ಸೋಮವಾರ, ಏಪ್ರಿಲ್ 02, 2012

ಅಹಂಕಾರವೆಂಬ ಹೃದಯ ರೋಗ


ಮನುಷ್ಯರ ಹೃದಯಗಳಿಗೆ ಹಲವಾರು ರೋಗಗಳು ಭಾದಿಸುತ್ತವೆ. ಅವು ಔಷಧಿಯ ಮೂಲಕ ಗುಣವಾಗುವಂಥದ್ದಲ್ಲ. ಶಸ್ತ್ರಕ್ರಿಯೆ ನಡೆಸಿ ನಿವಾರಿಸುವಂಥದ್ದಲ್ಲ. ಆತ್ಮ ನಿಯಂತ್ರಣವು ಆ ರೋಗ ಗಳಿಗೆ ಮದ್ದಾಗಿದೆ. ಅವುಗಳ ಪೈಕಿ ಅಹಂಕಾರವೂ ಒಂದಾಗಿದೆ. ಇದು ಓರ್ವ ವಿಶ್ವಾಸಿಯ ಸತ್ಕರ್ಮಗಳನ್ನು ನಾಶ ಪಡಿಸುತ್ತದೆ. ಅವನ ಸ್ವರ್ಗ ಪ್ರವೇಶಕ್ಕೆ ಕಂಟಕವಾಗುತ್ತದೆ. ಅಹಂಕಾರವು ಓರ್ವ ನಲ್ಲಿ ಮನೆ ಮಾಡಿಕೊಂಡಿದ್ದರೆ ಅವನ ಸುತ್ತಮುತ್ತಲಿರುವವರು ಅವನಿಗೆ ಕುಬ್ಜರಾಗಿ ತೋರುತ್ತಾರೆ. ಅವರ ಮುಂದೆ ತಾನು ದೊಡ್ಡವನು ಎಂಬ ಒಣ ಜಂಬವು ರೂಪುಗೊಳ್ಳುತ್ತದೆ. ಜನರನ್ನು ಕೇವಲವಾಗಿ ನೋಡುವುದು ಅಹಂಕಾ ರದ ಭಾಗವಾಗಿದೆ. ಪ್ರವಾದಿಯವರು(ಸ) ಹೇಳಿದರು, “ಸತ್ಯವನ್ನು ನಿರಾಕರಿಸುವುದು ಮತ್ತು ಜನರನ್ನು ಕ್ಷುಲ್ಲಕವಾಗಿ ಪರಿ ಗಣಿಸುವುದು ಅಹಂಕಾರವಾಗಿದೆ.”
ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅಹಂಕಾರವು ಅವನ ಪದವಿಯನ್ನು ಪತನಗೊಳಿಸುತ್ತದೆ. ಗತಕಾಲಗಳಲ್ಲಿ ಜೀವಿಸಿದ್ದ ದೊಡ್ಡ ದೊಡ್ಡ ವ್ಯಕ್ತಿತ್ವಗಳು ತಮ್ಮ ಅಹಂಕಾರದಿಂದಾಗಿ ನಾಶ ಹೊಂದಿದ ಹಲವಾರು ಘಟನೆಗಳಿಗೆ ಇತಿ ಹಾಸವೇ ಸಾಕ್ಷಿ. ಕುರಾನ್ ಅಂಥವರ ಕುರಿತು ಹಲವಾರು ಕಡೆಗಳಲ್ಲಿ ವಿವರಿಸಿದೆ.ಕುರಾನ್ ಇವುಗಳನ್ನು ವಿವರಿಸಿದ್ದು ಮನುಷ್ಯರು ಪಾಠ ಕಲಿಯಲಿಕ್ಕಾಗಿದೆ. ಆದರೆ ಇಂದು ಜನರು ಕುರಾನ್ ಓದುತ್ತಿದ್ದರೂ, ಕಲಿಯುತ್ತಿದ್ದರೂ ಅದರ ಬೋಧನೆಗಳ ಪ್ರಕಾರ ವರ್ತಿ ಸುತ್ತಿಲ್ಲ. ಕುರಾನ್ ವಿವರಿಸಿದ ಘಟನೆಗಳೆಲ್ಲಾ ಇಂದು ಜನರಿಗೆ ರೋಮಾಂಚಕಾರಿ ಕಥೆಗಳಾಗಿ ಬದಲಾಗಿವೆ.
