣಗಳ ಪೈಕಿ ಮಹತ್ವವೂ ಉನ್ನತವೂ ಆದ ಒಂದು ಗುಣವಾಗಿದೆ ಲಜ್ಜೆ. ಇದು ಮೃಗಗಳಲ್ಲಿ ಗೋಚರವಾಗದ ಒಂದು ಗುಣವಾಗಿದೆ. ಮನುಷ್ಯನಲ್ಲಿ ಲಜ್ಜೆಯು ಇಲ್ಲವಾದಾಗ ಅವನು ಮೃಗಗಳಿಗೆ ಹತ್ತಿರ ವಾಗುತ್ತಾನೆ.
ಲಜ್ಜೆಯು ಮನುಷ್ಯನನ್ನು ಅಶ್ಲೀಲ ಕೃತ್ಯಗಳಿಂದ ತಡೆಯುವ, ಒಳಿತಿನಲ್ಲಿ ದೃಢವಾಗಿ ನಿಲ್ಲಲು ಪ್ರೇರೇಪಿಸುವ ಶ್ರೇಷ್ಠ ಗುಣವಾಗಿದೆ. ಇದು ಇತರ ಜೀವಿಗಳಿಂದ ಮನುಷ್ಯನನ್ನು ಪ್ರತ್ಯೇಕಿಸುತ್ತದೆ. ಲಜ್ಜೆಯು ಮನುಷ್ಯನಿಗೆ ಜನ್ಮಸಿದ್ಧಿಯಾಗಿ ಲಭಿಸುವ ಗುಣವಾಗಿದೆ. ಕೆಡುಕುಗಳನ್ನು ಮಾಡಲಿಕ್ಕಿರುವ ಹಿಂಜರಿಕೆ, ಅಶ್ಲೀಲತೆಯೊಂದಿಗಿನ ಅಸಹ್ಯ ಭಾವನೆ, ಒಳತಿನೊಂದಿಗಿನ ಸಹಕಾರ ವೊದಲಾದ ಅನೇಕ ಸದ್ಗುಣಗಳು ಲಜ್ಜೆಯ ಕೊಡುಗೆಗಳಾಗಿವೆ.
ಲಜ್ಜೆಯು ಒಂದು ಕಾವಲುಗಾರನಂತೆ ವಿಶ್ವಾಸ ವನ್ನೂ, ಚಾರಿತ್ರ್ಯವನ್ನೂ ಕಾವಲು ಕಾಯುತ್ತದೆ. ಅದು ನಷ್ಟವಾಗದಂತೆ ಕಾಪಾಡುತ್ತದೆ. ಲಜ್ಜೆಯಿಲ್ಲದವನಿಗೆ ಸತ್ಯವಿಶ್ವಾಸದಲ್ಲಿ ದೃಢವಾಗಿ ನಿಲ್ಲಲು ಸಾಧ್ಯವಿಲ್ಲ. ಧಾರ್ಮಿಕ ಪ್ರಜ್ಞೆಯು ಅವನಿಂದ ಕಳೆದು ಹೋಗುತ್ತದೆ. ಪ್ರವಾದಿಯವರು(ಸ) ಹೇಳಿದ್ದಾರೆ, “ಲಜ್ಜೆ ಮತ್ತು ಸತ್ಯವಿಶ್ವಾಸವು ಪರಸ್ಪರ ಮಿತ್ರವಾಗಿದೆ. ಅವುಗಳ ಪೈಕಿ ಒಂದು ನಷ್ಟವಾದರೆ ಇನ್ನೊಂದು ನಷ್ಟ ಹೊಂದುತ್ತದೆ.” ಲಜ್ಜೆ ಇಲ್ಲದವ ನಲ್ಲಿ ಈಮಾನ್ ದುಬ್ರಲವಾಗಿರುತ್ತದೆ. ಅವನ ವಿಶ್ವಾಸಕ್ಕೆ ಪರಿಪÇಣ್ರತೆ ಇರುವುದಿಲ್ಲ. ಎಪ್ಪತ್ತು ಚಿಲ್ಲರೆ ಶಾಖೆಗಳಿರುವ ಈಮಾನಿನಲ್ಲಿ ಲಜ್ಜೆಯು ಕೂಡಾ ಒಂದು ಭಾಗವಾಗಿದೆ. ಆ ಒಂದು ಭಾಗವು ನಷ್ಟವಾದರೆ ಈಮಾನ್ ಕೂಡಾ ದುಬ್ರಲವಾಗುತ್ತದೆ. ಈಮಾನ್ ದುಬ್ರಲವಾಗು ವಾಗ ಹಲವಾರು ಪಾಪ ಕೃತ್ಯಗಳ ಕಡೆಗೆ ನಮ್ಮ ಆತ್ಮವು ವಾಲುತ್ತದೆ.
