ಸೋಮವಾರ, ಏಪ್ರಿಲ್ 23, 2012

ಕನ್ನಡಕವನ್ನು ಕಣ್ಣಲ್ಲಿಟ್ಟು ಹುಡುಕಿದರಾದೀತೇ?


ಕುರ್ಆನ್ ಮಾನವ ಕುಲದ ಮಾರ್ಗದರ್ಶನಕ್ಕೆ ಬಂದಂತಹ ಗ್ರಂಥವಾಗಿದೆ. ಕಷ್ಟ ಅನುಭವಿಸುವ ಮನುಷ್ಯರಿಗೆ ಸಾಂತ್ವನದ ಸೆಲೆಯಾಗಿ ಅಂತಿಮ ಪ್ರವಾದಿ ಮುಹಮ್ಮದರವರ(ಸ) ಮೂಲಕ ಅವತೀಣ್ರಗೊಂಡಿತು. ಕುರ್ಆನ್ ಮನುಷ್ಯರ ಎಲ್ಲಾ ಸಮಸ್ಯೆಗಳಿಗೆ ಬೆಳಕು ಚೆಲ್ಲಿದೆ. ಕುರ್ಆನ್ ಕೇವಲ ಮುಸ್ಲಿಮರಿಗಾಗಿ ಅವತೀಣ್ರಗೊಂಡ ಗ್ರಂಥವಲ್ಲ. ಅದು ಸಕಲ ಮಾನವ ಕೋಟಿಗೆ ಮಾರ್ಗದರ್ಶಿಯಾಗಿದೆ. ಕುರ್ಆನ್ ಪಾರಾಯಣ ಮಾಡುವಾಗ ಅದರ ಪ್ರತೀ ಅಕ್ಷರಕ್ಕೂ ಪ್ರತಿಫಲವಿದೆ. ಕುರ್ಆನನ್ನು ಕಲಿತು ಅದರ ಪ್ರಕಾರ ಜೀವನವನ್ನು ಸಂಸ್ಕರಿಸಿಕೊಂಡವರಿಗೆ ನಾಳೆ ಪರಲೋಕದಲ್ಲಿ ಶ್ರೇಷ್ಠ ಪ್ರತಿಫಲವಿದೆ.
ಅಲ್ಲಾಹನ ವಚನಗಳಾದ ಈ ಕುರ್ಆನನ್ನು ಸೂಕ್ತ ರೀತಿಯಲ್ಲಿ ಗೌರವಿಸುವುದು ಕುರ್ಆನಿನೊಂದಿಗಿನ ವಿಶ್ವಾಸಿಗಳ ಪ್ರಥಮ ಹೊಣೆಗಾರಿಕೆಯಾಗಿದೆ. ಆ ಕುರ್ಆನನ್ನು ಓದುವುದು ಮತ್ತು ಅದನ್ನು ಇತರರಿಗೆ ಕಲಿಸುವುದು ಪ್ರತಿಫಲಾಹ್ರ ಕಮ್ರವಾಗಿದೆ. ಪ್ರವಾದಿಯವರು(ಸ) ಹೇಳಿದರು, “ನಿಮ್ಮಲ್ಲಿ ಅತ್ಯಂತ ಶ್ರೇಷ್ಠರು ಕುರ್ಆನನ್ನು ಕಲಿಯುವವರು ಮತ್ತು ಅದನ್ನು ಇತರರಿಗೆ ಕಲಿಸುವವರಾಗಿದ್ದಾರೆ.” ಅಬೂ ಹುರೈರ ವರದಿ ಮಾಡಿರುವ ಒಂದು ಪ್ರವಾದಿ ವಚನ ಹೀಗಿದೆ. “ಯಾರಾದರೂ ಅಲ್ಲಾಹನ ಭವನದಲ್ಲಿ ಒಟ್ಟು ಸೇರಿ ದೈವಿಕ ಗ್ರಂಥವನ್ನು ಪಾರಾಯಣ ಮಾಡಿ  ಚರ್ಚೆ ನಡೆಸಿ ಅಧ್ಯಯನ ನಡೆಸಿದರೆ ಅವರ ಮೇಲೆ ಅಲ್ಲಾಹನ ಕರುಣೆ ಮತ್ತು ಶಾಂತಿಯುವರ್ಷಿಸುವುದು. ಮಲಕ್ ಗಳು  ಅವರನ್ನು