ಸೋಮವಾರ, ಮಾರ್ಚ್ 26, 2012

ಮಾತುಗಾರಿಕೆಯ ಶೈಲಿ


 ಇಂದು ಮನುಷ್ಯರ ಮಧ್ಯೆ ಇರುವ ಸಂಬಂಧವು ಶಿಥಿಲವಾಗುತ್ತಿದೆ. ಒಬ್ಬನನ್ನು ಕಂಡರೆ ಇನ್ನೊಬ್ಬ ಅಸೂಯೆ ಪಡುವ ಪರಿಸ್ಥಿತಿಯು ಬಂದೊದಗಿದೆ. ಪರಸ್ಪರ ನೆರವಿಗೆ ಬರಬೇಕಾದ, ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕಾದ  ರಕ್ತ ಸಂಬಂಧಿಗಳೂ ಇದರಿಂದ ಹೊರತಾಗಿಲ್ಲ. ಈ ಸಂಬಂಧಗಳ ಶಿಥಿಲತೆಗೆ ಹಲವು ಕಾರಣಗಳಿರ ಬಹುದು. ಅವುಗಳ ಪೈಕಿ ಮಹತ್ವವೂ ನಾವು ಕ್ಷುಲ್ಲಕವೆಂದೂ ಭಾವಿಸುವ ಒಂದು ಕಾರಣವಾಗಿದೆ ಮಾತು. ಮಾತಿನಿಂದಾಗಿ ಹಲವು ಕುಟುಂಬಗಳು ಒಡೆದಿವೆ. ಹಲವರ ಮನಸ್ಸು ಘಾಸಿಗೊಂಡಿದೆ. ಯಾವಾಗಲೋ ಆಡಿದ ಒಂದು ಮಾತಿನ ಪರಿಣಾಮ ವಾಗಿ ಹೊರಗೆ ನಗುಮುಖವಿದ್ದರೂ ಮನಸ್ಸಿನಲ್ಲಿ ಹಗೆತನ, ವೈರತ್ವ ಕಟ್ಟಿಕೊಂಡಿರುವವರಿದ್ದಾರೆ. ಎಲುಬಿಲ್ಲದ ನಾಲಿಗೆಯು ಲಗಾಮಿಲ್ಲದೆ ಚಲಿಸುವಾಗ ಮುರಿದು ಬೀಳುವುದು ಹಲವಾರು ಮಾನವೀಯ ಸಂಬಂಧಗಳಾಗಿವೆ.
ಇದೇ ನಾಲಗೆಯಲ್ಲಿ, ಮಾತಿನ ಶೈಲಿಯಲ್ಲಿ ಸಂಬಂಧಗಳನ್ನು ಸ್ಥಾಪಿಸುವ ಮತ್ತು ದೃಢಪಡಿಸುವ ಶಕ್ತಿ ಕೂಡಾ ಇದೆ. ನಾಲಗೆಯನ್ನು ಎಚ್ಚರಿಕೆಯಿಂದ ಬಳಸಿದರೆ ಹಲವರ ಮನಸ್ಸನ್ನು ಗೆಲ್ಲಲು ಸಾಧ್ಯವಿದೆ. ನಾಲಗೆಯಿಂದ ಹೊರಡುವ ಮಾತಿನಿಂದ ದೊಡ್ಡ ಕ್ರಾಂತಿಯೇ ನಡೆಯಬಹುದು. ಅದಕ್ಕೆ ಇತಿಹಾಸವೇ ಸಾಕ್ಷಿ. ಪ್ರವಾದಿ(ಸ) ಹೇಳಿದರು, “ಓರ್ವ ದಾಸನು ಯಾವುದನ್ನೂ ಲೆಕ್ಕಿಸದೆ ಅಲ್ಲಾಹನಿಗೆ ಇಷ್ಟವಾದ ಒಂದು ಮಾತನ್ನಾಡುತ್ತಾನೆ. ಅದರಿಂದಾಗಿ ಅಲ್ಲಾಹನು ಅವನ ಸ್ಥಾನವನ್ನು ಉನ್ನತಿಗೇರಿಸುತ್ತಾನೆ. ಓವ್ರ ದಾಸನು ಯಾವುದನ್ನೂ ಲೆಕ್ಕಿಸದೆ ಅಲ್ಲಾಹನಿಗೆ ಕೋಪ ಬರಿಸುವ ಒಂದು ಮಾತನ್ನಾಡುತ್ತಾನೆ. ಅದು ಅವನ ನರಕ ಪ್ರವೇಶಕ್ಕೆ ಹೇತುವಾಗುತ್ತದೆ.”
ನಾಲಗೆಯು ಎರಡು ಅಲಗಿನ ಕತ್ತಿಯಂತೆ. ಒಳಿತಿನ ಮಾಗ್ರದಲ್ಲಿ ಉಪಯೋಗಿಸಿ ವಿಜಯಗಳಿಸಲೂ ಕೆಡುಕಿನ ಮಾಗ್ರದಲ್ಲಿ ಉಪಯೋಗಿಸಿ ಪರಾಜಿತರಾಗಲೂ ನಾಲಗೆಯಿಂದ ಸಾಧ್ಯವಿದೆ. ನಾಲಗೆಯ ಉಪಯೋಗಕ್ಕೆ ಅನುಗುಣವಾಗಿ ಓವ್ರನಿಗೆ ನರಕಕ್ಕೂ ಸ್ವಗ್ರಕ್ಕೂ ಪ್ರವೇಶಿಸಲು ಸಾಧ್ಯವಿದೆ. “ನಾಲಗೆಯ ಕುರಿತು ಭರವಸೆ ನೀಡುವವನಿಗೆ ನಾನು ಸ್ವಗ್ರದ ಭರವಸೆ ನೀಡುತ್ತೇನೆ” ಎಂದು ಪ್ರವಾದಿ ಯವರು(ಸ) ಹೇಳಿದ್ದಾರೆ.
ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುವುದು  ಓರ್ವ  ಸತ್ಯವಿಶ್ವಾಸಿಗೆ ಭೂಷಣವಲ್ಲ. ನಾಲಗೆಯಿಂದ ಹೊರ ಡುವ ಪ್ರತೀ ಶಬ್ದಗಳನ್ನು (ಅದು ಸಣ್ಣದಾದರೂ ದೊಡ್ಡದಾದರೂ ಸರಿ) ದಾಖಲಿಸಲಾಗುತ್ತದೆಂದೂ ಅವುಗಳ ಕಾರಣದಿಂದಾಗಿ ತಾನು ನಾಳೆ ಅಲ್ಲಾಹನ ಮುಂದೆ ವಿಚಾರಣೆಗೆ ಗುರಿ ಯಾಗುವೆನೆಂದೂ ಸ್ವರ್ಗ , ನರಕಗಳನ್ನು ತೀಮ್ರಾನಿಸುವುದರಲ್ಲಿ ಅವುಗಳಿಗೆ ಪಾತ್ರವಿದೆಯೆಂದೂ ಓವ್ರ ಸತ್ಯ ವಿಶ್ವಾಸಿಯು ತಿಳಿದುಕೊಂಡಿರುತ್ತಾನೆ. ತಾನು ಮಾಡಿರುವ ಸತ್ಕಮ್ರಗಳನ್ನು ನಾಶಪಡಿಸುವ ಶಕ್ತಿಯು ನಾಲಗೆಗೆ ಇದೆ ಎಂದು ಅವನು ಮನಗಂಡಿರು ತ್ತಾನೆ. ಆದ್ದರಿಂದ ಅವನು ಮಾತ ನಾಡುವಾಗ ಬಹಳ ಎಚ್ಚರಿಕೆಯಿಂದ ಯಾರಿಗೂ ನೋವಾಗದ ರೀತಿಯಲ್ಲಿ ಮಾತನಾಡುತ್ತಾನೆ. ಕುರ್ಆನ್ ಹೇಳುತ್ತದೆ “ಸತ್ಯವಿಶ್ವಾಸಿಗಳೇ ಅಲ್ಲಾಹನ್ನು ಭಯ ಪಡಿರಿ ಮತ್ತು ಸರಿಯಾದ ಮಾತನ್ನೇ ಹೇಳಿರಿ. ಹಾಗಾದರೆ ಅಲ್ಲಾಹನು ನಿಮ್ಮ ಕಮ್ರಗಳನ್ನು ಸರಿಪಡಿಸುವನು ಮತ್ತು ನಿಮ್ಮ ಅಪರಾಧಗಳನ್ನು ಕ್ಷಮಿಸುವನು. ಯಾರು ಅಲ್ಲಾಹ್ ಮತು ಅವನ ಸಂದೇಶವಾಹಕರ ಅನುಸರಣೆ ಮಾಡಿ ದನೋ ಅವನು ಮಹಾ ಯಶಸ್ಸನ್ನು ಪಡೆದನು.” (ಅಲ್ಅಹ್ಝಾಬ್: 70-71)
ನಮಗೆಲ್ಲರಿಗೂ ಮಾದರಿಯಾದ ಪ್ರವಾದಿಯವರ(ಸ) ಮಾತಿನ ಶೈಲಿ ಹೇಗಿತ್ತೆಂದು ಆಯಿಶಾ(ರ) ಹೇಳುತ್ತಾರೆ. “ಅಲ್ಲಾಹನ ಸಂದೇಶವಾಹಕರು ನಿಮ್ಮಂತೆ ಅನಿಯಂತ್ರಿತವಾಗಿ ಮಾತನಾಡುವ ವರಾಗಿರಲಿಲ್ಲ. ಅವರ ಮಾತುಗಳನ್ನು ಯಾರಾದರೂ ಎಣಿಸಲು ಬಯಸಿದರೆ ಅವನಿಗೆ ಅದು ಸಾಧ್ಯವಾಗುತ್ತಿತ್ತು.” ಪ್ರವಾದಿಯವರು(ಸ) ನಾಲಗೆಯನ್ನು ಎಚ್ಚರಿಕೆಯಿಂದ ಬಳಸಬೇಕೆಂದೂ ಇಲ್ಲ ದಿದ್ದರೆ ನಾಳೆ ಪರಲೋಕದಲ್ಲಿ ನಷ್ಟ ಹೊಂದಿದವರ ಸಾಲಿಗೆ ಸೇರುವಿರಿ ಎಂದೂ ತನ್ನ ಅನುಯಾಯಿಗಳಿಗೆ ಉಪದೇಶಿಸುತ್ತಿದ್ದರು. ಒಮ್ಮೆ ಪ್ರವಾದಿ(ಸ) ನಾಲಗೆಯ ರಾದ್ಧಾಂತದ ಕುರಿತು ಹೇಳಿದರು, “ಓವ್ರನು ಸ್ವಗ್ರಕ್ಕೆ ಹತ್ತಿರವಾಗುತ್ತಿರುವನು. ಅವನ ಮತ್ತು ಸ್ವಗ್ರದ ಮಧ್ಯೆ ಒಂದು ಬಾಣದ ಅಂತರವಿರುತ್ತದೆ. ಹೀಗಿರುವಾಗ ಅವನು ಒಂದು ಮಾತನ್ನಾಡುತ್ತಾನೆ. ಇದ ರಿಂದಾಗಿ “ಸನ್ಆ” ಎಂಬ ಪ್ರದೇಶದ ದೂರಕ್ಕಿಂತ ಹೆಚ್ಚು ದೂರ ಹಿಂದಳ್ಳಲ್ಪ ಡುತ್ತಾನೆ.” ಸ್ವಗ್ರ ಪ್ರವೇಶದಿಂದ ತಡೆ ಯುವ ಮತ್ತು ಸ್ವಗ್ರ ಪ್ರವೇಶಗೊಳಿಸುವ ಶಕ್ತಿ ನಾಲಗೆಗೆ ಇದೆ.
