ಸೋಮವಾರ, ಮಾರ್ಚ್ 26, 2012

ಮಾತುಗಾರಿಕೆಯ ಶೈಲಿ


 ಇಂದು ಮನುಷ್ಯರ ಮಧ್ಯೆ ಇರುವ ಸಂಬಂಧವು ಶಿಥಿಲವಾಗುತ್ತಿದೆ. ಒಬ್ಬನನ್ನು ಕಂಡರೆ ಇನ್ನೊಬ್ಬ ಅಸೂಯೆ ಪಡುವ ಪರಿಸ್ಥಿತಿಯು ಬಂದೊದಗಿದೆ. ಪರಸ್ಪರ ನೆರವಿಗೆ ಬರಬೇಕಾದ, ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕಾದ  ರಕ್ತ ಸಂಬಂಧಿಗಳೂ ಇದರಿಂದ ಹೊರತಾಗಿಲ್ಲ. ಈ ಸಂಬಂಧಗಳ ಶಿಥಿಲತೆಗೆ ಹಲವು ಕಾರಣಗಳಿರ ಬಹುದು. ಅವುಗಳ ಪೈಕಿ ಮಹತ್ವವೂ ನಾವು ಕ್ಷುಲ್ಲಕವೆಂದೂ ಭಾವಿಸುವ ಒಂದು ಕಾರಣವಾಗಿದೆ ಮಾತು. ಮಾತಿನಿಂದಾಗಿ ಹಲವು ಕುಟುಂಬಗಳು ಒಡೆದಿವೆ. ಹಲವರ ಮನಸ್ಸು ಘಾಸಿಗೊಂಡಿದೆ. ಯಾವಾಗಲೋ ಆಡಿದ ಒಂದು ಮಾತಿನ ಪರಿಣಾಮ ವಾಗಿ ಹೊರಗೆ ನಗುಮುಖವಿದ್ದರೂ ಮನಸ್ಸಿನಲ್ಲಿ ಹಗೆತನ, ವೈರತ್ವ ಕಟ್ಟಿಕೊಂಡಿರುವವರಿದ್ದಾರೆ. ಎಲುಬಿಲ್ಲದ ನಾಲಿಗೆಯು ಲಗಾಮಿಲ್ಲದೆ ಚಲಿಸುವಾಗ ಮುರಿದು ಬೀಳುವುದು ಹಲವಾರು ಮಾನವೀಯ ಸಂಬಂಧಗಳಾಗಿವೆ.
ಇದೇ ನಾಲಗೆಯಲ್ಲಿ, ಮಾತಿನ ಶೈಲಿಯಲ್ಲಿ ಸಂಬಂಧಗಳನ್ನು ಸ್ಥಾಪಿಸುವ ಮತ್ತು ದೃಢಪಡಿಸುವ ಶಕ್ತಿ ಕೂಡಾ ಇದೆ. ನಾಲಗೆಯನ್ನು ಎಚ್ಚರಿಕೆಯಿಂದ ಬಳಸಿದರೆ ಹಲವರ ಮನಸ್ಸನ್ನು ಗೆಲ್ಲಲು ಸಾಧ್ಯವಿದೆ. ನಾಲಗೆಯಿಂದ ಹೊರಡುವ ಮಾತಿನಿಂದ ದೊಡ್ಡ ಕ್ರಾಂತಿಯೇ ನಡೆಯಬಹುದು. ಅದಕ್ಕೆ ಇತಿಹಾಸವೇ ಸಾಕ್ಷಿ. ಪ್ರವಾದಿ(ಸ) ಹೇಳಿದರು, “ಓರ್ವ ದಾಸನು ಯಾವುದನ್ನೂ ಲೆಕ್ಕಿಸದೆ ಅಲ್ಲಾಹನಿಗೆ ಇಷ್ಟವಾದ ಒಂದು ಮಾತನ್ನಾಡುತ್ತಾನೆ. ಅದರಿಂದಾಗಿ ಅಲ್ಲಾಹನು ಅವನ ಸ್ಥಾನವನ್ನು ಉನ್ನತಿಗೇರಿಸುತ್ತಾನೆ. ಓವ್ರ ದಾಸನು ಯಾವುದನ್ನೂ ಲೆಕ್ಕಿಸದೆ ಅಲ್ಲಾಹನಿಗೆ ಕೋಪ ಬರಿಸುವ ಒಂದು ಮಾತನ್ನಾಡುತ್ತಾನೆ. ಅದು ಅವನ ನರಕ ಪ್ರವೇಶಕ್ಕೆ ಹೇತುವಾಗುತ್ತದೆ.”