ಲಜ್ಜೆ ರಹಿತ ಸ್ವಭಾವವು ಓವ್ರನ ಧಾಮ್ರಿಕ ಜೀವನವನ್ನು ಹೇಗೆ ನಾಶಪಡಿಸುತ್ತದೆ ಎಂಬುದರ ಕುರಿತು ಇಬ್ನು ಉಮರ್(ರ) ಉದ್ಧರಿಸಿದ ಒಂದು ಪ್ರವಾದಿ ವಚನವು ಸ್ಪಷ್ಟಪಡಿಸುತ್ತದೆ: “ಅಲ್ಲಾಹನು ತನ್ನ ಓವ್ರ ದಾಸನನ್ನು ನಾಶ ಪಡಿಸಲು ಬಯಸಿದರೆ ವೊದಲು ಅವನಿಂದ ಲಜ್ಜೆಯನ್ನು ಹಿಂಪಡೆದುಕೊಳ್ಳುತ್ತಾನೆ. ಲಜ್ಜೆಯು ಓವ್ರನಿಗೆ ನಷ್ಟ ಹೊಂದಿದರೆ ಬಳಿಕ ಅವನು ದ್ವೇಷಿಸುವವನು ಮತ್ತು ದ್ವೇಷಿಸಲ್ಪಡುವವನಾಗಿ ಮಾತ್ರ ಕಾಣಲು ಸಾಧ್ಯ. ಓವ್ರನು ದ್ವೇಷಿಸುವವನೂ ದ್ವೇಷಿಸಲ್ಪಡುವವನೂ ಆಗಿ ಮಾಪ್ರಟ್ಟರೆ ಅವನಿಂದ ಹೊಣೆಗಾರಿಕೆಯ ಪ್ರಜೆÕಯು ಕಳೆದು ಹೋಗುತ್ತದೆ. ಹೊಣೆಗಾರಿಕೆಯ ಪ್ರಜೆÕಯು ನಷ್ಟವಾದರೆ ಅವನು ವಂಚಕನೂ ವಂಚಿಸಲ್ಪಡುವವನೂ ಆಗಿ ಬದಲಾಗುವವನು. ವಂಚಕನೂ ವಂಚಿಸಲ್ಪಡುವವನೂ ಆಗಿ ಮಾರ್ಪಟ್ಟರೆ ಅವನಲ್ಲಿ ಕರುಣೆ ಎಂಬ ಭಾವನೆಯು ಮಾಯವಾಗುತ್ತದೆ. ಕರುಣೆಯು ನಷ್ಟವಾದರೆ ಅವನು ಶಪಿಸಲ್ಪಡುವ ವ್ಯಕ್ತಿಯಾಗಿ ಬದಲಾಗುತ್ತಾನೆ. ಶಪಿಸಲ್ಪಟ್ಟವನಾದರೆ ಇಸ್ಲಾಮಿನ ಪಾಶವು ಅವನಿಂದ ಕಡಿಯಲ್ಪಡುತ್ತದೆ.”
