ಗುರುವಾರ, ಫೆಬ್ರವರಿ 09, 2012

ಅವರು ಕೇಳುತ್ತಿರುವುದು ದುಡ್ಡಲ್ಲ..... ಆದರೂ


ಕುಟುಂಬ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳು ಸಂಭವಿಸುತ್ತಿರುವ ಈ ಕಾಲದಲ್ಲಿ ಅತೀ ಹೆಚ್ಚು ಸಂಕಷ್ಟಗಳನ್ನು ಅನುಭವಿಸುತ್ತಿರು ವವರು ವೃದ್ಧರಾಗಿದ್ದಾರೆ. ವೃದ್ದಾಪ್ಯ ಎಂಬುದು ಸ್ವಾಭಾವಿಕವಾದರೂ ಇಂದು ಹಲವರಿಗೆ ದೊಡ್ಡ ತಲೆಬೇನೆಯಾಗಿ ಪರಿಗಣಿಸಿದೆ. ಯೌವನದ ದಿನಗಳು ಕಳೆದ ಬಳಿಕ ಬರುವ ಈ ಶಾರೀರಿಕ ದೌಬ್ರಲ್ಯ ಹಾಗೂ ಪರಾಶ್ರಯಕ್ಕೆ ಹಲವರು ಎದೆಗುಂದುತ್ತಿದ್ದಾರೆ. ಹಳೆಯ ಶಕ್ತಿ ಸಾಮಾಥ್ಯ್ರವು ನಷ್ಟ ಹೊಂದಿ ಪ್ರಾಥಮಿಕ ಅವಶ್ಯಕತೆಗಳ ಪೂರೈಕೆಗಾಗಿ ಇತರರನ್ನು ಆಶ್ರಯಿಸುವ ಪರಿಸ್ಥಿತಿ ನಿಮ್ರಾಣವಾಗುತ್ತದೆ. ದೃಷ್ಟಿದೋಶ, ಶ್ರವಣದೋಶ ದೊಂದಿಗೆ ವೃದ್ಧಾಪ್ಯ ಸಹಜವಾದ ಹಲವಾರು ರೋಗಗಳು ಬರುವಾಗ ದೈನಂದಿನ ಜೀವನವು ಕಷ್ಟಕರವಾಗುತ್ತದೆ. ಇಂತಹ ಪರಿಸ್ಥಿತಿ ನಿಮ್ರಾಣ ವಾದಾಗ ಆ ಹಿರಿಯರು ಯಾರದಾದರೂ ಆಶ್ರಯವನ್ನು ಬಯಸುತ್ತಾರೆ. ಯಾರದಾದರೂ ಸಾಂತ್ವನಗಳಿಗೆ ಅವರು ಕಿವಿ ನಿಮಿರಿಸಿರುತ್ತಾರೆ. ಯಾರೊಂದಿಗಾದರೂ ಮಾತನಾಡಬೇಕೆಂದು ಹಂಬಲಿಸುತ್ತಿರುತ್ತಾರೆ. ಆದರೆ ನಮ್ಮ ಈ ಹೊಸ ತಲೆಮಾರಿನ ಮಂದಿಗೆ ತಮ್ಮ ನಿಬಿಢತೆಯಿಂದಾಗಿ ಆ ಹಿರಿಯರ ಕಡೆಗೆ ಗಮನ ಹರಿಸಲು ಸಾಧ್ಯ ವಾಗುತ್ತಿಲ್ಲ. ಇನ್ನು ನಿಬಿಢತೆಯಿಲ್ಲದಿದ್ದರೂ ಅವರ ಕಡೆಗೆ ಗಮನ ಹರಿಸುತ್ತಿಲ್ಲ. ಶಾರೀರಿಕ ದೌಬ್ರಲ್ಯದ ಜೊತೆಗೆ, ನಾವು ಅವರನ್ನು ನಿಲ್ರಕ್ಷಿಸುತ್ತೇವೆ ಎಂಬ ಚಿಂತೆಯು ಕಾಡತೊಡಗಿದಾಗ ಅವರು ಮಾನಸಿಕವಾಗಿ ಆಯಾಸ ಪಡುತ್ತಾರೆ. ಕುಟುಂಬ ದಲ್ಲಿರುವ ವೃದ್ಧರಿಗೆ ಆಹಾರ, ವಸ್ತ್ರಗಳನ್ನು ನೀಡಿ ದರೆ ತಮ್ಮ ಬಾಧ್ಯತೆ ಮುಗಿಯಿತು ಎಂದು ಭಾವಿಸುವ ಹಲವರಿದ್ದಾರೆ. ಆದರೆ ಇದಕ್ಕಿಂತ ಮಿಗಿಲಾಗಿ ಪ್ರೀತಿ, ಕಾಳಜಿ, ವಾತ್ಸಲ್ಯ ಮುಖ್ಯವಾಗಿದೆ.