ನಾಲಗೆಯು ಎರಡು ಅಲಗಿನ ಕತ್ತಿಯಂತೆ. ಒಳಿತಿನ ಮಾಗ್ರದಲ್ಲಿ ಉಪಯೋಗಿಸಿ ವಿಜಯಗಳಿಸಲೂ ಕೆಡುಕಿನ ಮಾಗ್ರದಲ್ಲಿ ಉಪಯೋಗಿಸಿ ಪರಾಜಿತರಾಗಲೂ ನಾಲಗೆಯಿಂದ ಸಾಧ್ಯವಿದೆ. ನಾಲಗೆಯ ಉಪಯೋಗಕ್ಕೆ ಅನುಗುಣವಾಗಿ ಓವ್ರನಿಗೆ ನರಕಕ್ಕೂ ಸ್ವಗ್ರಕ್ಕೂ ಪ್ರವೇಶಿಸಲು ಸಾಧ್ಯವಿದೆ. “ನಾಲಗೆಯ ಕುರಿತು ಭರವಸೆ ನೀಡುವವನಿಗೆ ನಾನು ಸ್ವಗ್ರದ ಭರವಸೆ ನೀಡುತ್ತೇನೆ” ಎಂದು ಪ್ರವಾದಿ ಯವರು(ಸ) ಹೇಳಿದ್ದಾರೆ.
ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುವುದು  ಓರ್ವ  ಸತ್ಯವಿಶ್ವಾಸಿಗೆ ಭೂಷಣವಲ್ಲ. ನಾಲಗೆಯಿಂದ ಹೊರ ಡುವ ಪ್ರತೀ ಶಬ್ದಗಳನ್ನು (ಅದು ಸಣ್ಣದಾದರೂ ದೊಡ್ಡದಾದರೂ ಸರಿ) ದಾಖಲಿಸಲಾಗುತ್ತದೆಂದೂ ಅವುಗಳ ಕಾರಣದಿಂದಾಗಿ ತಾನು ನಾಳೆ ಅಲ್ಲಾಹನ ಮುಂದೆ ವಿಚಾರಣೆಗೆ ಗುರಿ ಯಾಗುವೆನೆಂದೂ ಸ್ವರ್ಗ , ನರಕಗಳನ್ನು ತೀಮ್ರಾನಿಸುವುದರಲ್ಲಿ ಅವುಗಳಿಗೆ ಪಾತ್ರವಿದೆಯೆಂದೂ ಓವ್ರ ಸತ್ಯ ವಿಶ್ವಾಸಿಯು ತಿಳಿದುಕೊಂಡಿರುತ್ತಾನೆ. ತಾನು ಮಾಡಿರುವ ಸತ್ಕಮ್ರಗಳನ್ನು ನಾಶಪಡಿಸುವ ಶಕ್ತಿಯು ನಾಲಗೆಗೆ ಇದೆ ಎಂದು ಅವನು ಮನಗಂಡಿರು ತ್ತಾನೆ. ಆದ್ದರಿಂದ ಅವನು ಮಾತ ನಾಡುವಾಗ ಬಹಳ ಎಚ್ಚರಿಕೆಯಿಂದ ಯಾರಿಗೂ ನೋವಾಗದ ರೀತಿಯಲ್ಲಿ ಮಾತನಾಡುತ್ತಾನೆ. ಕುರ್ಆನ್ ಹೇಳುತ್ತದೆ “ಸತ್ಯವಿಶ್ವಾಸಿಗಳೇ ಅಲ್ಲಾಹನ್ನು ಭಯ ಪಡಿರಿ ಮತ್ತು ಸರಿಯಾದ ಮಾತನ್ನೇ ಹೇಳಿರಿ. ಹಾಗಾದರೆ ಅಲ್ಲಾಹನು ನಿಮ್ಮ ಕಮ್ರಗಳನ್ನು ಸರಿಪಡಿಸುವನು ಮತ್ತು ನಿಮ್ಮ ಅಪರಾಧಗಳನ್ನು ಕ್ಷಮಿಸುವನು. ಯಾರು ಅಲ್ಲಾಹ್ ಮತು ಅವನ ಸಂದೇಶವಾಹಕರ ಅನುಸರಣೆ ಮಾಡಿ ದನೋ ಅವನು ಮಹಾ ಯಶಸ್ಸನ್ನು ಪಡೆದನು.” (ಅಲ್ಅಹ್ಝಾಬ್: 70-71)
ನಮಗೆಲ್ಲರಿಗೂ ಮಾದರಿಯಾದ ಪ್ರವಾದಿಯವರ(ಸ) ಮಾತಿನ ಶೈಲಿ ಹೇಗಿತ್ತೆಂದು ಆಯಿಶಾ(ರ) ಹೇಳುತ್ತಾರೆ. “ಅಲ್ಲಾಹನ ಸಂದೇಶವಾಹಕರು ನಿಮ್ಮಂತೆ ಅನಿಯಂತ್ರಿತವಾಗಿ ಮಾತನಾಡುವ ವರಾಗಿರಲಿಲ್ಲ. ಅವರ ಮಾತುಗಳನ್ನು ಯಾರಾದರೂ ಎಣಿಸಲು ಬಯಸಿದರೆ ಅವನಿಗೆ ಅದು ಸಾಧ್ಯವಾಗುತ್ತಿತ್ತು.” ಪ್ರವಾದಿಯವರು(ಸ) ನಾಲಗೆಯನ್ನು ಎಚ್ಚರಿಕೆಯಿಂದ ಬಳಸಬೇಕೆಂದೂ ಇಲ್ಲ ದಿದ್ದರೆ ನಾಳೆ ಪರಲೋಕದಲ್ಲಿ ನಷ್ಟ ಹೊಂದಿದವರ ಸಾಲಿಗೆ ಸೇರುವಿರಿ ಎಂದೂ ತನ್ನ ಅನುಯಾಯಿಗಳಿಗೆ ಉಪದೇಶಿಸುತ್ತಿದ್ದರು. ಒಮ್ಮೆ ಪ್ರವಾದಿ(ಸ) ನಾಲಗೆಯ ರಾದ್ಧಾಂತದ ಕುರಿತು ಹೇಳಿದರು, “ಓವ್ರನು ಸ್ವಗ್ರಕ್ಕೆ ಹತ್ತಿರವಾಗುತ್ತಿರುವನು. ಅವನ ಮತ್ತು ಸ್ವಗ್ರದ ಮಧ್ಯೆ ಒಂದು ಬಾಣದ ಅಂತರವಿರುತ್ತದೆ. ಹೀಗಿರುವಾಗ ಅವನು ಒಂದು ಮಾತನ್ನಾಡುತ್ತಾನೆ. ಇದ ರಿಂದಾಗಿ “ಸನ್ಆ” ಎಂಬ ಪ್ರದೇಶದ ದೂರಕ್ಕಿಂತ ಹೆಚ್ಚು ದೂರ ಹಿಂದಳ್ಳಲ್ಪ ಡುತ್ತಾನೆ.” ಸ್ವಗ್ರ ಪ್ರವೇಶದಿಂದ ತಡೆ ಯುವ ಮತ್ತು ಸ್ವಗ್ರ ಪ್ರವೇಶಗೊಳಿಸುವ ಶಕ್ತಿ ನಾಲಗೆಗೆ ಇದೆ.
