ಸೋಮವಾರ, ಏಪ್ರಿಲ್ 16, 2012

ಅವರು ಶರಬತ್ತಿನಂತೆ ಸಲೀಸಾಗಿ ಕುಡಿಯುತ್ತಾರೆ.


3 ರಂಗಗಳಿಗೆ ಸಂಬಂಧಿಸಿದ ಕೆಡುಕುಗಳ ಕುರಿತು ಪ್ರವಾದಿಯವರು(ಸ) ಹೇಳಿದರು, “ನಿನ್ನ ಅಂಗಾಗಳನ್ನು ಕಡಿದರೂ, ನಿನ್ನನ್ನು ಬೆಂಕಿಯಲ್ಲಿ ಸುಟ್ಟರೂ ನೀನು ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಗಳನ್ನಾಗಿ ಮಾಡಬಾರದು. ನೀನು ಕಡ್ಡಾಯ ನಮಾಝನ್ನು ಮನಃ ಪೂರ್ವಕವಾಗಿ ಉಪೇಕ್ಷಿಸಬಾರದು. ಮನಃ ಪೂರ್ವಕವಾಗಿ ಉಪೇಕ್ಷಿಸಿದರೆ ನಾನು ಅಲ್ಲಾಹನ ಹೊಣೆಗಾರಿಕೆಯಿಂದ ಹೊರಬರುವೆ. ನೀನು ಮದ್ಯಪಾನ ಮಾಡಬಾರದು. ಕಾರಣ ಅದು ಎಲ್ಲಾ ಕೆಡುಕುಗಳ ಕೀಲಿ ಕೈಯಾಗಿದೆ.”
ಇಲ್ಲಿ ಪ್ರವಾದಿಯವರು(ಸ) ನಂಬಿಕೆ, ಆರಾಧನೆ ಮತ್ತು 
ಸಂಸ್ಕ್ರತಿಗೆ  ಸಂಬಂಧಿಸಿದ ಮೂರು ಕೆಡುಕುಗಳ ಕುರಿತು ಪ್ರಸ್ತಾಪಿಸಿದ್ದಾರೆ. ಏಕದೇವ ವಿಶ್ವಾಸವು ವಿಶ್ವಾಸ ಕರ್ಮಗಳ ಪೈಕಿ ಪ್ರಥಮವಾದುದಾಗಿದೆ. ಧರ್ಮ  ಬುನಾದಿಯಲ್ಲಿಯೂ ಪ್ರಥಮವಾದುದಾಗಿದೆ. ಅಲ್ಲಾಹನ ಶಕ್ತಿ ಸಾಮಥ್ಯ್ರವನ್ನೂ ಸ್ಥಾನವನ್ನೂ ಇತರರಿಗೆ ಕಲ್ಪಿಸದಿರುವುದು ಏಕದೇವ ವಿಶ್ವಾಸದ ಬೇಡಿಕೆಯಾಗಿದೆ. ಇದನ್ನು ಅರಿತೂ ಕೂಡಾ ಮಾತು, ಕೃತಿಗಳ ಮೂಲಕ ಆ ರೀತಿ ಮಾಡುವುದು ಮಹಾ ಪಾಪವಾಗಿದೆ. ಅಲ್ಲಾಹನು ಎಲ್ಲಾ ಪಾಪಗಳನ್ನು ಕ್ಷಮಿಸಬಹುದು. ಆದರೆ ಅವನಿಗೆ ಸಹಭಾಗಿಗಳನ್ನಾಗಿ ಮಾಡುವ ಈ ದುಷ್ಟ ಕೃತ್ಯವನ್ನು ಅವನು ಎಂದಿಗೂ ಕ್ಷಮಿಸಲಾರ. ಇದನ್ನು ಸ್ವತಃ ಅಲ್ಲಾಹನೇ ಸ್ಪಷ್ಟ ಪಡಿಸಿದಾನೆ.