ನಾವು ಕ್ಷುಲ್ಲಕವೆಂದು ಭಾವಿಸುವ ಹಲವು ಮಾತುಗಳು ನಮ್ಮ ಮಧ್ಯೆ ಅನಾಹುತಗಳನ್ನು ಸೃಷ್ಟಿಸುವಷ್ಟು ಶಕ್ತಿ ಹೊಂದಿವೆ. ಆಕಸ್ಮಿಕವಾಗಿ ಹೇಳಿದ ಒಂದು ಮಾತಿನಿಂದಾಗಿ ಜೀವನವೇ ಬುಡಮೇಲುಗೊಂಡ ಎಷ್ಟೋ ಘಟನೆ ಗಳಿವೆ. ಪ್ರವಾದಿ(ಸ) ಹೇಳಿದರು, “ನಿಶ್ಚಯವಾಗಿಯೂ ಓವ್ರ ವ್ಯಕ್ತಿ ಅಲ್ಲಾಹನಿಗೆ ತೃಪ್ತಿದಾಯಕವಾದ ಒಂದು ಮಾತನ್ನಾಡುತ್ತಾನೆ. ಅದರ ಪರಿಣಾಮದ ಕುರಿತು ಅವನು ಆಲೋಚಿಸಿರುವುದಿಲ್ಲ. ಆದರೂ ಆ ಮಾತಿನ ಕಾರಣದಿಂದ ಅಲ್ಲಾಹನು ತನ್ನ ತೃಪ್ತಿಯನ್ನು ಅವನ ಹೆಸರಿನಲ್ಲಿ ಪರಸ್ಪರ ಭೇಟಿಯಾಗುವ ದಿವಸದ ವರೆಗೆ ದಾಖಲಿಸಿಡುವನು. ಇನೋವ್ರ ವ್ಯಕ್ತಿ ಅಲ್ಲಾಹನಿಗೆ ಇಷ್ಟವಿಲ್ಲದ ಒಂದು ಮಾತನ್ನಾಡುತ್ತಾನೆ. ಅದರ ಪರಿಣಾಮದ ಕುರಿತು ಅವನು ಚಿಂತಿಸಿರುವುದಿಲ್ಲ. ಆದರೂ ಆ ಮಾತಿ ಗಾಗಿ ಅಲ್ಲಾಹನು ತನ್ನ ಕೋಪವನ್ನು ಅವನ ಹೆಸರಿನಲ್ಲಿ ಪರಸ್ಪರ ಭೇಟಿ ಯಾಗುವ ವರೆಗೆ ದಾಖಲಿಸಿಡುವನು.” ವಿದ್ವಾಂಸರಾದ ಹಾತ್ವಿಮುಲ್ ಹಸನ್(ರ) ಹೇಳುತ್ತಿದ್ದರು, “ಅಲ್ಲಾಹನಿಗೆ ನೀಡಲು 
ಉತ್ತರವನ್ನು ಸಿದ್ಧಪಡಿಸದೆ ನಾನು ಯಾವುದೇ ಮಾತನ್ನಾಡುತ್ತಿರಲಿಲ್ಲ. ಅಂತ್ಯ ದಿನದಲ್ಲಿ ಅಲ್ಲಾಹನು ನನ್ನೊಂದಿಗೆ, “ನೀನು ಯಾಕೆ ಹಾಗೆ ಹೇಳಿದ್ದು? ಎಂದು ಪ್ರಶ್ನಿಸುವನು. ಅದರ ಕಾರಣವನ್ನು ಹೇಳಲು ನನಗೆ ಸಾಧ್ಯವಾಗಬೇಕು.”
ಮಾತನಾಡಲು ಬಯಸಿದಾಗ ಒಮ್ಮೆ ಚಿಂತಿಸುವ ಜಾಯಮಾನವಾದರೂ ಇರ ಬೇಕು. ಮಾತನಾಡಿದ ಬಳಿಕ ಬೆರಳು ಕಚ್ಚಿ ಪ್ರಯೋಜನವಿಲ್ಲ. ಮಾತನಾಡುವ ವಿಧಾನದ ಕುರಿತು ಇಮಾಮ್ ಹಸನುಲ್ ಬಸರಿ(ಸ) ವಿವರಿಸುತ್ತಾರೆ, “ಬುದ್ಧಿವಂತನ ನಾಲಗೆಯು ಅವನ ಹೃದಯದ ಹಿಂದಿ ರುತ್ತದೆ. ಮಾತ ನಾಡಲು ಬಯಸಿದಾಗ ಅವನು ಹೃದಯದೊಂದಿಗೆ ಅನುಮತಿ ಕೇಳು ವನು. ಅದು ಅನುಮತಿ ನೀಡಿದರೆ ಅವನು ಮಾತನಾಡುವನು. ಇಲ್ಲದಿದ್ದರೆ ಮೌನಪಾಲಿಸುವನು. ಅವಿವೇಕಿಯ ಹೃದಯವು ಅವನ ನಾಲಗೆಯ ಹಿಂದಿರು ತ್ತದೆ. ಅವನು ಮಾತನಾಡುವಾಗ ಹೃದಯದ ಕಡೆಗೆ ತಿರುಗಿ ನೋಡುವು ದಿಲ್ಲ. ನಾಲಗೆಯಲ್ಲಿ ಬರುವುದೆಲ್ಲವನ್ನೂ ಹೇಳುತ್ತಾನೆ.”
ಒಟ್ಟಿನಲ್ಲಿ ನಾಲಗೆಯ ಉಪಯೋಗ ಕ್ಕನುಸಾರವಾಗಿ ಓವ್ರನ ಇಹ-ಪರ ವಿಜಯವು ತೀಮ್ರಾನವಾಗುತ್ತದೆ. ಚಿಂತಿಸದೇ ಹೇಳುವ ಮಾತುಗಳಿಂದಾಗಿ ನಮ್ಮ ವಿಶ್ವಾಸಕ್ಕೂ ಸತ್ಕಮ್ರಗಳಿಗೂ ಅಪಾಯವಿದೆ. ಅಲ್ಲಾಹನ ಪ್ರೀತಿ ಗಳಿಸ ಬೇಕಾದರೆ, ಪರಲೋಕದಲ್ಲಿ ವಿಜಯಿಗಳಾಗಬೇಕಾದರೆ ನಾಲಗೆ ಮತ್ತು ಮಾತಿನ ಮೇಲೆ ನಿಯಂತ್ರಣ ಹೇರುವುದು ಅನಿವಾರ್ಯವಾಗಿದೆ. ಪ್ರವಾದಿ(ಸ) ಅದಕ್ಕೇ ಹೇಳಿದ್ದು, “ಯಾರು ಅಲ್ಲಾಹನಲ್ಲೂ ಪರಲೋಕದಲ್ಲೂ ವಿಶ್ವಾಸವಿರಿಸುತಾನೋ ಅವನು ಉತ್ತಮ ಮಾತುಗ ಳನ್ನಾಡಲಿ ಇಲ್ಲದಿದ್ದರೆ ಮೌನ ವಹಿಸಲಿ” ಎಂದು. ಆದ್ದರಿಂದ ನಾವೂ ನಮ್ಮ ಸತ್ಕರ್ಮಗಳನ್ನು ಕಳೆದುಕೊಳ್ಳದಂತೆ ಎಚ್ಚರ ಮಹಿಸಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಸೋಮವಾರ, ಮಾರ್ಚ್ 19, 2012

ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ


ಇಂದು ಮಾನವನು ಹಲವಾರು ಕರ್ಮಗಳನ್ನು ಮಾಡುತ್ತಿದ್ದಾನೆ. ಕೆಲವರು ಕರ್ಮಗಳನ್ನು ಚಿಂತಿಸಿ ನಿವ್ರಹಿಸಿದರೆ ಇನ್ನು ಕೆಲವರು ಸ್ವೇಚ್ಛೆಯಂತೆ ನಿವ್ರಹಿಸುತ್ತಾರೆ. ಈ ಕರ್ಮಗಳಲ್ಲಿ ಒಳಿತುಗಳು, ಮಹಾಪಾಪಗಳು, ಸಣ್ಣ-ಪುಟ್ಟ ತಪ್ಪುಗಳು ಸೇರಿವೆ. ಮಹಾ ಪಾಪಗಳು ತನ್ನಿಂದ ಸಂಭವಿಸದಂತೆ ಹಲವರು ಪ್ರಯತ್ನಿಸುತ್ತಾರೆ. ಯಾವುದೇ ಸಮುದಾಯದಲ್ಲಾದರೂ ನಿರಂತರ ವಾಗಿ ಮಹಾಪಾಪಗಳನ್ನೆಸಗುವವರು ತೀರಾ ಕಡಿಮೆ ಮಂದಿ ಇರಬಹುದು. ಆದರೆ ಇಂದು ಹೆಚ್ಚಿನವರು ಸಣ್ಣಪುಟ್ಟ ಪಾಪಗಳನ್ನು ಕ್ಷುಲ್ಲಕ ವಿಚಾರವಾಗಿ ಪರಿಗಣಿಸುತ್ತಾರೆ. ಆದ್ದರಿಂದ ಮಹಾಪಾಪಗಳು ಸಂಭವಿಸದಂತೆ ವಹಿಸುವ ಎಚ್ಚರವನ್ನು ಸಣ್ಣ ಪಾಪಗಳ ವಿಚಾರದಲ್ಲಿ ಪಾಲಿಸುವುದಿಲ್ಲ. ಸಣ್ಣ ಪಾಪಗಳನ್ನು ತುಚ್ಛವಾಗಿ ಕಾಣಬಾರದು. ಸಣ್ಣ ಪಾಪಗಳನ್ನು ನಿರಂತರವಾಗಿ ಮಾಡುವಾಗ ಅವು ಮಹಾ ಪಾಪಗಳೆಡೆಗೆ ತಲುಪಿಸುತ್ತವೆ. ಸಣ್ಣ ಪುಟ್ಟ ಪಾಪಗಳ ಕುರಿತು ಪ್ರವಾದಿಯವರು(ಸ) ಎಚ್ಚರ ವಹಿಸಲು ಹೇಳಿದ್ದಾರೆ.