ನಾವು ಕ್ಷುಲ್ಲಕವೆಂದು ಭಾವಿಸುವ ಹಲವು ಮಾತುಗಳು ನಮ್ಮ ಮಧ್ಯೆ ಅನಾಹುತಗಳನ್ನು ಸೃಷ್ಟಿಸುವಷ್ಟು ಶಕ್ತಿ ಹೊಂದಿವೆ. ಆಕಸ್ಮಿಕವಾಗಿ ಹೇಳಿದ ಒಂದು ಮಾತಿನಿಂದಾಗಿ ಜೀವನವೇ ಬುಡಮೇಲುಗೊಂಡ ಎಷ್ಟೋ ಘಟನೆ ಗಳಿವೆ. ಪ್ರವಾದಿ(ಸ) ಹೇಳಿದರು, “ನಿಶ್ಚಯವಾಗಿಯೂ ಓವ್ರ ವ್ಯಕ್ತಿ ಅಲ್ಲಾಹನಿಗೆ ತೃಪ್ತಿದಾಯಕವಾದ ಒಂದು ಮಾತನ್ನಾಡುತ್ತಾನೆ. ಅದರ ಪರಿಣಾಮದ ಕುರಿತು ಅವನು ಆಲೋಚಿಸಿರುವುದಿಲ್ಲ. ಆದರೂ ಆ ಮಾತಿನ ಕಾರಣದಿಂದ ಅಲ್ಲಾಹನು ತನ್ನ ತೃಪ್ತಿಯನ್ನು ಅವನ ಹೆಸರಿನಲ್ಲಿ ಪರಸ್ಪರ ಭೇಟಿಯಾಗುವ ದಿವಸದ ವರೆಗೆ ದಾಖಲಿಸಿಡುವನು. ಇನೋವ್ರ ವ್ಯಕ್ತಿ ಅಲ್ಲಾಹನಿಗೆ ಇಷ್ಟವಿಲ್ಲದ ಒಂದು ಮಾತನ್ನಾಡುತ್ತಾನೆ. ಅದರ ಪರಿಣಾಮದ ಕುರಿತು ಅವನು ಚಿಂತಿಸಿರುವುದಿಲ್ಲ. ಆದರೂ ಆ ಮಾತಿ ಗಾಗಿ ಅಲ್ಲಾಹನು ತನ್ನ ಕೋಪವನ್ನು ಅವನ ಹೆಸರಿನಲ್ಲಿ ಪರಸ್ಪರ ಭೇಟಿ ಯಾಗುವ ವರೆಗೆ ದಾಖಲಿಸಿಡುವನು.” ವಿದ್ವಾಂಸರಾದ ಹಾತ್ವಿಮುಲ್ ಹಸನ್(ರ) ಹೇಳುತ್ತಿದ್ದರು, “ಅಲ್ಲಾಹನಿಗೆ ನೀಡಲು 
ಉತ್ತರವನ್ನು ಸಿದ್ಧಪಡಿಸದೆ ನಾನು ಯಾವುದೇ ಮಾತನ್ನಾಡುತ್ತಿರಲಿಲ್ಲ. ಅಂತ್ಯ ದಿನದಲ್ಲಿ ಅಲ್ಲಾಹನು ನನ್ನೊಂದಿಗೆ, “ನೀನು ಯಾಕೆ ಹಾಗೆ ಹೇಳಿದ್ದು? ಎಂದು ಪ್ರಶ್ನಿಸುವನು. ಅದರ ಕಾರಣವನ್ನು ಹೇಳಲು ನನಗೆ ಸಾಧ್ಯವಾಗಬೇಕು.”