ಇಂದು ಹೆಚ್ಚುತ್ತಿರುವ ವೃದ್ಧಾಶ್ರಮಗಳು ವೃದ್ಧ ಜನರೊಂದಿಗಿನ ನಿಲ್ರಕ್ಷ್ಯಕ್ಕೆ ಪುರಾವೆಗಳಾಗಿವೆ. ಕೆಲವಾರು ವಷ್ರಗಳ ಹಿಂದೆ ವೃದ್ಧಾಶ್ರಮಗಳ ಕುರಿತು ಕೇಳಲು ಮತ್ತು ಓದಲು ಸಾಧ್ಯವಾಗಿತ್ತು. ಆದರೆ ಇಂದು ಅವುಗಳು ವ್ಯಾಪಕವಾಗಿ ನಮ್ಮ ಕಣ್ಮುಂದೆಯೇ ಇವೆ. ಮಕ್ಕಳೊಂದಿಗೆ ಕಾಲ ಕಳೆಯ ಬೇಕಾಗಿದ್ದ ವೃದ್ಧರು ಇಂದು ಇಂತಹ ವೃದ್ಧಾಶ್ರಮಗಳಲ್ಲಿ ತಮ್ಮ ಜೀವನದ ಸಂಜೆಯನ್ನು ಕಳೆಯುತ್ತಿದ್ದಾರೆ. ಅವರು ಈ ಶಿಕ್ಷೆ ಅನುಭವಿಸಲು ಕಾರಣ ತಮ್ಮ ಮಕ್ಕಳನ್ನು ಹೊತ್ತು ಹೆತ್ತು ಸಾಕಿ ಸಲಹಿ ದೊಡ್ಡವರನ್ನಾಗಿಸಿದುದಾಗಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ವಿದ್ಯಾವಂತರನ್ನಾಗಿಸಿ ದಾಗ ಆ ಮಕ್ಕಳಿಗೆ ವೃದ್ಧ ತಂದೆ-ತಾಯಿಗಳು ಬೇಡದ ವಸ್ತುವಾಗುತ್ತಾರೆ. ವೃದ್ಧ ತಂದೆ-ತಾಯಿಗಳು ಆ ಮಕ್ಕಳಿಗೆ ಇತರರ ಮುಂದೆ ತಮ್ಮ ಪ್ರತಿಷ್ಠೆಗೆ ಕುಂದು ತರುವ ವಸ್ತುಗಳಾಗಿ ಮಾಪ್ರಡುತ್ತಾರೆ. ಮಕ್ಕಳು ಚಿಕ್ಕವರಿರುವಾಗ ತಂದೆ-ತಾಯಿಗಳು ತಮ್ಮ ಜೀವನವನ್ನೇ ಅವರಿಗೆ ಮುಡಿಪಾಗಿಟ್ಟಿರುತ್ತಾರೆ. ಅವರನ್ನು ಬೆಳೆಸಲು ಏನೆಲ್ಲಾ ಸಂಕಷ್ಟ ಅನುಭವಿಸುತ್ತಾರೆ. ಮಕ್ಕಳು ಸಂತೋಷ ಗೊಂಡಾಗ ತಾವೂ ಸಂತೋಷ ಪಡುತ್ತಾರೆ. ಮಕ್ಕಳ ದುಃಖದಲ್ಲಿ ಅವರೂ ಪಾಲ್ಗೊಳ್ಳುತ್ತಾರೆ. ಹೀಗೆ ಮಕ್ಕಳಿಗೆ ಯಾವ ಕುಂದು ಕೊರತೆಯಾಗ ದಂತೆ ಅವರನ್ನು ಬೆಳೆಸುತ್ತಾರೆ. ಕೊನೆಗೆ ಮಕ್ಕಳಿಗೆ ಕೈಕಾಲು ಗಟ್ಟಿಯಾದಾಗ, ಅವರಿಗೆ ಉದ್ಯೋಗ ದೊರೆತಾಗ “ಅಟ್ಟಕ್ಕೆ ಹತ್ತಿದ ಮೇಲೆ ಏಣಿಯನ್ನು ತುಳಿದಂತೆ” ಹೆತ್ತವರು ಭಾರವಾಗುತ್ತಾರೆ. ತಂದೆ-ತಾಯಿಗಳು ತೋರಿಸಿದ ಪ್ರೀತಿಗೆ ಕೊನೆಗೆ ಅವರು ಕಟ್ಟುವ ಬೆಲೆಯು ವೃದ್ಧಾಶ್ರಮವಾಗಿದೆ.
