ಶುಕ್ರವಾರ, ಫೆಬ್ರವರಿ 10, 2012

ಪ್ರತಿಫಲವು ಕೈಗೆಟಕುತ್ತಿದ್ದರೂ ನಾವೇಕೆ ಪ್ರಯತ್ನಿಸುತ್ತಿಲ್ಲ ..


ಇಂದು ಕೌಟುಂಬಿಕ ಸಂಬಂಧವು ಛಿದ್ರಗೊಂಡಿದೆ. ಕುಟುಂಬ ಎಂಬ ಕಲ್ಪನೆಯು ಪತಿ, ಪತ್ನಿ ಮತ್ತು ಮಕ್ಕಳು ಎಂಬ ಮೂರು ವಿಭಾಗ ಗಳಲ್ಲಿ ಸೀಮಿತಗೊಂಡಿದೆ. ಹಿಂದೆಲ್ಲಾ ಹೆಚ್ಚಾಗಿ ಅವಿಭಕ್ತ ಕುಟುಂಬಗಳಿರುತ್ತಿದ್ದವು. ಕುಟುಂಬದ ಎಲ್ಲರೂ ಸೇರಿ ಒಂದೇ ಸೂರಿನಡಿಯಲ್ಲಿ ಸಹಬಾಳ್ವೆ ನಡೆಸುತ್ತಿದ್ದರು. ಸಮಸ್ಯೆಗಳು ತಲೆದೋರಿದಾಗ ಎಲ್ಲರೂ ಒಟ್ಟಾಗಿ ಪರಿಹರಿಸುತ್ತಿದ್ದರು. ಕುಟುಂಬ ದಲ್ಲಿರುವ ಹಿರಿಯರನ್ನು ಕಿರಿಯರು ಗೌರವಿಸುತ್ತಿ ದ್ದರು. ವೃದ್ಧರು ಎಲ್ಲರಿಂದಲೂ ಅನುಕಂಪ, ಪ್ರೀತಿ, ಆರೈಕೆ ಪಡೆಯುತ್ತಿದ್ದರು. ಇಲ್ಲದವರ ಕಷ್ಟ ಗಳಿಗೆ ಇರುವವರು ನೆರವಾಗುತ್ತಿದ್ದರು.
ಆದರೆ ಇಂದು ಆ ಸ್ಥಿತಿಯು ಬದಲಾಗಿದೆ. ಅವಿಭಕ್ತ ಕುಟುಂಬಗಳು ಒಂಟಿ ಕುಟುಂಬಗಳಾಗಿ ಜೀವಿಸಲಾರಂಭಿಸಿವೆ. ‘ನಾನು, ನನ್ನ ಪತ್ನಿ ಮತ್ತು ಮುದ್ದು ಮಕ್ಕಳು’ ಎಂಬ ಸ್ವಾಥ್ರ ಮನೋಭಾವ ಮೂಡತೊಡಗಿದೆ. ತನ್ನ ಹತ್ತಿರದ ಸಂಬಂಧಿಕರು ಗತ್ಯಂತರವಿಲ್ಲದೆ ಸ್ವಾಭಿಮಾನ ತೊರೆದು ಸಹಾಯ ಯಾಚಿಸಿದಾಗ ಸುಳ್ಳು ನೆವನಗಳನ್ನು ಹೇಳಿ ಬರಿಗೈಯಲ್ಲಿ ಕಳುಹಿಸುವ ಎಷ್ಟೋ ಮಂದಿ ನಮ್ಮ ಮಧ್ಯೆ ಇದ್ದಾರೆ. ಸ್ವಂತ ಅಣ್ಣ ಅಥವಾ ತಮ್ಮ ಬಡತನದ ಬೇಗೆಯಲ್ಲಿ ಬೇಯುತ್ತಿರುವಾಗ ಕಂಡೂ ಕಾಣದಂತೆ ಮಹಲುಗಳಲ್ಲಿ ಐಶಾರಾವಿೂ ಜೀವನ ನಡೆಸುವವರಿಗೆ ಇಲ್ಲಿ ಕೊರತೆಯಿಲ್ಲ. ಹಿಂದಿನ ಕಾಲದಲ್ಲಿದ್ದ ಪರಸ್ಪರ ಕೌಟುಂಬಿಕ ಸ್ನೇಹವು ಮಾಯವಾಗಿದೆ. ಇಂದು ಮನುಷ್ಯರು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಕಾರಣ ಕುಟುಂಬ ಸಂಬಂಧಗಳ ಛಿದ್ರತೆಯಾಗಿದೆ ಎಂದು ಕುರ್ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ಅಧ್ಯಯನ ನಡೆಸಿದರೆ ನಮಗೆ ಮನದಟ್ಟಾಗಬಹುದು.
ಅಲ್ಲಾಹನ ಆಜೆÕಗಳನ್ನು ಭೂಮಿಯಲ್ಲಿ ಕಾಯ್ರಗತಗೊಳಿಸಲಿಕ್ಕಾಗಿ ಆಗಮಿಸಿದ ಪ್ರವಾದಿಗಳ ಕಾಯ್ರ ಕ್ಷೇತ್ರದ ಕಡೆಗೆ ಕಣ್ಣೋಡಿಸುವುದಾದರೆ ಅವರು ಕೌಟುಂಬಿಕ ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಗೋಚರವಾಗುತ್ತದೆ. ಕೇವಲ ಕೌಟುಂಬಿಕ ಸಂಬಂಧ ಮಾತ್ರವಲ್ಲ, ವಿಶ್ವಾಸಿಗಳ ಮಧ್ಯೆ ಇರುವ ಸಂಬಂಧವನ್ನು ಕೂಡಾ ಕಡಿಯುವುದು ಇಸ್ಲಾಮಿಗೆ ನಿಲುಕದ ವಿಚಾರವಾಗಿದೆ. ಪ್ರವಾದಿಯವರು(ಸ) ಹೇಳಿದರು, “ಕುಟುಂಬ ಸಂಬಂಧವನ್ನು ಕಡಿಯುವವನು ಸ್ವಗ್ರವನ್ನು ಪ್ರವೇಶಿಸಲಿಕ್ಕಿಲ್ಲ.”
ಇಂದು ಕುಟುಂಬ ಎಂದು ಹೇಳುವಾಗ ಪತಿ, ಪತ್ನಿ ಮತ್ತು ಮಕ್ಕಳು ಎಂಬ ಸೀಮಿತ ವಲಯವು ನಮ್ಮ ಮನಸ್ಸಿಗೂ ಬರುತ್ತದೆ. ಇತರ ಸಂಬಂಧಗಳು ಕುಟುಂಬ ಎಂಬ ವ್ಯವಸ್ಥೆಗೆ ಅನ್ಯವಾಗಿದೆ. ತಾನು ಸಂಪಾದಿಸಿದ ಸಂಪತ್ತನ್ನು ಪತ್ನಿ ಮತ್ತು ಮಕ್ಕಳಿಗಲ್ಲದೆ ಇತರರಿಗೆ ಖಚ್ರು ಮಾಡಲು ಪ್ರತ್ಯಕ್ಷವಾಗಿಯಲ್ಲದಿದ್ದರೂ ಪರೋಕ್ಷವಾಗಿ ನಾವು ಹಿಂದೇಟು ಹಾಕು ತ್ತಿದ್ದೇವೆ. ಕುರ್ಆನ್ ಕುಟುಂಬ ಸಂಬಂಧೀ ವಿಷಯ ಗಳನ್ನು ಪ್ರಸ್ತಾಪಿಸುವಾಗ ಹೆಚ್ಚಿನ ಕಡೆಗಳಲ್ಲಿ ಅವರೊಂದಿಗಿರುವ ಹಕ್ಕುಗಳ ಕುರಿತು ನೆನಪಿಸಿದೆ. ಸೂರಃ ಬನೀ ಇಸ್ರಾಯೀಲ್ನ 26ನೇ ಸೂಕ್ತದಲ್ಲಿ ಅಲ್ಲಾಹನು ಹೇಳುತ್ತಾನೆ, “ಸಂಬಂಧಿಕನಿಗೆ ಅವನ ಹಕ್ಕುಗಳನ್ನು ನೀಡಿರಿ.” ಇಲ್ಲಿ ಸಂಬಂಧಿಕರು ಎಂಬ ವ್ಯಾಪ್ತಿಗೆ ಯಾರೆಲ್ಲಾ ಸೇರುತ್ತಾರೆ?