“ಅಲ್ಲಾಹನು ತನ್ನೊಂದಿಗೆ ಇತರರನ್ನು ಸಹಭಾಗಿಗಳನ್ನಾಗಿ ಮಾಡುವುದನ್ನು ಮಾತ್ರ ಎಂದೆಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತು ಅವನು ಕ್ಷಮಿಸಲಿಚ್ಛಿಸುವ ಇತರ ಎಲ್ಲವನ್ನೂ ಕ್ಷಮಿಸುವನು. ಅಲ್ಲಾಹನೊಂದಿಗೆ ಇತರ ಯಾರನ್ನಾದರೂ ಸಹಭಾಗಿಯನ್ನಾಗಿ ಮಾಡಿದವನು ಅತಿದೊಡ್ಡ ಸುಳ್ಳನ್ನು ಸೃಷ್ಟಿಸಿದನು ಮತ್ತು ಅತ್ಯಂತ ಘೋರ ಪಾಪವೆಸಗಿದನು.” (ಅನ್ನಿಸಾ: 48)
ಶಿರ್ಕನ್ನು(ಬಹುದೇವಾರಾಧನೆ ) ಇಸ್ಲಾಮ್ ನಖಶಿಖಾಂತ ವಿರೋಧಿಸಿದೆ. ಶಿರ್ಕ್ ಆಹ್ವಾನವೀಯುವ ಎಲ್ಲಾ ಬಾಗಿಲುಗಳನ್ನೂ ಅದು ಮುಚ್ಚಿದೆ. ತೋರಿಕೆಗಾಗಿ ಮಾಡುವ ಕಮ್ರಗಳನ್ನು ಪ್ರವಾದಿಯವರು(ಸ) ಅತ್ಯಂತ ಸಣ್ಣ  ಶಿರ್ಕ್  ಎಂದಿದ್ದಾರೆ. ಒಳಿತುಗಳೆಲ್ಲವೂ ಅಲ್ಲಾಹನಿಗಾಗಿ ನಿರ್ವಹಿಸಬೇಕಾದದ್ದಾಗಿದೆ. ಅಲ್ಲಾಹನಿಗಾಗಿ ನಿರ್ವ ಹಿಸಬೇಕಾದ ಕರ್ಮಗಳನ್ನು ಇತರರು ಕಾಣಲಿ ಎಂಬ ಉದ್ದೇಶದಿಂದ ನಿರ್ವಹಿಸುವಾಗ ಅವು ತನ್ನ ಗುರಿಯನ್ನು ಕಳಕೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ಕಮ್ರಗಳನ್ನೆಸಗುವವರು ಅಲ್ಲಾಹನನ್ನು ಮರೆತು ನೋಡುಗರನ್ನು ಮಾತ್ರ ಪರಿಗಣಿಸುತ್ತಾರೆ. ಆಗ ಸ್ವಾಭಾವಿಕವಾಗಿ ಕರ್ಮಗಳೂ ಕೂಡಾ ಇತರರಿಗಾಗಿ ನಿವ್ರಹಿಸಿದಂತಾಗುತ್ತದೆ. ಆದ್ದರಿಂದ ಈ ತೋರಿಕೆಗಾಗಿ ಮಾಡುವ ಕರ್ಮಗಳು  ಶಿರ್ಕ್ ಗೆ ಕೊಂಡೊಯ್ಯುವುದರಿಂದ ಪ್ರವಾದಿಯವರು(ಸ) ಅದನ್ನು ವಿರೋಧಿಸಿದ್ದಾರೆ.