ಕುಟುಂಬದ ಅಸ್ತಿತ್ವವು ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರಗಳ ಮೇಲೆ ಅವಲಂಬಿತವಾಗಿದೆ. ಮನುಷ್ಯನಿಗೆ ಇತರ ಪ್ರಾಣಿಗಳಂತೆ ಜೀವಿಸಲು ಸಾಧ್ಯವಿಲ್ಲ. ಇತರ ಪ್ರಾಣಿಗಳು ತಮ್ಮ ತಾಯಿಯ ಆಶ್ರಯವನ್ನು ಕೆಲವಾರು ತಿಂಗಳುಗಳ ಮಟ್ಟಿಗೆ ಪಡೆದಿರುತ್ತವೆ. ಬಳಿಕ ಅವು ಸ್ವತಂತ್ರವಾಗಿ ಜೀವಿಸ ತೊಡಗುತ್ತವೆ. ಆಗ ಅವುಗಳು ತಾಯಿ ಯನ್ನು ಮರೆಯುತ್ತವೆ. ಆದರೆ ಮನುಷ್ಯನು ಹಾಗಲ್ಲ. ಅವನು ಏನಿಲ್ಲದಿದ್ದರೂ ಹತ್ತೋ ಹದಿನೈದೋ ವಷ್ರ ಹೆತ್ತವರನ್ನು ಆಶ್ರಯಿಸುತ್ತಾನೆ. ಅವನು ಸ್ವತಂತ್ರವಾದಾಗ, ತನ್ನ ಕಾಲ ಮೇಲೆ ನಿಲ್ಲಲು ಸಾಧ್ಯವಾಗುವಾಗ ಅವನು ಆ ವರೆಗೆ ಹೆತ್ತವರಿಂದ ಪಡೆದ ಪ್ರೀತಿ, ಕಾಳಜಿಗೆ ಪ್ರತ್ಯುಪಕಾರ, ಕೃತಜ್ಞತೆ ಸಲ್ಲಿಸಬೇಕು. ಅದು ಬಿಟ್ಟು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಕೃತಘ್ನತೆಯ ಪರಮಾ ವಧಿಯಲ್ಲವೇ?
ವೃದ್ಧಾಪ್ಯ ಎಂಬುದು ಎರಡನೇ ಶೈಶವಾ ವಸ್ಥೆಯಾಗಿದೆ. ಆಗ ಹಳೆಯ ಸ್ವಭಾವಗಳೂ ವತ್ರನೆಗಳೂ ಬದಲಾಗಬಹುದು. ಅದು ಅವರ ವಯಸ್ಸಿನ ಸಹಜ ಸ್ವಭಾವ ಎಂದು ತಿಳಿದು ಅವರನ್ನು ಉಪಚರಿಸಬೇಕು. ಚಿಕ್ಕ ಮಕ್ಕಳ ವತ್ರನೆಯು ನಮಗೆ ಆನಂದವನ್ನು ನೀಡುತ್ತದೆ. ಅವರ ವತ್ರನೆಯನ್ನೂ ಅದೇ ರೀತಿಯಾಗಿ ಭಾವಿಸಬೇಕು. ತನ್ನ ಬಾಲ್ಯಾವಸ್ಥೆಯಲ್ಲಿ ತನ್ನನ್ನು ಅವರು ಪ್ರೀತಿಯಿಂದ ಹೇಗೆ ಆರೈಕೆ ಮಾಡಿದ್ದಾರೋ ಅದೇ ರೀತಿ ಅವರನ್ನೂ ಆರೈಕೆ ಮಾಡಬೇಕು. ಹೆತ್ತವರೊಂದಿಗೆ ‘ಛೇ’ ಎಂದು ಕೂಡಾ ಹೇಳಬಾರ ದೆಂದು ಅಲ್ಲಾಹನು ಆಜ್ಞಾಪಿಸಿರುವಾಗ ಅವ ರೊಂದಿಗೆ ನಮ್ಮ ವತ್ರನೆ ಹೇಗಿದೆ ಎಂದು ನಾವು ಸ್ವತಃ ಆತ್ಮಾವಲೋಕನ ನಡೆಸಬೇಕಾಗಿದೆ.