ಸುತ್ತುವರಿದಿರುವರು. ಅಲ್ಲಾಹನು ತನ್ನ ಬಳಿ ಇರುವವರೊಂದಿಗೆ ಅವರ ಕುರಿತು ಹೊಗಳುವನು.” ಅದೇ ರೀತಿ ಕುರ್ಆನ್ ಪಾರಾಯಣ ನಡೆಸಲ್ಪಡುವ ಮನೆಗಳಲ್ಲಿ ಅಲ್ಲಾಹನ ಅನುಗ್ರಹಗಳು ತುಂಬುತ್ತವೆ ಮತ್ತು ಪಿಶಾಚಿಗಳು ಅಲ್ಲಿಂದ ಓಡಿ ಹೋಗುತ್ತವೆ ಎಂದು ಬುಖಾರಿ, ಮುಸ್ಲಿಮ್ ಹದೀಸ್ ಗ್ರಂಥಗಳಲ್ಲಿ ಬಂದಿದೆ.
ಕುರ್ಆನ್ ಪಾರಾಯಣದಂತೆ ಅದನ್ನು ಕಂಠಪಾಠ ಮಾಡುವುದು ಸಹ ಶ್ರೇಷ್ಠ ಹಾಗೂ ಪುಣ್ಯದಾಯಕ ಕೆಲಸವಾಗಿದೆ. ಹೃದಯದಲ್ಲಿ ಅಲ್ಪವಾದರೂ ಕುರ್ಆನ್ ಇಲ್ಲದವರನ್ನು ಪ್ರವಾದಿಯವರು(ಸ) ಧ್ವಂಸಗೊಂಡ ಜನವಾಸವಿಲದ ಮನೆಗೆ ಹೋಲಿಸಿದ್ದಾರೆ. ಪ್ರವಾದಿಯವರು(ಸ) ಹೇಳಿದರು. “ಕುರ್ಆನಿನ ಯಾವುದೇ ಅಂಶವು ಹೃದಯದಲ್ಲಿಲ್ಲ್ಲದವರು ಶೂನ್ಯವಾದ ಭವನಕ್ಕೆ ಸಮಾನವಾಗಿದ್ದಾರೆ.” ಜನವಾಸವಲ್ಲದ ಶೂನ್ಯ ಭವನವು ಕಸಕಡ್ಡಿ, ಧೂಳಿನಿಂದ ತುಂಬಿರುತ್ತದೆ. ಅಲ್ಲಿ ಸ್ವಚ್ಛತೆ ಇರುವುದಿಲ್ಲ. ಹಲವು ಜಂತುಗಳು ಅಲ್ಲಿ ಸೇರಿಕೊಳ್ಳುತ್ತವೆ. ಅದೇ ರೀತಿ ಹೃದಯದಲ್ಲಿ ಕೂಡಾ ಕುರ್ಆನ್ ಇಲ್ಲದಿದ್ದರೆ ಕೆಡುಕುಗಳು ಮನೆಮಾಡಿಕೊಳ್ಳುತ್ತವೆ. ಅವನ ಜೀವನವೇ ನೆಮ್ಮದಿ ರಹಿತವಾಗುತ್ತದೆ. ಆದ್ದರಿಂದ ಕುರ್ಆನನ್ನು ಹೃದ್ಯಸ್ತಗೊಳಿಸಬೇಕು. ಅನಸ್ ಬಿನ್ ಮಾಲಿಕ್(ರ) ವರದಿ ಮಾಡುತ್ತಾರೆ, ಪ್ರವಾದಿಯವರು(ಸ) ಹೇಳಿದರು, “ಅಲ್ಲಾಹನಿಗೆ ಪ್ರೀತಿ ಪಾತ್ರರಾದ ಕೆಲವರಿದ್ದಾರೆ.” ಆಗ ಸಹಾಬಿಗಳು ಕೇಳಿದರು, “ಪ್ರವಾದಿಯವರೇ(ಅ) ಅವರು ಯಾರು?” ಆಗ ಪ್ರವಾದಿಯವರು(ಸ) ಹೇಳಿದರು, “ಅವರು ಕುರ್ಆನಿನವರಾಗಿದ್ದಾರೆ. ಅಲ್ಲಾಹನು ಪ್ರತ್ಯೇಕ ಪರಿಗಣನೆ ನೀಡುವುದು ಅವರಿಗಾಗಿದೆ.”