ಪತಿ, ಪತ್ನಿ ಮತ್ತು ಮಕ್ಕಳು ಈ ವ್ಯಾಪ್ತಿಗೆ ಸೇರು ತ್ತಾರೆ ಎಂಬ ವಿಷಯದಲ್ಲಿ ಯಾವುದೇ ಸಂಶಯವಿಲ್ಲ. ನಾವು ಯಾರೊಂದಿಗೆ ಸಂಬಂಧ ಸ್ಥಾಪಿಸಲು ಬಯಸುತ್ತೇವೆಯೋ ಮತ್ತು ಯಾರೊಂದಿಗೆ ಸಂಬಂಧ ಸ್ಥಾಪಿಸಬೇಕೋ ಅವರು ಸಂಬಂಧಿಕರ ಪಟ್ಟಿಗೆ ಸೇರುತ್ತಾರೆ. ಈ ಸಂಬಂಧಿಕರು ಕಷ್ಟ ಅನುಭವಿಸುವಾಗ ಅವರಿಗೆ ನೆರವಾಗುವುದು ಅವರ ಹಕ್ಕಾಗಿದೆ. ಇವರು ಬಡತನದಲ್ಲಿರುವಾಗ ಇವರಿಗೆ ದಾನ ಮಾಡದೆ ಇತರರಿಗೆ ನೆರವಾಗುವುದನ್ನು ಪ್ರವಾದಿಯವರು(ಸ) ಇಷ್ಟಪಟ್ಟಿರಲಿಲ್ಲ. ಕಾರಣ ಈ ರೀತಿಯ ದಾನವು ಸಂಬಂಧಿಕರ ಮಧ್ಯೆ ಇರುವ ಅಂತರವನ್ನು ಹೆಚ್ಚಿಸಬಹುದು. ಪ್ರವಾದಿಯವರು(ಸ) ಹೇಳಿದರು, “ನನ್ನನ್ನು ಸತ್ಯ ಸಂದೇಶದೊಂದಿಗೆ ಕಳು ಹಿಸಿದವನಾಣೆ! ಸಂಬಂಧಿಕರಿಗೆ ನೆರವಿನ ಅಗತ್ಯತೆ ಇದ್ದರೂ ಇತರರಿಗೆ ದಾನ ಮಾಡುವವನ ದಾನ ವನ್ನು ಅಲ್ಲಾಹನು ಸ್ವೀಕರಿಸನು.”
ಪ್ರವಾದಿಯವರು(ಸ) ಈ ರೀತಿ ಹೇಳಲು ಕಾರಣವೂ ಇದೆ. ಸಂಬಂಧಿಕನಿಗೆ ದಾನ ಮಾಡುವು ದರಿಂದ ಅವನನ್ನು ಯಾರು ಕೂಡಾ ದಾನಿ ಎಂದು ಹೇಳುವುದಿಲ್ಲ. ಅದು ಎಷ್ಟೇ ಜನರ ಮುಂದೆ ದಾನ ಮಾಡಿದರೂ ಸರಿ. ಆ ದಾನವು ಜನರಿಗೆ ತಿಳಿಯುವುದಿಲ್ಲ. ಮಾತ್ರವಲ್ಲ, ಸಂಬಂಧಿಕರ ಸಮಸ್ಯೆಗಳೂ ಪರಿಹಾರವಾಗುತ್ತವೆ. ಅವರ ಅವಶ್ಯ ಕತೆಗಳು ಪÇರೈಸಲ್ಪಡುತ್ತವೆ. ಅಲ್ಲಾಹನ ತೃಪ್ತಿ ಬಯಸಿ ದಾನ ಮಾಡಿದರೆ ಅದಕ್ಕೆ ತಕ್ಕ ಪ್ರತಿ ಫಲವೂ ದೊರೆಯುತ್ತದೆ.
ಆದರೆ ಇಂದು ಕೆಲವರು ಕುಟುಂಬದವರಲ್ಲಿ ದಾರಿದ್ರ್ಯತೆ ಇದ್ದರೂ ತನ್ನ ಸಂಪತ್ತನ್ನು ಅವರಿಗೆ ನೀಡದೆ ನಾಲ್ಕು ಜನರ ಮಧ್ಯೆ ವಿತರಿಸುತ್ತಾರೆ. ಇದು ಅಲ್ಲಾಹನ ತೃಪ್ತಿಯನ್ನು ಬಯಸಿಯಲ್ಲ. ಬದಲಾಗಿ ಜನರು ತನ್ನನ್ನು ಮಹಾದಾನಿ ಎಂದು ಕರೆಯುವ ಸಲುವಾಗಿ ಮಾಡುವ ದಾನವಾಗಿದೆ. ತನ್ನ ಸತ್ಕಮ್ರಗಳನ್ನು ಅಲ್ಲಾಹನಿಗಾಗಿ ನಿವ್ರಹಿಸುವ ಸಂಕಲ್ಪ ಇದ್ದರೂ ಜನರು ಕೂಡಾ ಕಾಣಬೇಕು
ಎಂಬ ಇಚ್ಚೆ ಮನದಲ್ಲಿ ಮೂಡಿದರೆ ಆ ಸತ್ಕಮ್ರ ಗಳಿಂದ ಅವನಿಗೆ ಯಾವುದೇ ಪ್ರಯೋಜನವಿಲ್ಲ. ಶಿಕ್್ರ ಎಂಬ ಮಹಾ ಪಾಪವು ಅಕ್ಷಮ್ಯವಾಗಿದೆ ಯಷ್ಟೇ. ತೋರಿಕೆಗಾಗಿ ಮಾಡುವ ಸತ್ಕಮ್ರಗಳು ಸಣ್ಣ ಶಿಕ್್ರ ಆಗಿವೆ. ಆದ್ದರಿಂದಲೇ ಪ್ರವಾದಿ ಯವರು(ಸ) ಆಣೆ ಹಾಕುತ್ತಾ ಸಂಬಂಧಿಕರಿಗೆ ವೊದಲ ಆಧ್ಯತೆ ನೀಡಬೇಕೆಂದು ಹೇಳಿರುವುದು.