ಯಾವುದೇ ಸಂದ
ರ್ಭದಲ್ಲಿ ಏಕದೇವ ವಿಶ್ವಾಸವನ್ನು ಕೈಬಿಡಬಾರದೆಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ. ಇಂದು ಸಮಾಜದಲ್ಲಿ  ಶಿರ್ಕ್   ವ್ಯಾಪಕವಾಗುತ್ತಿದೆ. ಪುರೋಹಿತರೆಂದೆನಿಸಿಕೊಂಡವರು ತಮ್ಮ ಹೊಟ್ಟೆಪಾಡಿಗಾಗಿ ಅರಸಿಕೊಂಡಿರುವ ಕಸುಬು  ಶಿರ್ಕ್   ಆಗಿದೆ. “ನನ್ನೊಂದಿಗೆ ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರ ನೀಡುತ್ತೇನೆ” ಎಂದು ಅಲ್ಲಾಹನು ಕುರ್ಆನಿನಲ್ಲಿ ಸ್ಪಷ್ಟವಾಗಿ ಹೇಳಿರುವಾಗ ಇತರರೊಂದಿಗೆ ಪ್ರಾರ್ಥಿಸಲು ಪ್ರೇರೇಪಿಸುವವರು, ಅದಕ್ಕಾಗಿ ವ್ಯವಸ್ಥೆ ಕಲ್ಪಿಸಿ ಕೊಡುವವರು ತಮ್ಮ ಕರ್ಮಗಳಿಗೆ ಲಭಿಸುವ ಪ್ರತಿಫಲವೇನು ಎಂಬುದನ್ನಾದರೂ ಯೋಚಿಸಬಾರದೇ? ಅಲ್ಲಾಹನು ಯಾವುದಾದರೂ ತೀಮ್ರಾನ ಕೈಗೊಳ್ಳುವಾಗ ಓರ್ವ ವಿದ್ವಾಂಸರಲ್ಲಿ ಕೇಳಿದ ಬಳಿಕವೇ ತೀರ್ಮಾನಿಸುತ್ತಾನೆ ಎಂದು ಈ ಸಮಾಜದಲ್ಲಿ ಪ್ರಚಾರ ಪಡಿಸಿದವರಿದ್ದಾರೆ. (ಮಆದಲ್ಲಾಹ್) ಇವರು ಮಕ್ಕಾದ ಮುಶ್ರಿಕರಿಗಿಂತಲೂ ಅಧಃಪತನ ಹೊಂದಿದವರಿದ್ದಾರೆ. ಕಾರಣ ಮಕ್ಕಾದ ಮುಶ್ರಿಕರು ಮಳೆ ಬರಿಸುವುದು ಯಾರೆಂದು ಕೇಳಿದರೆ `ಅಲ್ಲಾಹು’ ಎಂದು ಉತ್ತರಿಸುತ್ತಿದ್ದರು. ಆದರೆ ಇಂದಿನ ವಿದ್ವಾಂಸರೂ, ಪುರೋಹಿತರೂ ಆ ಸ್ಥಾನವನ್ನು ಮನುಷ್ಯರಿಗೆ ನೀಡಿದ್ದಾರೆ. ಅಲ್ಲಾಹನು  ಶಿರ್ಕ್ ನ್ನು ಒಮ್ಮೆಯೂ ಕ್ಷಮಿಸುವುದಿಲ್ಲ ಎಂದು ಕುರಾನ್ ಪದೇ ಪದೇ ಎಚ್ಚರಿಸಿದ್ದನ್ನು ಈ ಮಂದಿ ಕಂಡಿಲ್ಲವೇ?
ಎರಡನೆಯದಾಗಿ ಪ್ರವಾದಿಯವರು(ಸ) ಆರಾಧನೆಗೆ ಸಂಬಂಧಿಸಿದ ಕೆಡುಕೆಂದು ಹೇಳಿರುವುದು ನಮಾಝನ್ನು ಉಪೇಕ್ಷಿಸುವುದಾಗಿದೆ. ಅಲ್ಲಾಹನಿಗಿರುವ ಆರಾಧನಾ ಕರ್ಮಗಳ ಪೈಕಿ ಅತ್ಯಂತ ಮಹತ್ವವಾದ ಆರಾಧನೆ ನಮಾಝ್ ಆಗಿದೆ. ನಾಳೆ ಪರಲೋಕದಲ್ಲಿ ನಮಾಝಿನ ಕುರಿತು ಪ್ರಶ್ನಿಸಲ್ಪಡದೆ ಯಾವುದೇ ವ್ಯಕ್ತಿ ಒಂದು ಹೆಜ್ಜೆಯೂ ಮುಂದಿಡಲಾರ. ಪ್ರವಾದಿಯವರು(ಸ), “ನಮಾಝಿಲ್ಲದೆ ಧರ್ಮವಿಲ್ಲ. ಶರೀರದಲ್ಲಿ ತಲೆಗಿರುವ ಸ್ಥಾನವು ಧಮ್ರದಲ್ಲಿ ನಮಾಝಿಗಿದೆ” ಎಂದು ಹೇಳಿದ್ದಾರೆ.