ಇಂದು ಜನರು ಹಲವಾರು ಸತ್ಕರ್ಮಗಳನ್ನು ಮಾಡುತ್ತಾರೆ. ಮಹಾ ದಾನಿಗಳು ಈ ಸಮಾಜದಲ್ಲಿ ಬೇಕಾದಷ್ಟಿದ್ದಾರೆ. ಆದರೆ ಈ ದಾನ-ಧರ್ಮಗಳ ಹೆಸರಿನಲ್ಲಿ ತನ್ನನ್ನು ಎಲ್ಲರೂ ದೊಡ್ಡ ವ್ಯಕ್ತಿ ಎಂದು ಗೌರವಿಸಬೇಕು ಎಂಬ ಚಿಂತೆಯು ಹೃದಯದಲ್ಲಿ ವೊಳಕೆಯೊಡೆದರೆ ಅವನ ಸತ್ಕಮ್ರಗಳು ವ್ಯಥ್ರ ವಾಗುವುದರಲ್ಲಿ ಯಾವುದೇ ಸಂಶಯ ವಿಲ್ಲ. ಮಾತ್ರವಲ್ಲ, ಅಂತಹ ಸತ್ಕಮ್ರ ಗಳನ್ನೆಸಗಿ ಅಹಂಕಾರ ಪಟ್ಟದ್ದಕ್ಕೆ ಶಿಕ್ಷೆ ಯನ್ನೂ ಅನುಭವಿಸುವನು.
ಸಮಾಜದಲ್ಲಿರುವ ಹೆಚ್ಚಿನ ಮಂದಿ ಯಲ್ಲಿ ಅಲ್ಪವಾದರೂ ಅಹಂಕಾರವಿರು ತ್ತದೆ. (ವಿಶೇಷತಃ ನೇತಾರರಲ್ಲೂ ವಿದ್ವಾಂಸರಲ್ಲೂ) ಗತಕಾಲಗಳಲ್ಲಿ ಪ್ರವಾದಿ ಗಳು ಆಗಮಿಸಿದಾಗ ಜನರು ಅವರನ್ನು ನಿಷೇಧಿಸಲು ಕಾರಣ ಸ್ವಂತದ ಕುರಿತಾದ ದುರಭಿಮಾನವೂ ಅಹಂಕಾ ರವೂ ಆಗಿದೆ. ಓರ್ವನ ಮನಸ್ಸಿನಲ್ಲಿ ‘ನಾನು’ ಎಂಬ ಆಲೋಚನೆ ಬಂದರೆ ಅದು ಅಹಂಕಾರದ ಲಕ್ಷಣವಾಗಿದೆ. ಅಲ್ಲಾಹನು ಆದಮರ(ಅ) ಮುಂದೆ ಸುಜೂದ್ ಮಾಡಲು ಮಲಕ್ಗಳೊಂದಿಗೆ ಹೇಳಿ ದಾಗ ಇಬ್ಲೀಸನ್ನು ಹೊರತು ಪಡಿಸಿ ಎಲ್ಲರೂ ಸಾಷ್ಟಾಂಗ ಮಾಡಿದರು. ಇಬ್ಲೀಸನಿಗೆ ‘ನಾನು ದೊಡ್ಡವನು’ ಎಂಬ ಭಾವನೆಯು ಮನಸ್ಸಿನಲ್ಲಿ ಮೂಡಿದ್ದರಿಂದ ಅವನು ಅದರಿಂದ ಹಿಂದೆ ಸರಿದನು. ತತ್ಪರಿ ಣಾಮವಾಗಿ ಅವನು ಅಲ್ಲಾಹನ ಶಾಪಕ್ಕೆ ಗುರಿಯಾದನು.