ಲಜ್ಜೆಯು ಮನುಷ್ಯನ ಒಳಿತುಗಳನ್ನು ಕಾಪಾಡುತ್ತದೆ. ಮುತ್ತುಗಳಿಂದ ಹೆಣೆಯಲ್ಪಟ್ಟ ಸರದಂತೆ. ಸರವು ತುಂಡಾದರೆ ಮುತ್ತುಗಳೆಲ್ಲವೂ ಚೆಲ್ಲಾಪಿಲ್ಲಿ ಯಾಗಿ ಬೀಳುತ್ತವೆ. ಅದೇ ರೀತಿ ಲಜ್ಜೆಯು ನಷ್ಟ ವಾದರೆ ಒಳಿತುಗಳೆಲ್ಲವೂ ಕಳೆದು ಹೋಗುತ್ತವೆÉ. ಕೆಡುಕುಗಳನ್ನು ಮಾಡುವಾಗ ಉಂಟಾಗುವ ಮಾನ ಸಿಕ ಹಿಂಜರಿಕೆಯನ್ನು ಅವನು ಕಳೆದುಕೊಳ್ಳುತ್ತಾನೆ. ಪ್ರವಾದಿಯವರು(ಸ) ಹೇಳಿದರು, “ಪೂರ್ವ ಪ್ರವಾದಿಗಳ ಮಾತುಗಳಿಂದ ಜನರಿಗೆ ಲಭಿಸಿದ ಸಂದೇಶವು ಇದಾಗಿದೆ. ನಿಮಗೆ ಲಜ್ಜೆಯಿಲ್ಲದಿದ್ದರೆ ಸ್ವೇಚ್ಛೆಯಂತೆ ವತ್ರಿಸಿರಿ.”
ಲಜ್ಜೆಯ ಕುರಿತು ಪ್ರವಾದಿಯವರು(ಸ) ತಮ್ಮ ಸಂಗಾತಿಗಳಿಗೆ ವಿವಿಧ ಸಂದಭ್ರಗಳಲ್ಲಿ ಉಪದೇಶಿ ಸಿದ್ದಾರೆ. ಸಹಾಬಿಗಳ ಜೀವನವು ಲಜ್ಜಾರಹಿತ ವಾಗಿರಲಿಲ್ಲ. ಲಜ್ಜೆ ಎಂಬ ಗುಣವನ್ನೇ ಅರಿಯದ ಹಲವಾರು ಮಂದಿ ಇಸ್ಲಾಮಿಗೆ ಆಗಮಿಸುವುದ ರೊಂದಿಗೆ ಲಜ್ಜೆಯ ಸಾಕಾರ ಮೂತ್ರಿಗಳಾಗಿ ಬದಲಾದರು. ಪ್ರವಾದಿಯವರು(ಸ) ಹೇಳಿದರು, “ಎಲ್ಲಾ ಧಮ್ರಗಳಿಗೂ ಒಂದು ಸ್ವಭಾವವಿದೆ. ಇಸ್ಲಾಮಿನ ಸ್ವಭಾವವು ಲಜ್ಜೆಯಾಗಿದೆ.”
ಲಜ್ಜೆ ಎಂದರೆ, ಜನರಿಂದ ಬೇರೆಯಾಗಿ ಯಾವುದಾದರೊಂದು ಮೂಲೆಯಲ್ಲಿ ನಾಚಿಕೆಯಿಂದ ತಲೆ ತಗ್ಗಿಸಿ ಕುಳಿತುಕೊಳ್ಳುವುದಲ್ಲ. ಅದು ಜೀವನದ ಎಲ್ಲಾ ರಂಗಗಳನ್ನೂ ಸ್ಪಶ್ರಿಸುವ ವಿಶಾಲವಾದ ಸ್ವಭಾವ ಸಂಸ್ಕರಣೆಯಾಗಿದೆ. ಶರೀರ ವನ್ನೂ ಅದರಲ್ಲಿರುವ ಎಲ್ಲಾ ಅಂಗಗಳನ್ನೂ ಕೆಡುಕುಗಳಿಂದ ರಕ್ಷಿಸಲು ಲಜ್ಜೆಯೆಂಬ ಸ್ವಭಾವಕ್ಕೆ ಸಾಧ್ಯವಿದೆ. ಲಜ್ಜೆ ಇರುವವನ ನಾಲಗೆಯಲ್ಲಿ ಅಶ್ಲೀಲ ಮಾತುಗಳು ಹೊರಡಲಿಕ್ಕಿಲ್ಲ. ಅವನ ಕಣ್ಣುಗಳು ಅಶ್ಲೀಲತೆಗೆ ಸಾಕ್ಷಿಯಾಗಲಿಕ್ಕಿಲ್ಲ. ಅವನ ಉದರವು ಅಕ್ರಮ ಸಂಪಾದನೆಗೆ ಸಂಗ್ರಹಾಲಯ ವಾಗಲಿಕ್ಕಿಲ್ಲ. ಒಟ್ಟಿನಲ್ಲಿ ಅವನ ಇಡೀ ದೇಹವು ನಿಷಿದ್ಧದಿಂದ ಮುಕ್ತವಾಗಿರುತ್ತದೆ.