ನಮಾಝನ್ನು ಉಪೇಕ್ಷಿಸುವುದು  ಶಿರ್ಕ್    ಹಾಗೂ ಕುಫ್ರ್ (
  ದೇವ ನಿಷೇಧ )  ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಪ್ರವಾದಿಯವರ(ಸ) ಕಾಲದಲ್ಲಿ ನಮಾಝ್ ನಿವ್ರಹಿಸದವರನ್ನು ಕಾಫಿರ್ಗಳೆಂಬ ರೀತಿಯಲ್ಲಿ ಜನರು ನೋಡುತ್ತಿದ್ದರು. “ಯಾರಾದರೂ ಮನಃಪೂರ್ವಕವಾಗಿ ಒಂದು ನಮಾಝನ್ನು ಉಪೇಕ್ಷಿಸಿದರೆ ಅವನು ಸ್ಪಷ್ಟವಾದ ಕುಫ್ರ್  ಎಸಗಿದನು” ಎಂದು ಪ್ರವಾದಿಯವರು(ಸ) ಎಚ್ಚರಿಸಿದ್ದಾರೆ. 
ನಮಾಝನ್ನು ಎಲ್ಲಾ ಸಂದಭ್ರಗಳಲ್ಲೂ ನಿವ್ರಹಿಸಲು ಪ್ರವಾದಿಯವರು(ಸ) ಹೇಳಿದ್ದಾರೆ. ಆದರೆ ಅದು ಸನ್ನಿವೇಶಗಳಿಗೆ ಅನುಗುಣವಾಗಿ ವಿವಿಧ ರೂಪದಲ್ಲಿರಬಹುದು. ಆದರೂ ನಮಾಝ್ ನಿವ್ರಹಿಸುವುದನ್ನು ಕಡ್ಡಾಯಗೊಳಿಸಿದ್ದಾರೆ. ಮನಃಪೂರ್ವ ಕವಾಗಿ ನಮಾಝನ್ನು ಉಪೇಕ್ಷಿಸುವವನು ಅಲ್ಲಾಹನ ಹೊಣೆಗಾರಿಕೆಯಿಂದ ಹೊರದಬ್ಬಲ್ಪಡುತ್ತಾನೆ ಎಂದು ಪ್ರವಾದಿಯವರು(ಸ) ಬಹಳ ಗಂಭೀರವಾದ ಎಚ್ಚರಿಕೆಯನ್ನು ನೀಡಿದ್ದಾನೆ. ಇದರ ತಾತ್ಪಯ್ರವು ಅವನು ಧರ್ಮ ದಿಂದಲೂ ಮುಸ್ಲಿಮ್ ಸಮುದಾಯದಿಂದಲೂ ಹೊರ ಹೋಗುತ್ತಾನೆ ಎಂದಾಗಿದೆ. ಓರ್ವ  ಮುಸ್ಲಿಮನನ್ನು ಮತ್ತು ಕಾಫಿರನನ್ನು ಪ್ರತ್ಯೇಕಿಸುವುದು ಕೂಡಾ ನಮಾಝ್ ಆಗಿದೆ. ಇಂದು ನಮಾಝಿನ ಕುರಿತು ನಮ್ಮಲ್ಲಿ ಅನಾಸ್ಥೆ ಉಂಟಾಗಿದೆ. ಅಲ್ಲಾಹನಿಗಾಗಿ ನಮ್ಮ ಕೆಲವು ಕ್ಷಣಗಳನ್ನು
ಮೀಸಲಿಡಲು ಸಾಧ್ಯವಾಗುತ್ತಿಲ್ಲ. ಸಮಯದ ಅಭಾವದಿಂದಲೋ ಅಹಂಕಾರದ ಪರಾಕಾಷ್ಟೆಯಿಂದಲೋ ನಮಾಝನ್ನು ಮೂರು ವೇಳೆಗಳಿಗೆ ಸೀಮಿತಗೊಳಿಸಿದವರೂ ಇದ್ದಾರೆ. ಆದ್ದರಿಂದ ನಾವು ಅಲ್ಲಾಹನಿಗಿರುವ ಸಮಯದ ವಿಷಯದಲ್ಲಿ ಜಿಪುಣರಾಗಿ  ಶಿರ್ಕ್ , ಕುಫ್ರ್ ಗೆ  ಬೀಳುವಂತಾಗಬಾರದು.