ಒಮ್ಮೆ ಅಬ್ದುಲ್ಲಾ ಬಿನ್ ಉಮರ್(ರ) ಮತ್ತು ಅಬ್ದುಲ್ಲಾ ಬಿನ್ ಅಮ್ರ್(ರ) ಮವ್ರಾ ಬೆಟ್ಟದಲ್ಲಿ ಪರಸ್ಪರ ಭೇಟಿಯಾದರು. ಬಳಿಕ ಮಾತುಕತೆ ನಡೆಸಿ ಅಬ್ದುಲ್ಲಾ ಬಿನ್ ಅ ಮ್ರ್ ರ (ರ) ಎದ್ದು ಹೋದರು. ಇಬ್ನು ಉಮರ್ ಅಲ್ಲಿ ಕುಳಿತು ಅಳಲಾರಂಭಿಸಿದರು. ಆಗ ಓವ್ರರು ಕೇಳಿ ದರು, “ಓ ಅಬೂ ಅಬ್ದುರ್ರಹ್ಮಾನ್ ತಾವೇಕೆ ಅಳುತ್ತಿದ್ದೀರಿ?” ಇಬ್ನು ಉಮರ್(ರ) ಉತ್ತರಿಸಿದರು, “ಯಾರ ದಾದರೂ ಹೃದಯದಲ್ಲಿ ಒಂದು ಸಾಸಿವೆ ಕಾಳಿನಷ್ಟಾದರೂ ಅಹಂಕಾರ ಇದ್ದರೆ ಆ ಕಾರಣದಿಂದಾಗಿ ಅಲ್ಲಾಹನು ಅವನನ್ನು ನರಕಕ್ಕೆ ಎಸೆಯುವನು ಎಂಬುದಾಗಿ ಪ್ರವಾದಿಯವರು(ಸ) ಹೇಳಿದ್ದಾರೆಂದು ಅಬ್ದುಲ್ಲಾ ಬಿನ್ ಅಮ್ರ್ (ರ) ನನ್ನೊಡನೆ ಹೇಳಿದರು. ಅದು ನನ್ನನ್ನು ಅಳುವಂತೆ ಮಾಡಿತು.” ಸಹಾಬಿಗಳು ತಮ್ಮ ಕಮ್ರ ಗಳಲ್ಲಿ ಅಹಂಕಾರ, ಕಾಪಟ್ಯತೆ ಬೆರೆಯ ದಂತೆ ಬಹಳ ಎಚ್ಚರಿಕೆ ವಹಿಸುತ್ತಿದ್ದರು. ಅವರ ಮನಸ್ಸಿನಲ್ಲಿ `ನಾನು’ ಎಂಬ ಪ್ರಜ್ಞೆಯು ಎಂದೂ ಉದಯಿಸಿರಲಿಲ್ಲ. ಅದಕ್ಕೆ ಅವರ ಇತಿಹಾಸವೇ ಸಾಕ್ಷಿ.
ಇಬ್ಲೀಸನು ಅಲ್ಲಾಹನ ಮುಂದೆ ಅಹಂಕಾರ ಪ್ರದಶ್ರಿಸಿದ್ದರಿಂದ ಅದು ಪ್ರಪಂಚದ ಪ್ರಥಮ ಪಾಪವಾಗಿದೆ. ಅಲ್ಲಾಹನು ಹೇಳಿರುವುದಾಗಿ ಪ್ರವಾದಿ ಯವರು(ಸ) ಹೇಳಿದರು, “ಅಹಂಕಾ ರವು ನನ್ನ ಅಂಗಿಯಾಗಿದೆ. ಗಾಂಭೀ ಯ್ರವು ನನ್ನ ಉಡುಪಾಗಿದೆ. ಯಾರಾ ದರೂ ಅದನ್ನು ನನ್ನಿಂದ ಎಳೆದು ತೆಗೆದು ಸ್ವತಃ ಧರಿಸಲು ಪ್ರಯತ್ನಿಸಿದರೆ ನಾನು ಅವನನ್ನು ಖಂಡಿತವಾಗಿಯೂ ನರಕಕ್ಕೆಸೆಯುವೆನು.”