ಅಲ್ಲಾಹನೊಂದಿಗಿನ ಬಾಧ್ಯತೆಯ ಬಳಿಕದ ಬಾಧ್ಯತೆಯಾಗಿ ಕುರ್ಆನ್ ಪ್ರಸ್ತಾಪಿಸುವುದು ಹೆತ್ತವ ರೊಂದಿಗಿನ ಬಾಧ್ಯತೆಯ ಕುರಿತಾಗಿದೆ. ಅಲ್ಲಾಹನು ಹೇಳುತ್ತಾನೆ. “ನಿಮ್ಮ ಪ್ರಭು (ಹೀಗೆ) ವಿಧಿಸಿ ಬಿಟ್ಟಿದ್ದಾನೆ. ನೀವು ಕೇವಲ ಅವನೊಬ್ಬನ ಹೊರತು ಇನ್ನಾರ ದಾಸ್ಯ-ಆರಾಧನೆಯನ್ನೂ ಮಾಡಬಾರದು. ಮಾತಾಪಿತರೊಡನೆ ಸೌಜನ್ಯದಿಂದ ವತ್ರಿಸಿರಿ. ಅವರ ಪೈಕಿ ಒಬ್ಬರು ಅಥವಾ ಅವರಿ ಬ್ಬರೂ ವೃದ್ಧರಾಗಿ ನಿಮ್ಮ ಬಳಿಯಲ್ಲಿದ್ದರೆ ಅವರ ಬಗ್ಗೆ ಚಕಾರವೆತ್ತಬೇಡಿರಿ ಮತ್ತು ಅವರನ್ನು
ಜರೆಯ ಬೇಡಿರಿ. ಅವರೊಂದಿಗೆ ವಿನಯ ಪೂರ್ವಕವಾಗಿ ಮಾತನಾಡಿರಿ. ನಯವಿನಯ ಮತ್ತು ಕರುಣೆ ಯೊಂದಿಗೆ ಅವರ ಮುಂದೆ ಬಾಗಿಕೊಂಡಿರಿ. “ಓ ನನ್ನ ಪ್ರಭೂ! ಇವರು ಚಿಕ್ಕಂದಿನಲ್ಲಿ ದಯಾ ವಾತ್ಸಲ್ಯಗಳಿಂದ ನನ್ನನ್ನು ಸಾಕಿದಂತೆಯೇ ನೀನು ಅವರ ಮೇಲೆ ಕೃಪೆ ತೋರು” ಎಂದು ಪ್ರಾಥ್ರಿಸಿರಿ.” (ಬನೀ ಇಸ್ರಾಈಲ್: 23-24)
ವೃದ್ಧಾಪ್ಯದಲ್ಲಿ ಹೆತ್ತವರ ಅವಶ್ಯಕತೆಗಳ ಅರಿತು ಅವುಗಳನ್ನು ಪೂರೈಸಲು ಮಕ್ಕಳಿಗೆ ಸಾಧ್ಯವಾಗಬೇಕು. ಕುಟುಂಬದ ಸಮಸ್ತ ಸಂಗತಿ ಗಳನ್ನು ನಿಯಂತ್ರಿಸುತ್ತಿದ್ದ ತಂದೆಯು ವೃದ್ಧರಾಗಿ ಮನೆಯೊಳಗೆ ಸೇರಿಕೊಂಡಾಗ ತನ್ನ ವೈಯಕ್ತಿಕ ಅವಶ್ಯಕತೆಗಳನ್ನು ಪೂರೈಸಲು ಕೂಡಾ ಕೈಯಲ್ಲಿ ಹಣವಿಲ್ಲದ ಸ್ಥಿತಿ ಉಂಟಾಗಬಾರದು. ಯಾವುದೇ ತೀಮ್ರಾನ ಕೈಕೊಳ್ಳುವಾಗ ಹೆತ್ತವರಲ್ಲಿ ಕೇಳಿ ತೀಮ್ರಾನಿಸಬೇಕು. ಕಾರಣ ಅವರು ಹೆಚ್ಚು ಅನುಭವಸ್ಥರಾಗಿರುತ್ತಾರೆ. ಅಲೀ(ರ) ಹೇಳಿದರು. “ವೃದ್ಧರ ಅಭಿಪ್ರಾಯವು ಒಂದು ಮಗು ಕಣ್ಣಾರೆ ಕಂಡು ಹೇಳುವ ವಿಷಯಕ್ಕಿಂತ ಉತ್ತಮ ವಾಗಿರುತ್ತದೆ.”