ಅಬ್ದುಲ್ಲಾ ಬಿನ್ ಮಸ್ಊದ್(ರ) ವರದಿ ಮಾಡಿದ್ದಾರೆ. ಪ್ರವಾದಿಯವರು(ಸ) ಹೇಳಿದರು, “ನೀವು ಸಣ್ಣ ಪಾಪಗಳ ವಿಷಯದಲ್ಲಿ ಎಚ್ಚರ ವಹಿಸಿರಿ. ಕಾರಣ ಅವು ಓವ್ರನಲ್ಲಿ ಸಂಗ್ರಹವಾಗಿ ಅವನನ್ನು ನಾಶಪಡಿಸುತ್ತವೆ.” ಮುಂದುವರಿಯುತ್ತಾ ಪ್ರವಾದಿಯವರು(ಸ) ಅದಕ್ಕೆ ಒಂದು ಉಪಮೆ ನೀಡಿದರು. “ಜನರ ಒಂದು ಗುಂಪÅ ಒಂದು ಜಾಗದಲ್ಲಿ ಬಿಡಾರ ಹೂಡುತ್ತದೆ. ಅಡುಗೆ ತಯಾರಿಸಲಿಕ್ಕಾಗಿ ಓವ್ರನು ಕಟ್ಟಿಗೆ ಹುಡುಕುತ್ತಾ ಹೋಗುತ್ತಾನೆ. ಮರದ ಒಂದು ತುಂಡಿನೊಂದಿಗೆ ಅವನು ಮರಳುತ್ತಾನೆ. ಇನ್ನೋವ್ರನು ಹೋಗಿ ಒಂದು ತುಂಡನ್ನು ತರುತ್ತಾನೆ. ಹಾಗೆ ಮರದ ತುಂಡುಗಳ ದೊಡ್ಡ ರಾಶಿ ಅಲ್ಲಿ ನಿಮ್ರಾಣ ವಾಗುತ್ತದೆ. ಹಾಗೆ ಬೆಂಕಿ ಉರಿಸಿ ಅಡುಗೆ ತಯಾರಿಸುತ್ತಾರೆ.
ಮಹಾಪಾಪಗಳಾದರೂ ಸಣ್ಣ ಪುಟ್ಟ ಪಾಪ ಗಳಾದರೂ ಅವು ಪಾಪಗಳ ಸಾಲಿಗೇ ಸೇರುತ್ತವೆ. ಸಣ್ಣದು ಎಂಬ ಕಾರಣಕ್ಕೆ ಅವುಗಳು ಪಾಪವಲ್ಲದ ಸಾಮಾನ್ಯ ಕಮ್ರಗಳಾಗುವುದಿಲ್ಲ. ‘ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ’. ಸಣ್ಣ ಪಾಪಗಳು ಸಣ್ಣದಾಗಿ ತೋರುವುದು ಅವುಗಳನ್ನು ದೊಡ್ಡ ಪಾಪಗಳೊಂದಿಗೆ ಹೋಲಿಕೆ ಮಾಡುವಾಗ ಮಾತ್ರವಾಗಿದೆ. ಅಲ್ಲಾಹನಿಗೆ ಇಷ್ಟವಿಲ್ಲದ ಕಮ್ರಗಳು ಅವು ದೊಡ್ಡದಾದರೂ ಕ್ಷುಲ್ಲಕವಾದರೂ ಪಾಪಗಳೇ ಆಗಿವೆ.
ಓವ್ರನು ಒಂದು ತಪ್ಪೆಸಗುವಾಗ ಅವನು ಅಲ್ಲಾಹನ ಒಂದು ಆಜೆÕಯನ್ನು ಉಲ್ಲಂಘಿಸುತ್ತಾನೆ. ಅಲ್ಲಾಹನ ಆಜೊÕೀಲ್ಲಂಘನೆಯು ಮಹಾಪಾಪ ವಾಗಿದೆ. ಆದ್ದರಿಂದ ತಪÅ್ಪಗಳು ದೊಡ್ಡದಾದರೂ, ಸಣ್ಣದಾದರೂ ಅಲ್ಲಾಹನ ಬಳಿ ಶಿಕ್ಷಾಹ್ರವೇ ಆಗಿವೆ. ಪ್ರವಾದಿಯವರು(ಸ) ಹೇಳಿದರು, “ಓ ಆಯಿಶಾ, ಕ್ಷುಲ್ಲಕ ಹಾಗೂ ಸಾಮಾನ್ಯ ಎಂದು ಭಾವಿಸಲ್ಪಡುವ ಪಾಪಗಳ ಕುರಿತು ಎಚ್ಚರ ವಹಿಸಬೇಕು. ಕಾರಣ ಅಲ್ಲಾಹನ ಬಳಿ ಅವುಗಳ ವಿಚಾರಣೆ ನಡೆಯಲಿಕ್ಕಿದೆ.”