ಕುರ್ಆನನ್ನು ಕೇವಲ ಪಾರಾಯಣ ಮಾಡಿದರೆ ಸಾಲದು. ನಿಯಮ ನಿದ್ರೇಶನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕುರ್ಆನ್ ನೀಡಿರುವ ಆಜ್ಞೆಗಳು, ಆದೇಶಗಳು, ಸಲಹೆಗಳು ಕೇವಲ ಅದರ ಹಾಳೆಗಳಿಗೆ ಮಾತ್ರ ಸೀಮಿತವಾಗಬಾರದು. ಪ್ರವಾದಿಯವರ(ಸ) ಕಾಲದಲ್ಲಿ ಸಹಾಬಿಗಳು ಕುರ್ಆನಿನ ಸೂಕ್ತಗಳನ್ನು ಕಲಿತಾಗ ಅದನ್ನು ಜೀವನದಲ್ಲಿ ಅಳವಡಿಸಿದ ಬಳಿಕ ಮುಂದಿನ ಸೂಕ್ತವನ್ನು ಕಲಿಯುತ್ತಿದ್ದರು. ಆದ್ದರಿಂದಲೇ ಅವರ ಜೀವನವು ಕುರ್ಆನಿನ ಪ್ರಕಾರವಾಗಿತ್ತು. ಅಬ್ದುಲ್ಲಾ ಬಿನ್ ಮಸ್ಊದ್(ರ) ವರದಿ ಮಾಡಿದ್ದಾರೆ. “ನಾವು ಪ್ರವಾದಿವಯವರಿಂದ(ಸ) 10 ಸೂಕ್ತಗಳನ್ನು ಕಲಿತು ಅದರಲ್ಲಿರುವ ಕಮ್ರಗಳನ್ನು ಜೀವನದಲ್ಲಿ ಅಳವಡಿಸಿದ ಬಳಿಕ ಮುಂದೆ ಅವತೀಣ್ರಗೊಳ್ಳುವ ಹತ್ತು ಸೂಕ್ತಗಳನ್ನು ಕಲಿಯುತ್ತಿದ್ದೇವು.” ಇನ್ನೊಮ್ಮೆ ಅವರು ಹೀಗೆ ಹೇಳಿದರು, “ಕುರ್ಆನ್ ಅವತೀಣ್ರಗೊಂಡಿರುವುದು ಜನರು ಅದರನುಸಾರ ಜೀವಿಸುವುದಕ್ಕಾಗಿದೆ. ಆದರೆ ಜನರು ಅದರ ಪಾರಾಯಣವನ್ನೇ ಒಂದು ಕೆಲಸವಾಗಿ ಸ್ವೀಕರಿಸಿದ್ದಾರೆ. ನೀವು ಕುರ್ಆನನ್ನು ಒಂದು ಅಕ್ಷರವೂ ತಪ್ಪಿಲ್ಲದೆ ಪೂರ್ತಿಯಾಗಿ ಓದಿ ಮುಗಿಸುತ್ತೀರಿ. ಆದರೆ ಅದಕ್ಕನುಸಾರವಾಗಿ ಜೀವಿಸಲು ತಯಾರಾಗುತ್ತಿಲ್ಲ.”