ಗಂಡು ಮಕ್ಕಳು ವಿವಾಹವಾದರೆ ಅವರು ತವ್ಮೊಂದಿಗೆ ತೋರುವ ಪ್ರೀತಿಯು ಕಡಿಮೆಯಾಗಬಹುದೆಂದು ಹೆದರಿ ಮದುವೆ ಮಾಡಿಸಲು ಹಿಂದೇಟು ಹಾಕುವವರಿದ್ದಾರೆ. ಇದು ಕುಟುಂಬ ದಲ್ಲಿ ಸಮಸ್ಯೆಯನ್ನು ಸೃಷ್ಟಿಸಬಹುದು. ಹೆತ್ತವರ ಮನಸ್ಸಿಗೆ ನೋವುಂಟು ಮಾಡದೆಯೂ ಸಂಗಾತಿಯ ಹಕ್ಕುಗಳನ್ನು ಉಲ್ಲಂಘಿಸದೆಯೂ ಪರಿಸ್ಥಿತಿಯನ್ನು ನಿಭಾಯಿಸುವುದು ಗಂಡಾದವನ ಸಾಮಥ್ಯ್ರಕ್ಕೆ ಸೇರಿದ್ದಾಗಿದೆ. ಇದು ಅತ್ಯಂತ ಕಷ್ಟಕರವೂ ಹೌದು. ಹೆತ್ತವರ ತೃಪ್ತಿಯು ಅಲ್ಲಾಹನ ತೃಪ್ತಿ ಮತ್ತು ಅವರ ಕೋಪವು ಅಲ್ಲಾಹನ ಕೋಪವೆಂದೂ ತಿಳಿದುಕೊಳ್ಳಬೇಕು. ಅವರ ಸೇವೆಯು ಸ್ವರ್ಗಕ್ಕಿರುವ ಹಾದಿಯಾಗಿದೆ. ವೃದ್ಧರಾದ ಹೆತ್ತವರಿದ್ದೂ ಅವರ ಸೇವೆ ಮಾಡಿ ಸ್ವಗ್ರ ಗಳಿಸಲು ಸಾಧ್ಯವಾಗದಿದ್ದವನು ಪರಾಜಿತನೆಂದು ಪ್ರವಾದಿಯವರು(ಸ) ಹೇಳಿದ್ದಾರೆ.
ಹೆತ್ತವರಲ್ಲದ ವೃದ್ಧರು ಮನೆಯಲ್ಲೋ ಇತರ ಕಡೆಗಳಲ್ಲೋ ಇರಬಹುದು. ಅವರನ್ನು ಅತ್ಯಂತ ನಾಜೂಕಾಗಿ ಆರೈಕೆ ಮಾಡಬೇಕು. ಕುಟುಂಬ ಸಂಬಂಧಿ ಎಂಬ ನೆಲೆಗಿಂತ ಹೊರತಾಗಿ ವಯಸ್ಸಾದವರು ಎಂಬ ಪ್ರತ್ಯೇಕ ಪರಿಗಣನೆಯನ್ನು ಅವರಿಗೆ ನೀಡಬೇಕು. ಕಿರಿಯವರೊಂದಿಗೆ ಕರುಣೆ ತೋರುವುದು ಮತ್ತು ಹಿರಿಯವರನ್ನು ಗೌರವಿಸು ವುದು ಇಸ್ಲಾಮ್ ಕಲಿಸಿರುವ ವಿಚಾರವಲ್ಲವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