ಸಣ್ಣ ಪಾಪಗಳು ಸಣ್ಣ ಕಟ್ಟಿಗೆಯ ತುಂಡಿನಂತೆ. ಅದು ಒಂದು ತುಂಡು ಸಿಗುವುದಾದರೆ ಅದರಿಂದ ಪ್ರಯೋಜನ ಲಭಿಸುವುದಿಲ್ಲ. ಅಂತಹ ತುಂಡುಗಳು ಧಾರಾಳ ಸಿಕ್ಕಿದರೆ ಅದರಿಂದ ಅಗ್ನಿಕುಂಡವನ್ನೇ ಉಂಟು ಮಾಡಬಹುದು. ಸಣ್ಣ ಪಾಪಗಳ ಸ್ಥಿತಿಯು ಕೂಡಾ ಇದೇ ಆಗಿದೆ. ಒಬ್ಬ ವಿಶ್ವಾಸಿಯು ಸಣ್ಣ ಒಂದು ಪಾಪವನ್ನೆಸಗಿ ಅವನು ಅಲ್ಲಾಹನಲ್ಲಿ ಪ್ರಾಥ್ರಿಸಿದರೆ ಅದು ಕ್ಷಮಿಸಲ್ಪಡಬಹುದು. ಆ ಪಾಪವು ಅವನ ಸ್ವಗ್ರ ಪ್ರವೇಶಕ್ಕೆ ತಡೆಯಾಗಲಿಕ್ಕಿಲ್ಲ. ಆದರೆ ಅವುಗಳನ್ನು ನಿರಂತರವಾಗಿ ಎಸಗಿದರೆ ‘ಹನಿ ಹನಿ ಸೇರಿದರೆ ಹಳ್ಳ’ ಎಂಬಂತೆ ಪಾಪಗಳ ಮಹಾ ಸಂಗಮ ವಾಗುತ್ತದೆ. ನಾಳೆ ಪರಲೋಕದಲ್ಲಿ ಎಲ್ಲಾ ಸಣ್ಣ-ದೊಡ್ಡ ಪಾಪಗಳನ್ನು ಒಂದುಗೂಡಿಸಿ ವಿಚಾರಣೆ ಗೊಳಪಡಿಸುವಾಗ ಸಣ್ಣ ಪಾಪಗಳು ದೊಡ್ಡ ಪಾಪಗಳ ಸಾಲಿಗೆ ಸೇರುವುದು. ಹಾಗೆ ಓವ್ರನ ಒಳಿತುಗಳನ್ನು, ಸತ್ಕಮ್ರಗಳನ್ನು ನಾಶಪಡಿಸಲು ಈ ಪುಟ್ಟ ಪಾಪಗಳು ಕಾರಣವಾಗುತ್ತವೆ.
ಪ್ರವಾದಿಯವರು(ಸ) ಹೇಳಿದರು, “ಇಂದಿನಿಂದ ಅರೇಬಿಯದಲ್ಲಿ ವಿಗ್ರಹಗಳು ಆರಾಧಿಸಲ್ಪಡಬಹುದೇ ಎಂಬ ವಿಷಯದಲ್ಲಿ ಪಿಶಾಚಿಯು ನಿರಾಶೆ ಹೊಂದಿದ್ದಾನೆ. ನೀವು ಸಣ್ಣ ಪಾಪಗಳನ್ನು ನಿರಂತರವಾಗಿ ಮಾಡುತ್ತೀರಿ ಎಂಬ ವಿಷಯದಲ್ಲಿ ಅವನು ಸಂತೃಪ್ತನಾಗಿದ್ದಾನೆ. ಖಂಡಿತವಾಗಿಯೂ ನಾಳೆ ಅಂತ್ಯ ದಿನದಲ್ಲಿ ಸಣ್ಣ ಪಾಪಗಳನ್ನು ದೊಡ್ಡ ಪಾಪಗಳಾಗಿ ಪರಿಗಣಿಸಲಾಗುತ್ತದೆ.” ಅರೇಬಿಯದಲ್ಲಿ ವಿಗ್ರಹಗಳನ್ನು ಆರಾಧಿಸಲಾಗುತ್ತಿತ್ತು. ಇಸ್ಲಾಮಿನ ಆಗಮನದೊಂದಿಗೆ ಅವೆಲ್ಲವೂ ನಿಂತು, ಅಲ್ಲಾಹನನ್ನು ಆರಾಧಿಸಲು ಪ್ರಾರಂಭಿಸಿದಾಗ ಸಕಲ ಪಾಪಗಳ ಪ್ರೇರಕ ಶಕ್ತಿಯಾದ ಶೈತಾನನು ನಿರಾಶೆ ತಾಳಿದರೂ ಜನರನ್ನು ಪಥಭ್ರಷ್ಟಗೊಳಿಸಲಿಕ್ಕಿ ರುವ ತನ್ನ ಪ್ರಯತ್ನವನ್ನು ಕೈಬಿಡಲಿಲ್ಲ. ಜನರಿಂದ ಸಣ್ಣ ಪಾಪಗಳನ್ನು ಮಾಡಿಸುವುದರ ಮೂಲಕ ತೃಪ್ತಿ ಪಟ್ಟನು. ಸಣ್ಣ ಪಾಪಗಳ ಕುರಿತು ಕ್ಷುಲ್ಲಕ ಭಾವನೆಯನ್ನು ಮೂಡಿಸಿದನು. ಅದು ಇಂದು ಕೂಡಾ ನಡೆಯುತ್ತಿದೆ. ಆದರೆ ನಾವು ಶೈತಾನನ ಕುತಂತ್ರಕ್ಕೆ ಬಲಿಯಾಗಿ ಪರಲೋಕವನ್ನು ಕಳೆದುಕೊಳ್ಳಬಾರದು.