ಇಂದು ಶ್ರೀಮಂತರು ತಮ್ಮ ಕುಟುಂಬದಲ್ಲಿರುವ ದರಿದ್ರರಿಗೆ ಸರಿಯಾದ ರೀತಿಯಲ್ಲಿ ದಾನ ಮಾಡುತ್ತಿದ್ದರೆ ಬಡತನದ ಸಮಸ್ಯೆಯನ್ನು ಬಹುಪಾಲು ನೀಗಿಸಬಹುದಾಗಿತ್ತು. ಕುಟುಂಬ ಎಂಬ ವಿಶಾಲವಾದ ಮಾನವ ಸರಪಳಿ ಯಲ್ಲಿ ಒಂದಿಬ್ಬರಾದರೂ ಶ್ರೀಮಂತರು ಇರುತ್ತಾರಷ್ಟೇ. ಅವರು ತಮ್ಮ ಸಂಪತ್ತನ್ನು ಕುಟುಂಬದೊಳಗೆ ದಾನ ಮಾಡಿದರೆ ಆ ಕುಟುಂಬದ ಬಡತ ನವು ನೀಗಲಾರದೇ? ಇಂತಹ ಅದೆಷ್ಟೋ ಕುಟುಂಬಗಳು ಇಂದಿಲ್ಲವೇ? ಇಂದಿನ ಬಡತನಕ್ಕೆ ಕೌಟುಂಬಿಕ ಛಿದ್ರತೆಯೂ ಒಂದು ಕಾರಣವಾಗಿದೆ.
ಸಂಪತ್ತಿರುವವನು, ತನ್ನ ಸಂಪತ್ತಿನ ಒಡೆಯ ‘ತಾನು’ ಎಂದು ಭಾವಿಸಿದ್ದಾನೆ. ಆದರೆ ಸಂಪತ್ತಿನ ನಿಜವಾದ ಒಡೆಯನು ಸೃಷ್ಟಿಕತ್ರನಾಗಿದ್ದಾನೆ. ಅವನು ಕೆಲವರಿಗೆ ಅದನ್ನು ಪರೀಕ್ಷೆ ಎಂಬ ನೆಲೆಯಲ್ಲಿ ನೀಡಿದ್ದಾನೆ. ಆ ಸಂಪತ್ತನ್ನು ನೀಡುವುದರೊಂದಿಗೆ ಅದರ ಹಕ್ಕುದಾರರನ್ನೂ ಸೃಷ್ಟಿಸಿದ್ದಾನೆ. ಆದ್ದರಿಂದ ಸಂಪತ್ತಿರುವವನು ತನ್ನ ಸಂಪತ್ತನ್ನು ಅದರ ಹಕ್ಕುದಾರರಿಗೆ ನೀಡಿ ಅಲ್ಲಾಹನ ಪರೀಕ್ಷೆಯಲ್ಲಿ ಉತ್ತೀಣ್ರರಾಗಬೇಕಾಗಿದೆ.
ಅಬ್ದುಲ್ಲಾ ಬಿನ್ ಮಸ್ಊದ್ರ(ರ) ಪತಿ ಝೈನಬುಸ್ಸಕೀಫ(ರ) ಪ್ರವಾದಿ ಯವರ(ಸ) ಸಹಾಬಿ ವನಿತೆಯರಲ್ಲಿ ಓವ್ರರಾಗಿದ್ದರು. ಅವರು ಆಥ್ರಿಕವಾಗಿ ಸಬಲರಾಗಿದ್ದರು. ಒಮ್ಮೆ ಅವರು ಪ್ರವಾದಿಯವರ(ಸ) ಪ್ರವಚನವನ್ನು ಆಲಿಸುತ್ತಿದ್ದ ವೇಳೆ ಪ್ರವಾದಿಯವರು(ಸ) ಹೇಳಿದರು, “ಸಹೋದರಿಯರೇ, ನೀವು ನಿಮ್ಮ ಆಭರಣವನ್ನು ನೀಡಿಯಾದರೂ ದಾನ ಧಮ್ರ ನಿವ್ರಹಿಸಬೇಕು.” ಹಾಗೆ ಅವರು ದಾನ ಮಾಡಲು ನಿಧ್ರರಿಸಿದರು. ದಾನ ಧಮ್ರಕ್ಕೆ ಹೆಚ್ಚು ಅಹ್ರರಾದವರಿಗೆ ಅದನ್ನು ನೀಡಬೇಕಷ್ಟೇ. ಹಾಗೆ ಅವರು ಆಲೋಚಿಸುವಾಗ ಅದಕ್ಕೆ ಅತೀ ಹೆಚ್ಚು ಅಹ್ರರು ಅವರ ಪತಿ ಎಂದು ಅವರಿಗೆ ಮನವರಿಕೆಯಾಯಿತು. ಅವರು ಈ ವಿಷಯವನ್ನು ತನ್ನ ಪತಿಗೆ ತಿಳಿಸಿ, “ಪತಿಗೆ ದಾನ ಮಾಡಬಹುದೇ ಎಂದು ನೀವು ಪ್ರವಾದಿಯವರೊಂದಿಗೆ(ಸ) ವಿಚಾರಿಸಿರಿ” ಎಂದು ಹೇಳಿದರು. ಆದರೆ ಅವರ ಪತಿ ಹೋಗಲು ಹಿಂದೇಟು ಹಾಕಿದ್ದರಿಂದ ಝೈನಬ್ರು(ರ) ಖುದ್ದು ಹೋಗಿ ಪ್ರವಾದಿಯವರೊಂದಿಗೆ(ಸ) ವಿಚಾರಿಸಿದರು. ಆಗ ಪ್ರವಾದಿಯವರು(ಸ) ಹೇಳಿದರು, “ಆ ದಾನಕ್ಕೆ ಎರಡು ಪ್ರತಿಫಲವಿದೆ. ಒಂದು ದಾನ ಮಾಡಿದ ಪ್ರತಿಫಲ ಇನ್ನೊಂದು ಕುಟುಂಬ ಸಂಬಂಧವನ್ನು ದೃಢಪಡಿಸಿದ ಪ್ರತಿಫಲ.” ಆದ್ದರಿಂದ ಸಂಬಂಧಿಕರಿಗೆ ದಾನ ಮಾಡಿದರೆ ಇತರರಿಗೆ ದಾನ ಮಾಡಿದ್ದಕ್ಕಿಂತ ಇಮ್ಮಡಿ ಪ್ರತಿಫಲವಿದೆ. ಈ ರೀತಿಯ ದಾನದಿಂದ ಕೌಟುಂಬಿಕ ಸಂಬಂಧವೂ ಸುದೃಢವಾಗುತ್ತದೆ. ಪ್ರತಿಫಲಗಳಿಸಲಿಕ್ಕಾಗಿ ಅಲ್ಲಾಹನು ನಮ್ಮ ಕುಟುಂಬದಲ್ಲೇ ಬಡವರನ್ನು ಸೃಷ್ಟಿಸಿದ್ದಾನೆ. ನಾವು ಅವರಿಗೆ ದಾನ ಮಾಡಿ ಇಮ್ಮಡಿ ಪ್ರತಿಫಲ ಗಳಿಸುವುದರ ಬದಲಾಗಿ ಜನರ ಮಧ್ಯೆ ತೋರಿಕೆಗಾಗಿ ದಾನ ಮಾಡಿ ಶಿಕ್್ರ ಎಂಬ ಮಹಾ ಪಾಪವನ್ನು ವಹಿಸಿಕೊಳ್ಳುವುದೇತಕ್ಕೆ? ಪ್ರತಿಫಲವು ಕೈಗೆಟಕು ವಂತಿದ್ದರೂ ನಾವೇಕೆ ಅದನ್ನು ಗಳಿಸುವ ಸಲುವಾಗಿ ಪ್ರಯತ್ನ ನಡೆಸುತ್ತಿಲ್ಲ? ಇದು ಪ್ರತಿಯೊಬ್ಬರೂ ಆತ್ಮಾವಲೋಕನ ನಡೆಸಬೇಕಾದ ವಿಷಯವಾಗಿz

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