ಮಾತನಾಡಲು ಬಯಸಿದಾಗ ಒಮ್ಮೆ ಚಿಂತಿಸುವ ಜಾಯಮಾನವಾದರೂ ಇರ ಬೇಕು. ಮಾತನಾಡಿದ ಬಳಿಕ ಬೆರಳು ಕಚ್ಚಿ ಪ್ರಯೋಜನವಿಲ್ಲ. ಮಾತನಾಡುವ ವಿಧಾನದ ಕುರಿತು ಇಮಾಮ್ ಹಸನುಲ್ ಬಸರಿ(ಸ) ವಿವರಿಸುತ್ತಾರೆ, “ಬುದ್ಧಿವಂತನ ನಾಲಗೆಯು ಅವನ ಹೃದಯದ ಹಿಂದಿ ರುತ್ತದೆ. ಮಾತ ನಾಡಲು ಬಯಸಿದಾಗ ಅವನು ಹೃದಯದೊಂದಿಗೆ ಅನುಮತಿ ಕೇಳು ವನು. ಅದು ಅನುಮತಿ ನೀಡಿದರೆ ಅವನು ಮಾತನಾಡುವನು. ಇಲ್ಲದಿದ್ದರೆ ಮೌನಪಾಲಿಸುವನು. ಅವಿವೇಕಿಯ ಹೃದಯವು ಅವನ ನಾಲಗೆಯ ಹಿಂದಿರು ತ್ತದೆ. ಅವನು ಮಾತನಾಡುವಾಗ ಹೃದಯದ ಕಡೆಗೆ ತಿರುಗಿ ನೋಡುವು ದಿಲ್ಲ. ನಾಲಗೆಯಲ್ಲಿ ಬರುವುದೆಲ್ಲವನ್ನೂ ಹೇಳುತ್ತಾನೆ.”
ಒಟ್ಟಿನಲ್ಲಿ ನಾಲಗೆಯ ಉಪಯೋಗ ಕ್ಕನುಸಾರವಾಗಿ ಓವ್ರನ ಇಹ-ಪರ ವಿಜಯವು ತೀಮ್ರಾನವಾಗುತ್ತದೆ. ಚಿಂತಿಸದೇ ಹೇಳುವ ಮಾತುಗಳಿಂದಾಗಿ ನಮ್ಮ ವಿಶ್ವಾಸಕ್ಕೂ ಸತ್ಕಮ್ರಗಳಿಗೂ ಅಪಾಯವಿದೆ. ಅಲ್ಲಾಹನ ಪ್ರೀತಿ ಗಳಿಸ ಬೇಕಾದರೆ, ಪರಲೋಕದಲ್ಲಿ ವಿಜಯಿಗಳಾಗಬೇಕಾದರೆ ನಾಲಗೆ ಮತ್ತು ಮಾತಿನ ಮೇಲೆ ನಿಯಂತ್ರಣ ಹೇರುವುದು ಅನಿವಾರ್ಯವಾಗಿದೆ. ಪ್ರವಾದಿ(ಸ) ಅದಕ್ಕೇ ಹೇಳಿದ್ದು, “ಯಾರು ಅಲ್ಲಾಹನಲ್ಲೂ ಪರಲೋಕದಲ್ಲೂ ವಿಶ್ವಾಸವಿರಿಸುತಾನೋ ಅವನು ಉತ್ತಮ ಮಾತುಗ ಳನ್ನಾಡಲಿ ಇಲ್ಲದಿದ್ದರೆ ಮೌನ ವಹಿಸಲಿ” ಎಂದು. ಆದ್ದರಿಂದ ನಾವೂ ನಮ್ಮ ಸತ್ಕರ್ಮಗಳನ್ನು ಕಳೆದುಕೊಳ್ಳದಂತೆ ಎಚ್ಚರ ಮಹಿಸಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