ಪ್ರವಾದಿಯವರು(ಸ) ಪಾಪ ಕೃತ್ಯಗಳ ಸಂಗಮದ ಕುರಿತು ಪ್ರಾಯೋಗಿಕವಾಗಿ ಹೀಗೆ ಎಚ್ಚರಿಸಿದ್ದಾರೆ: ಸಅದ್ ಬಿನ್ ಜುನಾದ(ರ) ವರದಿ ಮಾಡಿದ್ದಾರೆ- ಹುನೈನ್ ಯುದ್ಧ ಕಳೆದು ಮರಳುವಾಗ ನಾವು ಒಂದು ಕಣಿವೆಯಲ್ಲಿ ವಿಶ್ರಾಂತಿ ಪಡೆದೆವು. ಯಾವುದೇ ವಸ್ತುಗಳಿಲ್ಲದ ಒಂದು ಪಾಳು ಭೂಮಿಯಾಗಿತ್ತದು. ಆಗ ಪ್ರವಾದಿ(ಸ) ಹೇಳಿದರು, “ಈ ಕಣಿವೆಯಲ್ಲಿ ನಿಮಗೆ ಏನಾದರೂ ಸಿಕ್ಕಿದರೆ ನನ್ನ ಮುಂದೆ ತನ್ನಿ, ಎಲುಬುಗಳ ತುಂಡೋ ಮೃಗಗಳ ಎಲುಬೋ ಆದರೂ ಸರಿ.” ಸಅದ್ ಹೇಳುತ್ತಾರೆ, “ಸ್ವಲ್ಪ ಹೊತ್ತಿನ ಬಳಿಕ ಹೊಲಸು ವಸ್ತುಗಳ ರಾಶಿಯೇ ನಿಮ್ರಾಣವಾಯಿತು. ಆಗ ಪ್ರವಾದಿ ಯವರು(ಸ) ಕೇಳಿದರು. “ಈಗ ಏನು ತಿಳಿಯುತ್ತದೆ? ತಪ್ಪುಗಳನ್ನು ಒಟ್ಟು ಸೇರಿಸಿದರೆ ಈ ಸ್ಥಿತಿಯಾಗಿರಬಹುದು. ಆದ್ದರಿಂದ ಪ್ರತಿ ಯೋವ್ರನೂ ಅಲ್ಲಾಹನನ್ನು ಭಯಪಡಬೇಕು. ಸಣ್ಣ, ದೊಡ್ಡ ಪಾಪಗಳಿಂದ ದೂರವಿರಬೇಕು. ಯಾಕೆಂದರೆ ತಪ್ಪುಗಳನ್ನು ಒಬ್ಬನ ಮೇಲೆ ಈ ರೀತಿಯಲ್ಲಿ ಒಟ್ಟು ಸೇರಿಸಲಾಗುತ್ತದೆ.”
ಆದ್ದರಿಂದ ನಾವು ನಮ್ಮ ಪ್ರತೀ ಕಮ್ರಗಳನ್ನು ಆಲೋಚಿಸಿ ನಿವ್ರಹಿಸಬೇಕಾಗಿದೆ. ಪಾಪಗಳಿಂದ ದೂರ ಸರಿಯುವುದರ ಮೂಲಕ ನಾಳೆ ಪರ ಲೋಕದ ವಿಚಾರಣೆಗೆ ಸಜ್ಜಾಗಬೇಕಾಗಿದೆ. ಶೈತಾನನು ಪಾಪಗಳ ಕಡೆಗೆ ಆಹ್ವಾನಿಸುವಾಗ ಅವನ ಕರೆಗೆ ಓಗೊಡದೆ ದೃಢಚಿತ್ತರಾಗಿ ಮುಂದೆ ಸಾಗಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಮಂಗಳವಾರ, ಮಾರ್ಚ್ 06, 2012

ಮರಣ


ಮರಣ ಎಂಬುದು ನಿರಾಕರಿಸಲಾಗದ ವಾಸ್ತವಿಕತೆಯಾಗಿದೆ. ಎಲ್ಲರೂ ಮರಣದ ರುಚಿಯನ್ನು ಅನುಭವಿಸುವರು. ಜನಿಸಿದ ಪ್ರತೀ ಜೀವಕ್ಕೂ ಮರಣವಿದೆ. ಮರಣವನ್ನು ಬಯಸಿ ದರೂ ಬಯಸದಿದ್ದರೂ ಅದು ಬಂದೇ ಬರುತ್ತದೆ. ಅದು ಯಾರ ಅನುಮತಿಗೂ ಕಾಯುವುದಿಲ್ಲ. ಮರಣವು ಬರುವಾಗ “ನನಗೀಗ ಬರಲು ಪÅರುಸೊತ್ತಿಲ್ಲ. ಮುಂದಿನ ಬಾರಿ ನೋಡುವಾ” ಎಂದು ಸಾಗ ಹಾಕಿ ಕಳುಹಿಸಲು ಯಾವುದಾದರೂ ಆತ್ಮಕ್ಕೆ ಸಾಧ್ಯವಿದೆಯೇ?
ಅಲ್ಲಾಹನು ಪ್ರತಿಯೊಂದು ಆತ್ಮಕ್ಕೂ ಒಂದು ಅವಧಿಯನ್ನು ನಿಶ್ಚಯಿಸಿದ್ದಾನೆ. ಆ ಸಂದಭ್ರ ಬಂದೊದಗಿದಾಗ ಮರಣವು ಆವರಿಸಿಯೇ ತೀರುವುದು. ನಾವು ಯಾವ ಸ್ಥಿತಿಯಲ್ಲಿದ್ದರೂ ಸರಿ. ಅಲ್ಲಾಹನು ಹೇಳುತ್ತಾನೆ. “ಪ್ರತಿಯೊಂದು ಜನಾಂಗಕ್ಕೆ ಒಂದು ಕಾಲಾವಧಿ ನಿಶ್ಚಿತವಿದೆ. ಅದರ ಕಾಲಾವಧಿಯು ಮುಗಿದಾಗ ಒಂದು ಕ್ಷಣ ಹಿಂದೆ ಅಥವಾ ಮುಂದೆ ಆಗುವುದಿಲ್ಲ.” (ಅಅïರಾಫ್- 34)
ಎಷ್ಟೇ ದೊಡ್ಡ ಅಕ್ರಮಿಯಾದರೂ ಮರಣದ ಮುಂದೆ ಕುಬ್ಜನಾಗುತ್ತಾನೆ. ತನ್ನ ಶಕ್ತಿ, ಸಾಮಥ್ಯ್ರ ದಿಂದ ಜಗತ್ತಿನಲ್ಲಿ ಹಲವಾರು ಸಾಧನೆಗಳನ್ನು ಮಾಡಿದವರೂ ಅಕ್ರಮಗಳನ್ನೆಸಗಿದವರೂ ಮರಣ ಸಂಭವಿಸಿದರೆ ನಿಶ್ಚಲರಾಗುತ್ತಾರೆ. ದಷ್ಟ ಪÅಷ್ಟವಾದ ಅಂಗಸೌಷ್ಠ್ಯವವಿದ್ದರೂ ಮಣ್ಣಿನ ಹುಳಗಳಿಗೆ ಆಹುತಿಯಾಗುತ್ತಾರೆ. ಅಲ್ಲಾಹನು ಮಾಡಲು ಹೇಳಿರುವ, ಪ್ರವಾದಿಯವರು(ಸ) ಕಲಿಸಿರುವ ಕೆಲಸಗಳನ್ನು ಮರಣಕ್ಕಿಂತ ಮುಂಚೆಯೇ ಮಾಡ ಬೇಕು. ಮರಣ ಸವಿೂಪಿಸುವಾಗ ‘ನನಗೆ ಸ್ವಲ್ಪ ಒಳಿತುಗಳನ್ನು ಮಾಡಲಿಕ್ಕಿದೆ’ ಎಂದು ಮರಣ ದೊಂದಿಗೆ ಹೇಳಲು ಸಾಧ್ಯವೇ? ಇನ್ನು ಹಾಗೆ ಹೇಳಿದರೆ ಮರಣವು ಮರಳಿ ಹೋಗಬಹುದೇ?