ಲಜ್ಜೆಯು ನಷ್ಟವಾದಾಗ ಎಲ್ಲಾ ಪಾಪ ಕೃತ್ಯ ಗಳನ್ನು ಮಾಡಲು ಮನುಷ್ಯನು ಮುಂದಾಗುತ್ತಾನೆ. ತಂದೆ ಮಕ್ಕಳೆಂಬ ಸಂಬಂಧವನ್ನು ಮರೆಯುತ್ತಾನೆ. ಪ್ರಾಣಿಗಳಂತೆ ಕಂಡವರ ಮೇಲೆ ಲೈಂಗಿಕ ತೃಷೆಯನ್ನು ತೀರಿಸುತ್ತಾನೆ. ಅವುಗಳಿಗೆ ತಾಯಿ, ಮಗಳು, ತಂದೆ, ಮಗ ಎಂಬ ತಾರತಮ್ಯ ಇರುವುದಿಲ್ಲ. ಅದೇ ರೀತಿ ಇಂದು ಕೂಡಾ ಮನುಷ್ಯರು ವತ್ರಿಸುತ್ತಿದ್ದಾರೆ. ಪ್ರಾಯ ಪÇತ್ರಿ ಯಾದ ಮಗಳನ್ನು ತಂದೆಯ ಬಳಿ ಬಿಟ್ಟು ಹೋಗಲಿಕ್ಕಿರುವ ತಾಯಿಯ ಹಿಂಜರಿಕೆಯು ಲಜ್ಜೆ ನಷ್ಟವಾದ ಸಮಾಜವನ್ನು ಅನಾವರಣ ಗೊಳಿಸುತ್ತದೆ. ಲಜ್ಜೆ ಇಲ್ಲದವರು ಪಾಪಕೃತ್ಯಗಳನ್ನು ಮಾಡುವಾಗ ಅವರಿಗೆ ಸ್ಥಳದ ಪ್ರಜೆÕಯೂ ಇರು ವುದಿಲ್ಲ. ಎಲ್ಲರೂ ನೋಡುತ್ತಾರೆ ಎಂಬ ಸಾಮಾನ್ಯ ಜ್ಞಾನ ಅವರಲ್ಲಿರುವುದಿಲ್ಲ. ಕಾರಣ ಲಜ್ಜೆ ನಷ್ಟವಾದುದರಿಂದ ಅವರ ಕಣ್ಣು ಕುರುಡಾಗಿರುತ್ತದೆ.
ಇಸ್ಲಾಮ್ ಲಜ್ಜೆಗೆ ಹೆಚ್ಚಿನ ಮಹತ್ವ ನೀಡಿರು ವುದು ಇದೇ ಕಾರಣದಿಂದಾಗಿದೆ. ಪ್ರವಾದಿ ಯವರು(ಸ) ಹೇಳಿದರು, “ಲಜ್ಜೆ ಎಂಬ ಗುಣವು ಒಳಿತನ್ನಲ್ಲದೆ ಬೇರೇನನ್ನೂ ತರುವುದಿಲ್ಲ” ಅಲ್ಲಾಹನ ಆಜೆÕಗಳನ್ನು ಮಾನಸಿಕವಾಗಿಯೂ ಶಾರೀರಿಕ ವಾಗಿಯೂ ಒಪ್ಪಿಕೊಳ್ಳಲು ಸಾಧ್ಯವಾಗಬೇಕು. ಅವನ ನಿರ್ದೇಶನಗಳನ್ನು ಮನಸ್ಸು, ಮಾತು, ಕಮ್ರಗಳಿಂದ ಜೀವಂತಗೊಳಿಸಬೇಕು. ಲಜ್ಜೆಯೆಂಬ ಆ ಶ್ರೇಷ್ಠ ಗುಣವನ್ನು ಮೈಗೂಡಿಸಿಕೊಂಡು ವರ್ತಿಸುವಾಗ ನಮ್ಮ ಕಮ್ರಗಳಿಗೆ ಸಾಫಲ್ಯವು ಪ್ರಾಪ್ತಿಯಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