ಇದೊಂದು ವಾಸ್ತವಿಕತೆಯಾಗಿದೆ. ಇಂದು ಕುರ್ಆನ್ ಪಾರಾಯಣವನ್ನು ಒಂದು ಕಸುಬಾಗಿ ಸ್ವೀಕರಿಸಿದವರಿದ್ದಾರೆ. ಮರಣ ಹೊಂದಿದ ಶ್ರೀಮಂತರ ಗೋರಿಯ ಮೇಲೆ ನಿರಂತರವಾಗಿ ಹಲವು ದಿನಗಳ ವರಗೆ ಕುರ್ಅನ್ ಪಾರಾಯಣ ಮಾಡಿಸಲಾಗುತ್ತದೆ. ಇಂತಹ ಪಾರಾಯಣಕ್ಕಾಗಿಯೇ ಕಾದು ನಿಂತ ಹಲವರಿದ್ದಾರೆ. ಇವರ ಕಸುಬು ಕುರ್ಆನ್ ಪಾರಾಯಣವಾಗಿರುತ್ತದೆ. ಹೀಗೆ ಕುರ್ಆನ್ ಪಾರಾಯಣ ನಡೆಸಿ ಐಹಿಕ ಪ್ರತಿಫಲ ಲಭಿಸಬಹುದೇ ಹೊರತು ಪರಲೋಕದಲ್ಲಿ ಪ್ರತಿಫಲವು ಶೂನ್ಯವಾಗಿರುತ್ತದೆ.
ಕುರ್ಆನ್ ಸ್ವತಃ ಕಲಿತು ಇತರರನ್ನು ಕಲಿಯಲು ಪ್ರೇರೇಪಿಸಬೇಕು. ಹೆತ್ತವರು ತಮ್ಮ ಮಕ್ಕಳಿಗೆ ಕೇವಲ ಐಹಿಕ ಲಾಭಕ್ಕಾಗಿ ಶಿಕ್ಷಣ ನೀಡಬಾರದು. ಧಾಮ್ರಿಕ ಮಹತ್ವ ನೀಡಬೇಕು. ಧಾಮ್ರಿಕತೆಯ ಗಂಧಗಾಳಿಯೂ ಸೋಕದೆ ಕೇವಲ ಭೌತಿಕ ಶಿಕ್ಷಣ ಪಡೆದವರ ಸ್ಥಿತಿಯನ್ನೊಮ್ಮೆ ಅವಲೋಕಿಸಿದರೆ ಧಾಮ್ರಿಕ ಶಿಕ್ಷಣದ ಅನಿವಾಯ್ರತೆಯು ಮನದಟ್ಟಾಗಬಹುದು. ಇಂದು ವೈದ್ಯನು ರೋಗಿಗಳ ಕಿಡ್ನಿ ತೆಗೆದು ವ್ಯಾಪಾರ ಮಾಡುವ ಘಟನೆಗಳು ನಡೆಯುತ್ತವೆ. ಅಧ್ಯಾಪಕನು ವಿದ್ಯಾಥ್ರಿನಿಯರಿಗೆ ಶಾರೀರಿಕ ಕಿರುಕುಳ ನೀಡುವ ಕೃತ್ಯಗಳು ನಡೆಯುತ್ತವೆ. ವಿದ್ಯಾವಂತರಾಗಿ ದೊಡ್ಡ ದೊಡ್ಡ ನೌಕರಿಯಲ್ಲಿರುವವರು ತಮ್ಮ ಮುದಿ ತಂದೆ-ತಾಯಿಗಳನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಇವೆಲ್ಲವೂ ನಡೆಯುತ್ತಿರುವುದು ಧಾಮ್ರಿಕ ಪ್ರಜ್ಞೆಯ ಕೊರತೆಯಿಂದಾಗಿದೆ. ಧಾಮ್ರಿಕ ಶಿಕ್ಷಣದ ಬಲವಿಲ್ಲದೆ ಕೇವಲ ಭೌತಿಕ ಶಿಕ್ಷಣವನ್ನು ಪಡೆದುದರ ಫಲವಾಗಿದೆ.