ಮರಣದ ಸ್ಮರಣೆಯು ಓವ್ರನಲ್ಲಿ ಸದಾ ನೆಲೆಸಿದ್ದರೆ ಅವನ ಕಮ್ರಗಳು ಒಳಿತಿನಿಂದ ಕೂಡಿರುತ್ತವೆ. ಅವುಗಳು ಉತ್ತಮ ಪ್ರತಿಫಲಕ್ಕೆ ಅಹ್ರವಾದ ಕಮ್ರಗಳಾಗಿ ಮಾಪ್ರಡುತ್ತವೆ. ಪ್ರವಾದಿಯವರು(ಸ) ಹೇಳಿದರು, “ಸುಖಭೋಗಗಳ ಹಂತಕನಾದ ಮರಣವನ್ನು ನೀವು ಸದಾ ಸ್ಮರಿಸುತ್ತಿರಬೇಕು. ಸಂಕಷ್ಟದ ಸಂದಭ್ರದಲ್ಲಿ ಓವ್ರನು ಮರಣವನ್ನು ಸ್ಮರಿಸಿದರೆ ಜೀವನವು ಅವನಿಗೆ ವಿಶಾಲವಾಗಿ ತೋರುವುದು. ಸುಭಿಕ್ಷೆಯ ಸಂದಭ್ರದಲ್ಲಿ ಮರಣವನ್ನು ಸ್ಮರಿಸಿದರೆ ಜೀವನವು ಅವನಿಗೆ ಇಕ್ಕಟ್ಟಾಗಿ ತೋರುವುದು.” ಮರಣದ ಚಿಂತೆಯು ಮನಸ್ಸಿಗೆ ಬಂದರೆ ಅವನು ಸ್ವಂತ ಅಸ್ತಿತ್ವದ ಕುರಿತು ಪ್ರಜಾÕವಂತನಾಗುತ್ತಾನೆ. ಮರಣ ವನ್ನು ಮರೆತರೆ ಅವನು ತನ್ನನ್ನು ಮರೆಯುತ್ತಾನೆ.
ಇಂದು ಮನುಷ್ಯರಲ್ಲಿ ಮರಣದ ಕುರಿತು ಚಿಂತೆ ಇರುತ್ತಿದ್ದರೆ ಅಕ್ರಮ, ಅಶ್ಲೀಲತೆಗಳು ಕಡಿಮೆಯಾಗು ತ್ತಿದ್ದವು. ಮನುಷ್ಯರಲ್ಲಿ ಮರಣದ ಕುರಿತು ಭಯ ವಿಲ್ಲದಿರುವುದು ಇಂದು ನಡೆಯುತ್ತಿರುವ ಅನಥ್ರ ಗಳಿಗೆ ಕಾರಣವಾಗಿದೆ. ಮರಣ ಹೊಂದಿದವರನ್ನು ನೆನಪಿಸುವುದು ರೋಗಿಗಳನ್ನೂ ಮರಣಾಸನ್ನರನ್ನೂ ಶುಶ್ರೂಷೆ ಮಾಡುವುದು, ಗೋರಿಗಳನ್ನು ಸಂದಶ್ರಿಸು ವುದು ವೊದಲಾದವುಗಳನ್ನು ಮಾಡುವುದರಿಂದ ಮರಣದ ಕುರಿತೂ, ಪರಲೋಕದ ಕುರಿತೂ ಸ್ಮರಣೆ ಹೃದಯದಲ್ಲಿ ದೃಢವಾಗುತ್ತದೆ. ಪ್ರವಾದಿಯವರು(ಸ) ಹೇಳಿದರು, “ನೀನು ಗೋರಿ ಸಂದಶ್ರನ ನಡೆಸ ಬೇಕು. ಅದು ನಿನ್ನಲ್ಲಿ ಪರಲೋಕದ ಕುರಿತು ನೆನಪÅ ಹುಟ್ಟಿಸುತ್ತದೆ. ಮರಣ ಹೊಂದಿದವರನ್ನು ಸ್ನಾನ ಮಾಡಿಸಬೇಕು. ಜೀವವಿಲ್ಲದ ಶರೀರಕ್ಕೆ ಕಮ್ರಗಳನ್ನು ಮಾಡಿಸುವುದು ದೊಡ್ಡ ಉದ್ಬೋಧೆಯಾಗಿದೆ. ನೀನು ಮಯ್ಯತ್ ನಮಾಝ್ ನಿವ್ರಹಿಸಬೇಕು. ಅದು ನಿನ್ನನ್ನು ದುಃಖಕ್ಕೀಡು ಮಾಡಬಹುದು. ಆದರೆ ಅಂತ್ಯ ದಿನದಲ್ಲಿ ದುಃಖಿತನಿಗೆ ಅಲ್ಲಾಹನ ನೆರಳು ಲಭಿಸುತ್ತದೆ. ಸವ್ರ ಒಳಿತುಗಳನ್ನೂ ಅವನ ಮುಂದೆ ಪ್ರದಶ್ರನಕ್ಕಿಡಲಾಗುತ್ತದೆ.”