ಮೂರನೆಯದಾಗಿ ಪ್ರವಾದಿಯವರು(ಸ) ಸ್ವಭಾವ ಪರವಾದ ಕೆಡುಕಾಗಿ ಮದ್ಯಪಾನವನ್ನು ಪ್ರಸ್ತಾಪಿಸಿದ್ದಾರೆ. ಮದ್ಯಪಾನವು ಎಲ್ಲಾ ಕೆಡುಕುಗಳ ಮಾತೆಯಾಗಿದೆ. ಲಜ್ಜೆಯ ಸ್ವಭಾವ ಹೊಂದಿದವರು ಕೂಡಾ ಮದ್ಯಪಾನಿಗಳಾದಾಗ ನಿರ್ಲಜ್ಜೆಯಿಂದ ವತ್ರಿಸುತ್ತಾರೆ. ಮದ್ಯಪಾನವು ಎಲ್ಲಾ ಕೆಡುಕುಗಳನ್ನು ಮಾಡಿಸುತ್ತದೆ. ಮದ್ಯಪಾನಿಗೆ ತಂದೆ-ತಾಯಿ, ಪತ್ನಿ, ಮಕ್ಕಳು ಯಾರೆಂದು ಗುರುತಿಸಲೂ ಸಾಧ್ಯವಾಗದೆ ಹಲವು ಪ್ರಮಾದಗಳನ್ನೆಸಗುತ್ತಾರೆ. ಇಂದು ಸಮಾಜದಲ್ಲಿ ಮದ್ಯಪಾನವು ವ್ಯಾಪಕವಾಗಿದೆ. ಹಿಂದೆಲ್ಲಾ ಕದ್ದು ಮುಚ್ಚಿ ಕುಡಿಯುತ್ತಿದ್ದರೂ ಇಂದು ಅದು ಶರಬತ್ತು ಕುಡಿದಂತೆ ಸಲೀಸಾಗಿ ಸಾ
ರ್ವಜನಿಕವಾಗಿ ಕುಡಿಯುತ್ತಾರೆ. ಯಾವುದೇ ಹಿತವಚನಗಳು ಮದ್ಯಪಾನಿಗಳ ಮೇಲೆ ಪ್ರಭಾವ ಬೀರುತ್ತಿಲ್ಲ. ಇಂತಹ ಸಾಮಾಜಿಕ ಕೆಡುಕುಗಳು ವ್ಯಾಪಕವಾಗುವಾಗ ಅಲ್ಲಾಹನ ಶಿಕ್ಷೆಯು ಬಂದೆರಗಿದರೆ ಯಾವುದೇ ಆಶ್ಚರ್ಯವಿಲ್ಲ. ಇಂತಹ ಹಲವಾರು ಉದಾಹರಣೆಗಳು ಗತಕಾಲಗಳಲ್ಲಿ ಘಟಿಸಿವೆ. ಆದ್ದರಿಂದ ನಾವು ಇಂತಹ ಕೆಡುಕಗಳಿಂದ ದೂರ ನಿಲ್ಲಬೇಕಾಗಿದೆ. ಮಾತ್ರವಲ್ಲ, ಇತರರನ್ನೂ ಅವುಗಳಿಂದ ತಡೆಯಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ಅನುಗ್ರಹಿಸಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