ಹೆತ್ತವರು ತಮ್ಮ ಮಕ್ಕಳಿಗೆ ಕುರ್ಆನನ್ನು ಕಲಿಸಬೇಕು. ಅದರ ಪ್ರಕಾರ ಜೀವಿಸಲು ಪ್ರಾಯೋಗಿಕವಾಗಿ ತೋರಿಸಬೇಕು. ಮಕ್ಕಳು ಕುರ್ಆನ್ ಕಲಿತರೆ ಅದರ ಪ್ರತಿಫಲವು ಕೇವಲ ಮಕ್ಕಳಿಗೆ ಮಾತ್ರ ಸಿಗುವುದಲ್ಲ. ಬದಲಾಗಿ ಹೆತ್ತವರಿಗೂ ಸಿಗುತ್ತದೆ. ಬುರೈದಾ(ರ) ವರದಿ ಮಾಡಿದ್ದಾರೆ. ಪ್ರವಾದಿಯವರು(ಸ) ಹೇಳಿದರು, “ಓರ್ವ ನು ಕುರ್ಆನನ್ನು ಓದಿ ಕಲಿತು ಅದರನುಸಾರ ಜೀವನ ನಡೆಸಿದರೆ ಅಂತ್ಯದಿನದಲ್ಲಿ ಸೂರ್ಯ ನಂತೆ ಪ್ರಕಾಶಿಸುವ ಒಂದು ಕಿರೀಟವನ್ನು ಅವನಿಗೆ ತೊಡಿಸಲಾಗುವುದು. ಅವನ ಹೆತ್ತವರಿಗೆ ಎರಡು ಜೋಡಿ ವಸ್ತ್ರವನ್ನು ತೊಡಿಸಲಾಗುವುದು. ಐಹಿಕ ಲೋಕವನ್ನು ಪೂರ್ತಿಯಾಗಿ ತೆಗೆದರೂ ಅವುಗಳಿಗೆ ಸಮಾನವಾಗಲಿಕ್ಕಿಲ್ಲ. ಆಗ ಅವರು ಕೇಳುವರು. “ನಮಗೆ ಈ ವಸ್ತ್ರವನ್ನು ಯಾಕೆ ತೊಡಿಸಲಾಯಿತು.” ಆಗ ಅವರಲ್ಲಿ ಹೇಳಲಾಗುವುದು. “ನಿಮ್ಮ ಮಕ್ಕಳು ಕುರ್ಆನ್ ಕಲಿತ ಕಾರಣದಿಂದ.”
ಅನಸ್ ಬಿನ್ ಮಾಲಿಕ್(ರ) ವರದಿ ಮಾಡಿರುವ ಇನ್ನೊಂದು ಪ್ರವಾದಿ ವಚನ ಹೀಗಿದೆ. ಪ್ರವಾದಿಯವರು(ಸ) ಹೇಳಿದರು, “ಓವ್ರನು ತನ್ನ ಮಕ್ಕಳಿಗೆ ಕುರ್ಆನನ್ನು ಓದಲು ಕಲಿಸಿದರೆ ಅವನ ಕಳೆದ ಹಾಗೂ ಬರಲಿಕ್ಕಿರುವ ಎಲ್ಲಾ ಪಾಪಗಳ್ನು ಅಲ್ಲಾಹನು ಕ್ಷಮಿಸುವನು. ಇನ್ನು ಓವ್ರನು ತನ್ನ ಮಕ್ಕಳಿಗೆ ಕುರ್ಆನನ್ನು ಕಂಠಪಾಠ ಮಾಡಿಸುವುದಾದರೆ ಅಂತ್ಯದಿನದಲ್ಲಿ ಅವನನ್ನು ಹುಣ್ಣಿಮೆ ಚಂದ್ರನಂತೆ ಎಬ್ಬಿಸಲಾಗುತ್ತದೆ. ಬಳಿಕ ಅವನ ಮಗನೊಂದಿಗೆ ಹೇಳಲಾಗುವುದು. “ನೀನು ಕುರ್ಆನ್ ಪಾರಾಯಣ ಮಾಡು.” ಪ್ರತೀ ಸೂಕ್ತವು ಓದಿದಂತೆ ಆ ತಂದೆಯ ಪದವಿಯನ್ನು ಉನ್ನತಿಗೇರಿಸುತ್ತಿರುವನು. ಹಾಗೆ ಅವನು ಕುರ್ಆನನ್ನು ಪೂರ್ತಿಯಾಗಿ ಪಾರಾಯಣ ಮಾಡುವವರೆಗೆ ಅದು ಮುಂದುವರಿಯುವುದು.