ಅಲೀ(ರ) ಹೇಳುತ್ತಾರೆ, “ಒಮ್ಮೆ ಪ್ರವಾದಿಯವರು(ಸ) ಕೆಲವು ಮಂದಿಯ ಬದಿಯಿಂದ ನಡೆದುಕೊಂಡು ಹೋಗು ತ್ತಿದ್ದರು. ಅವರಲ್ಲಿ ಓವ್ರನು ಬೆಲೆ ಬಾಳುವ ಸುಗಂಧದ್ರವ್ಯ ಪÇಸಿದ್ದನು. ಪ್ರವಾದಿಯವರು(ಸ) ಅವನನ್ನು ಕಡೆ ಗಣಿಸಿ ಉಳಿದವರನ್ನು ನೋಡಿ ಸಲಾಮ್ ಹೇಳಿದರು. ಆಗ ಅವರು ಕೇಳಿದರು, “ಪ್ರವಾದಿಯವರೇ(ಸ) ತಾವು ನನ್ನನ್ನು ಕಡೆಗಣಿಸಿದ್ದೀರಾ?” ಪ್ರವಾದಿ ಯವರು(ಸ) ಹೇಳಿದರು, “ನಿನ್ನ ಕಣ್ಣು ಗಳ ಮಧ್ಯೆ ನಾನು ಒಂದು ಅಗ್ನಿಜ್ವಾಲೆ ಯನ್ನು ಕಾಣುತ್ತಿದ್ದೇನೆ.” ಅಹಂಕಾರ ಹಾಗೂ ದುರಭಿಮಾನವು ಆ ವ್ಯಕ್ತಿ ಯಲ್ಲಿತ್ತು. ಇದರಿಂದಾಗಿ ಪ್ರವಾದಿ ಯವರು(ಸ) ಅವರನ್ನು ಕಡೆಗಣಿಸಿದರು.
ಅನಸ್(ರ) ಉದ್ಧರಿಸಿರುವ ಇನ್ನೊಂದು ಘಟನೆಯು ಹೀಗಿದೆ: ಪ್ರವಾದಿಯವರ(ಸ) ಕಾಲದಲ್ಲಿ ಸಜ್ಜನ ವ್ಯಕ್ತಿಯೊಬ್ಬರಿದ್ದರು. ಜನರು ಆ ವ್ಯಕ್ತಿಯ ಒಳಿತುಗಳ ಕುರಿತು ಪ್ರವಾದಿಯವ ರೊಂದಿಗೆ(ಸ) ಹೊಗಳುತ್ತಿದ್ದರು. ಒಮ್ಮೆ ಅವರು ಪ್ರವಾದಿಯವರ(ಸ) ಸನ್ನಿಧಿಗೆ ಬಂದಾಗ ಜನರು ಹೇಳಿದರು, “ಪ್ರವಾದಿಯವರೇ(ಸ) ಇವರ ಕುರಿತು ನಾವು ನಿವ್ಮೊಂದಿಗೆ ಹೇಳುತ್ತಿದ್ದೆವು.” ಪ್ರವಾದಿ(ಸ) ಆ ವ್ಯಕ್ತಿಯನ್ನು ನೋಡಿ ಹೀಗೆ ಹೇಳಿ ದರು. “ಪೈಶಾಚಿಕವಾದ ಒಂದು ಚಿಹ್ನೆ ಯನ್ನು ನಾನು ಅವರ ಮುಖದಲ್ಲಿ ಕಾಣು ತ್ತಿದ್ದೇನೆ.” ಬಳಿಕ ಪ್ರವಾದಿಯವರು(ಸ) ಅವರೊಂದಿಗೆ ಕೇಳಿದರು, “ಅಲ್ಲಾಹನನ್ನು ಸಾಕ್ಷಿಯಾಗಿಸಿ ನಾನು ತವ್ಮೊಂದಿಗೆ ಕೇಳು ತ್ತಿದ್ದೇನೆ. ಜನರಲ್ಲಿ ತಮಗಿಂತ ಶ್ರೇಷ್ಠ ವ್ಯಕ್ತಿ ಬೇರೆ ಯಾರಿಲ್ಲ ಎಂದು ತಾವು ಭಾವಿಸು ತ್ತೀರಾ?” ಆಗ ಅವರು, “ಹೌದು ಪ್ರವಾದಿ ಯವರೇ(ಸ)” ಎಂದುತ್ತರಿಸಿದರು. ಆ ವ್ಯಕ್ತಿಯಲ್ಲಿ `ನಾನು’ ಎಂಬ ಅಹಂಕಾರದ ಲಕ್ಷಣವಿತ್ತು. ಪ್ರವಾದಿಯವರು(ಸ) ಕೇವಲ ಒಂದು ಪ್ರಶ್ನೆಯ ಮೂಲಕ ಆ ವ್ಯಕ್ತಿಯ ನೈಜ ಬಣ್ಣವನ್ನು ತಮ್ಮ ಅನುಚರರಿಗೆ ಬಯಲು ಮಾಡಿದರು. ಇಂತಹ ವ್ಯಕ್ತಿಗಳು ನವ್ಮೊಂದಿಗೂ ಇರಬಹುದು. ಇಂತಹ ಸ್ವಭಾವಗಳು ನವ್ಮೊಳಗೂ ಇರಬಹುದು. ಪರಲೋಕದಲ್ಲಿ ಅಹಂಕಾರಗಳ ಸ್ಥಿತಿ ಯನ್ನು ಈ ಪ್ರವಾದಿ ವಚನ ಪ್ರಸ್ತುತಃ ಪಡಿಸುತ್ತದೆ.” ಅಂತ್ಯದಿನದಲ್ಲಿ ಅಹಂಕಾರಿ ಗಳನ್ನು ಪುಟ್ಟ ಇರುವೆಗಳ ರೂಪದಲ್ಲಿ ಹಾಜರಿಪಡಿಸಲಾಗುತ್ತದೆ. ಅವರಿಗೆ ನಾಲ್ಕು ಭಾಗಗಳಿಂದಲೂ ನಿಂದನೆಯ ಸುರಿಮಳೆ ಯಾಗುತ್ತದೆ. `ಬೂಲಸ್’ ಎಂಬ ಹೆಸರಿನ ನರಕದ ಜ್ವಾಲೆಗೆ ಅವರನ್ನು ಎಳೆದೊಯ್ಯಲಾಗುವುದು. ಅಗ್ನಿಯ ಜ್ವಾಲೆಗಳು ಅವರನ್ನು ಆವರಿಸುವವು. ನರಕವಾಸಿಗಳಿಂದ ಸುರಿಯುವ ದುಗ್ರಂಧಮಯವಾದ ನೀರನ್ನು ಅವರಿಗೆ ಕುಡಿಸಲಾಗುವುದು.”
ಈ ನಿಟ್ಟಿನಲ್ಲಿ ನಾವು ನಮ್ಮ ಹೃದಯದಲ್ಲಿ ಅಂಹಕಾರವು ಪ್ರವೇಶಿಸದಂತೆ ಎಚ್ಚರವಹಿಸಬೇಕು. ನಾವು ಸತ್ಕಮ್ರಗಳನ್ನು ಮಾಡಿದರೂ ಅಹಂಕಾರದ ನಿಮಿತ್ತ ಅದು ನರಕಕ್ಕೆ ಪ್ರವೇಶಿಸಲು ಹೇತುವಾಗಬಾರದು. ಅಲ್ಲಾಹನು ಅನುಗ್ರಹಿಸಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