ಬರ್ರಾಅï ಬಿನ್ ಆಝಿಬ್ರಿಂದ(ರ) ವರದಿ ಯಾಗಿದೆ. “ನಾವು ಅಲ್ಲಾಹನ ಪ್ರವಾದಿಯವ ರೊಂದಿಗೆ(ಸ) ನಡೆಯುತ್ತಿದ್ದೆವು. ಆಗ ಜನರ ಗುಂಪೆÇಂದನ್ನು ನೋಡಿದೆವು. ಆಗ ಪ್ರವಾದಿ ಯವರು(ಸ) ಕೇಳಿದರು, “ಜನರೇಕೆ ಅಲ್ಲಿ ಗುಂಪÅ ಕೂಡಿದ್ದು” ಆಗ ಓವ್ರರು ಹೇಳಿದರು. ಅಲ್ಲಿ ಒಂದು ಗೋರಿ ತೋಡಲಾಗುತ್ತಿದೆ. ಇದನ್ನು ಕೇಳಿದ ಪ್ರವಾದಿಯವರು(ಸ) ವ್ಯಾಕುಲ ಚಿತ್ತರಾದರು. ಅವರು ತಮ್ಮ ಅನುಯಾಯಿಗಳಿಗಿಂತ ವೊದಲೇ ವೇಗವಾಗಿ ಅಲ್ಲಿಗೆ ತಲುಪಿಸಿದರು. ಬಳಿಕ ಗೋರಿಯ ಬಳಿ ಮಂಡಿಯೂರಿದರು. ಕೆಳಗಿರುವ ಮಣ್ಣು ಒದ್ದೆಯಾಗುವಷ್ಟು ಅತ್ತರು. ನಂತರ ತಮ್ಮ ಅನುಯಾಯಿಗಳ ಕಡೆಗೆ ತಿರುಗಿ ಹೇಳಿದರು, “ಸಹೋದರರೇ ಇಂತಹ ಒಂದು ದಿನವನ್ನು ಎದುರಿಸಲಿಕ್ಕಾಗಿ ನೀವು ತಯಾರಿ ನಡೆಸಿರಿ.” ಎಲ್ಲಾ ಪಾಪಗಳಿಂದ ಮುಕ್ತರಾದ ಪ್ರವಾದಿಯವರಿಗೆ(ಸ) ಮರಣದ ಕುರಿತು, ಗೋರಿಯ ಕುರಿತು ಇಷ್ಟು ಭಯವಿದ್ದರೆ ನಮ್ಮ ಕುರಿತು ನಾವು ಸ್ವತಃ ಅವಲೋಕನ ನಡೆಸ ಬೇಕಾಗಿದೆ.
ನಾವು ಸಂಪತ್ತಿನ ಸಂಪಾದನೆಗಾಗಿ ಆಹೋ ರಾತ್ರಿ ಪ್ರಯತ್ನಿಸುತ್ತಿದ್ದೇವೆ. ಅದಕ್ಕಾಗಿ ಎಲ್ಲಾ ಕಷ್ಟಗಳನ್ನೂ ಸಹಿಸುತ್ತೇವೆ. ತಾತ್ಕಾಲಿಕವಾದ ಈ ಲೋಕಕ್ಕೆ ಅವೆಲ್ಲವೂ ಕೇವಲ ಅಲಂಕಾರದ ವಸ್ತುಗಳಾಗಿವೆ. ನಾಳಿನ ಶಾಶ್ವತ ಲೋಕಕ್ಕೆ ಬೇಕಾಗಿರುವ ಏನಾದರೂ ನಾವು ಸಂಪಾದಿಸಿದ್ದೇ ವೆಯೇ? ಮರಣ ಸಂಭವಿಸುವುದಕ್ಕಿಂತ ಮುಂಚೆ ನಾವು ಮಾಡಿದ ಉತ್ತಮ ಕಮ್ರಗಳೇ ನಮಗೆ ನೆರವಾಗುವುದು. ನಮ್ಮ ಸಂಪತ್ತು, ನಮ್ಮ ಸಂತಾನ, ಎಲ್ಲವನ್ನೂ ನಾವು ಬಿಟ್ಟು ಹೋಗುತ್ತೇವೆ. ಮರಣದ ಬಳಿಕ ನವ್ಮೊಂದಿಗೆ ಬರುವುದು ನಮ್ಮ ಕಮ್ರಗಳು ಮಾತ್ರ.
ನಮ್ಮ ಮರಣವು ಯಾವಾಗ, ಹೇಗೆ ಸಂಭವಿಸುವುದೆಂದು ನಮಗೆ ಮುಂಚಿತವಾಗಿ ತಿಳಿಸಲಾಗಿಲ್ಲ. ಆದರೆ ಮರಣ ಸಂಭವಿಸುವುದು ಸತ್ಯ. ಸಂಬಂಧಿಕರ ಭೇಟಿಯ ಬಯಕೆಯಿಂದ ವಿದೇಶದಿಂದ ಹೊರಟು ಬಂದ ವ್ಯಕ್ತಿಯು ಮನೆಗೆ ತಲುಪÅವುದಕ್ಕಿಂತ ಮುಂಚೆ ಮರಣ ಹೊಂದುತ್ತಾನೆ. ಸಂಪಾದಿಸಲು ವಿದೇಶಕ್ಕೆ ಹೊರಟು ಹೋದವನು ಅಲ್ಲಿ ಮರಣ ಹೊಂದುತ್ತಾನೆ. ಬೆಳಿಗ್ಗೆ ಮನೆಯಿಂದ ಹೊರಟವನು ಸಂಜೆ ಇಹಲೋಕ ತ್ಯಜಿಸಿರುತ್ತಾನೆ. ತೊಟ್ಟ ಬಟ್ಟೆಯನ್ನು ನಾವು ಕಳಚಿಬಿಡುವೆವು ಎಂದು ಹೇಳಲೂ ಸಾಧ್ಯವಿಲ್ಲದಂತೆ ಮರಣವು ಬರುತ್ತದೆ.
ಸ್ವತಃ ಸ್ನಾನ ಮಾಡುತ್ತಿದ್ದವನು ಮರಣಿಸಿದರೆ ಇತರರು ಸ್ನಾನ ಮಾಡಿಸುತ್ತ್ತಾರೆ. ಅತ್ಯುತ್ತಮ ದಜ್ರೆಯ ಬಟ್ಟೆ ಧರಿಸಿ ನಡೆಯುತ್ತಿದ್ದವರು ಕಡಿಮೆ ಬೆಲೆಯ ಬಿಳಿ ಬಟ್ಟೆ ತೊಟ್ಟು ಮಲಗಿರುತ್ತಾನೆ. ಊರಿಡೀ ಓಡಾಡಿಕೊಂಡಿದ್ದವನು ಮರಣ ಸಂಭವಿಸಿದರೆ ಅವನನ್ನು ಹೊತ್ತುಕೊಂಡು ಹೋಗುತ್ತಾರೆ. ಈ ಭೂಮಿಗೆ ಅಳುತ್ತಾ ಬರುವ ನಾವು ಹೋಗುವಾಗ ಇತರರನ್ನು ಅಳಿಸುತ್ತಾ ಹೋಗುತ್ತೇವೆ. ಆ ಸಂದಭ್ರದಲ್ಲಿ ನಮಗೆ ಸಹಾಯಕವಾಗುವುದು ಸತ್ಕಮ್ರಗಳು ಮಾತ್ರ ವಾಗಿದೆ. ಈ ನಿಟ್ಟಿನಲ್ಲಿ ನಾಳಿನ ಶಾಶ್ವತ ಜೀವನಕ್ಕೆ ಬೇಕಾಗಿ ಮರಣ ಸಂಭವಿಸುವುದಕ್ಕೆ ಮುಂಚಿತವಾಗಿ ಏನಾದರೂ ಒಳಿತಿನ ಕಾಯ್ರಗಳನ್ನು ನಿವ್ರಹಿಸ ಬೇಕಾಗಿದೆ.