ಅಲ್ಲಾಹನು ಇಷ್ಟೆಲ್ಲಾ ಅನುಗ್ರಹಗಳನ್ನು ವಿೂಸಲಿಟ್ಟಿರುವಾಗ ಇಂದು ಕುರ್ಆನಿನ ಕುರಿತು ಅನಾಸ್ಥೆ ತೋರಲಾಗುತ್ತದೆ. ಐಹಿಕ ಜೀವನದ ಗಳಿಕೆಗಾಗಿರುವ ನಾಗಾಲೋಟದಲ್ಲಿ ಕುರ್ಆನ್ ಮೂಲೆಗುಂಪಾಗುತ್ತಿದೆ. ಎಲ್ಲರಿಗೂ ಮಾರ್ಗದರ್ಶಿಯಾಗಿರುವ ಕುರ್ಆನನ್ನು ಬದಿಗಿರಿಸಿ ಸ್ವಂತ ಇಚ್ಛೆಯಂತೆ ಮುಂದೆ ಸಾಗಿದರೆ ಅವನೆಂದೂ ಯಶಸ್ವಿಯಾಗಲಾರ. ಲೌಕಿಕತೆಯ ಬಿಸಿಲು ಕುದುರೆಯೇರಿ ಮುಂದುವರಿಯುವಾಗ ಕುರ್ಆನಿನ ಆಜ್ಞೆಗಳು, ಆದೇಶಗಳು, ಸಲಹೆಗಳು, ಉದ್ಬೋಧೆಗಳೆಲ್ಲಾ ಅವನಿಗೆ ವಿರುದ್ಧವಾಗಿ ಗೋಚರವಾಗುತ್ತದೆ. ಹಾಗೆ ಅವನು ಕುರ್ಆನಿನ ಸಹವಾಸವೇ ಬೇಡ ಎಂದು  ತೀರ್ಮಾನಿಸಿ  ಬಿಟ್ಟಿದ್ದಾನೆ.
ಹಿಂದೆಲ್ಲಾ ಮಗ್ರಿಬ್ನ ವೇಳೆಯಲ್ಲಿ ಎಲ್ಲಾ ಮನೆಗಳಿಂದಲು ಕುರ್ಆನ್ ಪಾರಾಯಣ ಕೇಳಿಬರುತ್ತಿತ್ತು. ಆದರೆ ಇಂದು ಆ ಸ್ಥಾನವನ್ನು ಟಿ.ವಿ. ಚಾನೆಲ್ಗಳ ಹಲವು ಧಾರಾವಾಹಿಗಳು ಆಕ್ರಮಿಸಿಕೊಂಡಿವೆ. ಧಾರಾವಾಹಿಗಳು ಆಕ್ರಮಿಸಿಕೊಂಡಿವೆ ಎಂದು ಹೇಳುವುದಕ್ಕಿಂತ ಅವುಗಳ ಮನೆಗೆ ಪ್ರವೇಶಿಸಲು ನಾವು ಸೌಕರ್ಯ  ಒದಗಿಸಿದ್ದೇವೆ ಎಂದು ಹೇಳುವುದೇ ಸೂಕ್ತವಾಗಿರುತ್ತದೆ.
ಮಹಾ ಕವಿ ಅಲ್ಲಾಮಾ ಇಕ್ಬಾಲ್ ಹಾಡಿದರು “ಒಂದು ಕಾಲದಲ್ಲಿ ನಾವು ಮುಸ್ಲಿಮರು ಎಂದು ಹೇಳಿ ಹೆಮ್ಮೆ ಪಟ್ಟು ಕೊಳ್ಳುತ್ತಿದ್ದೇವು. ಆದರೆ ಇಂದು ನಾವು ಕುರ್ಆನನ್ನು ಉಪೇಕ್ಷಿಸಿ ಎಲ್ಲರ ಮುಂದೆ ನಿಕೃಷ್ಟರಾಗಿದ್ದೇವೆ.” ಇದು ಇಂದಿನ ಕಾಲಕ್ಕೆ ಅತ್ಯಂತ ಸೂಕ್ತವೆನಿಸಿರುವ ಅಲ್ಲಾಮಾ ಇಕ್ಬಾಲ್ರ ದೂರ ದೃಷ್ಟಿಯ ಫಲಶ್ರುತಿಯಾಗಿದೆ. ಇಂದು ನಾವು ಕುರ್ಆನನನ್ನು ಬದಿಗಿರಿಸಿರುವುದರಿಂದ ಇತರರ ಮುಂದೆ ತಲೆ ತಗ್ಗಿಸುವ ಪರಿಸ್ಥಿತಿ ಬಂದೊದಗಿದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಅಪರಾಧ ಕೃತ್ಯಗಳ ಕಡೆಗೆ ಕಣ್ಣೋಡಿಸಿದರೆ ಅದರ ಭೀಕರತೆಯು ತಿಳಿದು ಬರುತ್ತದೆ. ಕನ್ನಡಕವನ್ನು ಕಣ್ಣಲ್ಲಿಟ್ಟು ಹುಡುಕಿದಂತೆ ಇಂದು ನಾವು ಕುರ್ಆನನ್ನು ಕೈಯಲ್ಲಿಡಿದು ಪರಿಹಾರಕ್ಕಾಗಿ ಹುಡುಕುತ್ತಿದ್ದೇವೆ. ಸಮಸ್ಯೆಗಳ ಪರಿಹಾರಕ್ಕಾಗಿ ಕುರ್ಆನ್ ನಿದ್ರೇಶಿಸಿರುವ ಮಾಗ್ರವನ್ನು ವಿೂರಿ ಅಡ್ಡ ಮಾಗ್ರವನ್ನು ಹಿಡಿಯುತ್ತಿದ್ದೇವೆ. ಮನಃಶಾಂತಿಗಾಗಿ ಹಲವು ನಕಲಿ ಬಾಬಾಗಳ ಹಾಗೂ ಅವರು ನೀಡುವ ತಾಯಿತಗಳ ವೊರೆಹೋಗುತ್ತಿದ್ದೇವೆ. ಸಮಸ್ಯೆಗಳ ಪರಿಹಾರಕ್ಕಾಗಿ ಅವರು ಉಗುಳಿದ ನೀರಿಗೆ ಮುಗಿಬೀಳುವಾಗ ಹರಾಜಾಗುತ್ತಿರುವುದು ಇಸ್ಲಾಮಿನ ಮಾನವಾಗಿದೆ ಎಂಬ ಸಾಮಾನ್ಯ ಪ್ರಜ್ಞೆ ಯು ನಮ್ಮಲ್ಲಿ ಜಾಗೃತವಾಗಿರಬೇಕು.
ಎಲ್ಲದರಲ್ಲ್ಲೂ ಶ್ರೇಷ್ಠವಾಗಿರುವ ಕುರ್ಆನ್ ನಮ್ಮ ಕೈಯಲ್ಲಿರುವಾಗ ಆಧುನಿಕತೆಯ ಅನಾಚಾರಗಳಿಗೂ ಮೂಢನಂಬಿಕೆಗಳಿಗೂ ಕೊಚ್ಚಿ ಹೋಗಬಾರದು. ನಮ್ಮ ಆದಶ್ರಗಳನ್ನು ಇತರರ ಮುಂದೆ ಪಣಕ್ಕಿಟ್ಟು ಅತ್ಯಂತ ನಿಕೃಷ್ಟರಾಗಿ ಬಾಳಬಾರದು. ಕುರ್ಆನಿನ ಪ್ರಕಾರ ಪ್ರವಾದಿಯವರು(ಸ) ಜೀವಿಸಿ ತೋರಿಸಿದ ಪ್ರಕಾರ ಜೀವಿಸಿ ಎಲ್ಲರ ಮುಂದೆ ತಲೆ ಎತ್ತಿ ನಿಲ್ಲುವಂತಾಗಬೇಕು. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

1 ಕಾಮೆಂಟ್‌: